ಕೊಲ್ಹಾರ: ತಾಲ್ಲೂಕ ವ್ಯಾಪ್ತಿಯಲ್ಲಿ ಬರುವ ತೆಲಗಿ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆ ಜರುಗಿತು.
ಒಟ್ಟು ೧೩ ಸದಸ್ಯ ಬಲವನ್ನು ಹೊಂದಿರುವ ತೆಲಗಿ ಗ್ರಾಮ ಪಂಚಾಯತ್ ಎರಡನೆಯ ಅವದಿಯ ಚುನಾವಣಾ ಪ್ರಕ್ರಿಯೆಯಲ್ಲಿ ೯ ಜನ ಸದಸ್ಯರು ಭಾಗವಹಿಸಿದ್ದರು.
ತೀವ್ರ ಕುತೂಹಲ ಕೆರಳಸಿದ್ದ ಚುನಾವಣೆಯಲ್ಲಿ ೪ ಜನ ಸದಸ್ಯರು ಗೈರು ಆಗುವ ಮೂಲಕ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದರು. ಅಧ್ಯಕ್ಷರಾಗಿ ಮಮತಾಜ ಗೌಂಡಿ, ಉಪಾಧ್ಯಕ್ಷರಾಗಿ ಲಕ್ಷ್ಮೀಬಾಯಿ ಬಂಡಿವಡ್ಡರ್ ಅವಿರೋಧವಾಗಿ ಆಯ್ಕೆ ಯಾದರು.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧ ಆಯ್ಕೆ ಎಂದು ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ತಾಲ್ಲೂಕ ಪಂಚಾ ಯತ್ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಎಸ್ ಪಠಾಣ ಘೋಷಣೆ ಮಾಡಿದರು.
ಬೆಂಬಲಿರ ವಿಜಯೋತ್ಸವ: ಅಧ್ಯಕ್ಷ, ಉಪಾಧ್ಯಕ್ಷರ ಅಧಿಕೃತ ಘೋಷಣೆ ಹೊರ ಬಿಳುತ್ತಿದ್ದಂತೆ ಬೆಂಬಲಿಗರು ಪರಸ್ಪರ ಗುಲಾಲು ಎರಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರು ಮಾದ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಾ ಸರ್ವ ಸದಸ್ಯರನ್ನು ವಿಶ್ವಸಕ್ಕೆ ತೆಗೆದುಕೊಂಡು ಗ್ರಾಮದ ಹಿತವನ್ನು ಗಮನದಲ್ಲಿಟ್ಟುಕೊಂಡು ಶಾಸಕ ಶಿವಾನಂದ ಪಾಟೀಲರ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತವನ್ನು ನಡೆಸುತ್ತೆವೆ ಎಂದು ಹೇಳಿದರು.