Saturday, 26th October 2024

ಮಳಖೇಡದಲ್ಲಿ ಜಯತೀರ್ಥರ ರಥೋತ್ಸವ

ಕಾಗಿಣ ತಟದಲ್ಲಿ ಮೊಳಗಿದ ಜಯಘೋಷ

ಕಲಬುರಗಿ: ಜಯತಿರ್ಥರ ಮೂಲವೃಂದಾವನ ಸನ್ನಿಧಾನವಾದ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ಶ್ರೀ ಜಯತೀರ್ಥರ ಆರಾಧನೆ ನಿಮಿತ್ತ ಜೋಡು ರತೋತ್ಸವ ಸಂಭ್ರಮದಿಂದ ಸೋಮವಾರ ಜರುಗಿತು.

ಟೀಕಾಚಾರ್ಯರ ಮಧ್ಯಾರಾದನೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆದವು. ಬೆಳಗ್ಗೆ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರಿಂದ ವಿದ್ಯಾರ್ಥಿ ಗಳಿಗೆ ಸುಧಾ ಪಾಠ, ಮುದ್ರಾಧಾರಣೆ, ರಥಾಂಗ ಹೋಮ, ನಂತರ ಶ್ರೀಗಳಿಂದ ಜೋಡು ರಥೋತ್ಸವಕ್ಕೆ ಚಾಲನೆ ನೀಡಿದರು.

ನಂತರ ಅಪಾರ ಭಕ್ತ ಸಮೂಹ ನಡುವೆ ಸಂಭ್ರಮದಿಂದ ರಥೋತ್ಸವ ನೆರವೇ ರಿತು. ನಂತರ ಶ್ರೀಗಳಿಂದ ಶ್ರೀ ದಿಗ್ವಿಜಯ ಮೂಲ ರಾಮದೆವರ ಪೂಜೆ ನಡೆಯಿತು. ನಂತರ ಆಗಮಿಸಿದ ಎಲ್ಲ ಭಕ್ತರಿಗೂ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

Read This

ದೆಹಲಿ ಹೈಕೋರ್ಟ್ ಗೆ ಅಗ್ನಿಪಥ್ ಅರ್ಜಿ ವಿಚಾರಣೆ ಹೊಣೆ

http://vishwavani.news/agnipath-plea-hand-over-to-delhi-court/

ಮುಂಬಯಿಯ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ಪಂ.ವಿದ್ಯಾಸಿಂಹಾಚಾರ್ಯ ಮಾಹುಲಿ, ಮಠದ ವ್ಯವಸ್ಥಾಪಕೊಂ. ವೆಂಕಣ್ಣಾಚಾರ್ಯ ಪೂಜಾರ, ಪಂ.ಡಾ. ಗುರುಮಧ್ವಾ ಚಾರ್ಯ ನವಲಿ, ಪಂ. ಗೋಪಾಲಾಚಾರ್ಯ ಅಕಮಂಚಿ, ಪಂ. ಪ್ರಸನ್ನಾಚಾರ್ಯ ಜೋಶಿ, ಮಠಾಧಿಕಾರಿ ರಾಮಾಚಾರ್ಯ ಘಂಟಿ, ಕಮಲಾಕರ‌ ಕುಲಕರ್ಣಿ, ವೆಂಕಟೇಶಾಚಾರ್ಯ ಕಡಿವಾಳ, ಎಬಿಬಿಎಂಎಸ್ ಅಧ್ಯಕ್ಷ ರವಿ ಲಾತೂರಕರ, ಮನೋಹರ ಜೋಷಿ,ಬಾಲಕೃಷ್ಣ ಲಾತೂರಕರ ಅಶೋಕ ಕುಲಕರ್ಣಿ ಗೌರಕರ್, ಗುಂಡಾಚಾರ್ಯ ನರಬೋಳಿ, ಶ್ರೀನಿವಾಸಾಚಾರ್ಯ ನೆಲೋಗಿ, ಸೇರಿ ಅಪಾರ ಭಕ್ತರು ಪಾಲ್ಗೊಂಡುದ್ದರು.