ಮುದ್ದೇಬಿಹಾಳ: ಪಟ್ಟಣದ ಎಪಿಎಂಸಿಯಲ್ಲಿರುವ ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ಸಭಾ ಭವನದಲ್ಲಿ ಜು.29ರಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ತೀರ್ಮಾನಿಸಿದೆ.
Read This
ದೆಹಲಿ ಹೈಕೋರ್ಟ್ ಗೆ ಅಗ್ನಿಪಥ್ ಅರ್ಜಿ ವಿಚಾರಣೆ ಹೊಣೆ
http://vishwavani.news/agnipath-plea-hand-over-to-delhi-court/
ಈ ಕುರಿತು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಂಘದ ಅಧ್ಯಕ್ಷ ಮುತ್ತು ವಡವಡಗಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸ ಲಾಯಿತು.
ನಿತ್ಯ ಬೆಳಿಗ್ಗೆ ಮನೆ ಮನೆಗೆ ತೆರಳಿ ದಿನಪತ್ರಿಕೆಗಳನ್ನು ಹಂಚುವ ವಿತರಕರು, ಹುಡುಗ ರನ್ನು ವಿಶೇಷವಾಗಿ ಸನ್ಮಾನಿಸಲು, ಸಂಘದ ಸದಸ್ಯರಿಗೆ 2022-23ನೇ ಸಾಲಿನ ಗುರ್ತಿನ ಕಾರ್ಡ ವಿತರಿಸಲು, ನೂತನ ಪದಾಧಿಕಾರಿಗಳ ಪದಗ್ರಹಣ, ಪತ್ರಿಕೋದ್ಯಮದ ಕುರಿತು ವಿಶೇಷ ಉಪನ್ಯಾಸ, ತಾಲೂಕಿನ ಅತ್ಯುತ್ತಮ ಪತ್ರಕರ್ತರೊಬ್ಬರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲು, ಸಂಘದ ಜಿಲ್ಲಾ ಘಟಕಕ್ಕೆ ನೂತನವಾಗಿ ಆಯ್ಕೆಗೊಂಡಿರುವ ಪದಾಧಿಕಾರಿಗಳನ್ನು ಗೌರವಿಸಲು ಸಭೆಯಲ್ಲಿ ಅಂತಿಮಗೊಳಿಸಲಾಯಿತು.
ಈ ಕುರಿತು ಉದ್ಘಾಟಕರು, ಮುಖ್ಯ ಅತಿಥಿಗಳು, ವಿಶೇಷ ಆಹ್ವಾನಿತರು, ಉಪನ್ಯಾಸಕ ರನ್ನು ಆಯ್ಕೆ ಮಾಡುವ ಅಧಿಕಾರವನ್ನು ಸಭೆಯು ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ವಡವಡಗಿ ಅವರಿಗೆ ನೀಡಲಾಯಿತು.
ಉಪಾಧ್ಯಕ್ಷ ಸಿದ್ದು ಚಲವಾದಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ನಂದೆಪ್ಪನರ್, ಖಜಾಂಚಿ ಲಾಡ್ಲೇಮಶ್ಯಾಕ ನದಾಫ, ಕಾರ್ಯದರ್ಶಿ ಕಾಶಿನಾಥ ಬಿರಾದಾರ, ಸದಸ್ಯರಾದ ಶಿವಕುಮಾರ ಶಾರದಳ್ಳಿ, ಮಹಿಬೂಬ ಹಳ್ಳೂರ, ಪರಶುರಾಮ ಕೊಣ್ಣೂರ, ಬಂದೇನವಾಜ ಕುಮಸಿ, ಮುತ್ತು ಬಿರಗೊಂಡ, ಎಚ್.ಬಿ.ಟಕ್ಕಳಕಿ, ಬಸವರಾಜ ಕುಂಬಾರ, ಬಸವರಾಜ ಹುಲಗಣ್ಣಿ, ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ವಡವಡಗಿ ಮತ್ತಿತರರು ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.