Thursday, 12th December 2024

ಸಸಿ ನೆಡುವ ಮೂಲಕ ವಿನೂತನ ಪ್ರತಿಭಟನೆ

ಇಂಡಿ: ಪಟ್ಟಣದ ರಸ್ತೆಗಳು ಸಂಪೂರ್ಣ ಹಾಳಾಗಿರುವುದರಿಂದ ಇಂಡಿ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ವಿಜಯಪೂರ ಮುಖ್ಯ ರಸ್ತೆ ತಗ್ಗು ಬಿದ್ದ ರಸ್ತೆಯ ಮೇಲೆ ಸಸಿಗಳನ್ನು ನೆಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು.

ಈ ಸಂದರ್ಬದಲ್ಲಿ ಶ್ರೀಧರ ಕ್ಷತ್ರಿ ಮಾತನಾಡಿ ಕಳೆದ ಮೂರುನಾಲ್ಕು ವರ್ಷಗಳಿಂದ ಪಟ್ಟಣದ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಸ್ಥಳೀಯ ಪುರಸಭೆಯಾಗಲಿ, ಪಿಡಬ್ಲೊö್ಯÃಡಿ ಇಲಾಖೆಯಿಂದಾಗಲಿ ಸಣ್ಣಪುಟ್ಟ ರೀಪೇರಿ ಮಾಡಿ ವಾಹನಗಳ ಅಲೇದಾಟಕ್ಕೆ ಅನುಕೂಲ ಮಾಡಿಕೊಂಡದೆ ತಾಲೂಕಿನ ಅಧಿಕಾರಿಗಳು ಜಾಣ ಕುರುಡರಂತೆ ಕುಳಿತಿರುವುದು ವಿಷಾದನೀಯ ಸಂಗತಿ.

ಪಟ್ಟಣದ ಸಿಂದಗಿ ರಸ್ತೆ, ವಿಜಯಪೂರ ರಸ್ತೆ, ಅಗರಖೇಡ ರಸ್ತೆ, ಸ್ಟೇಶನ್ ರಸ್ತೆ ಪ್ರಮುಖ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿರುವುದರಿಂದ ವಾಹನಗಳ ಅಪಘಾತಗಳು ದೀನೆ ದೀನೆ ಹೆಚ್ಚುತ್ತಿವೆ.

ಮಳೆಗಾಲದಲ್ಲಿ ವಿಜಯಪೂರ ರಸ್ತೆಯ ಡಾ.ಕೋಳೆಕರ್ ಬಿಲ್ಡಿಂಗ್ ಮುಂಭಾಗ ಭಾರಿ ಗಾತ್ರದ ಗುಂಡಿ ಬಿದ್ದಿರುವುರಿಂದ ಚರಂಡಿ ನೀರು ಮಳೆ ನೀರು ಎರಡೂ ಸೇರಿ ನದಿ ಹರಿದಂತೆ ಹರಿದು ಪಾದಾಚಾರಿಗಳಿಗೆ ವಾಹನಗಳಿಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಕೂಡಲೆ ಸಂಬAದಿಸಿದ ಅಧಿಕಾರಿಗಳು ರಸ್ತೆ ಸುಧಾರಣೆ ಕ್ರಮ ಕೈಗೊಳ್ಳ ಬೇಕು ಒಂದು ವೇಳೆ ಮಾಡದಿದ್ದರೆ ರಸ್ತೆಯ ತಡೆ ಮಾಡಿ ಉಗ್ರಪ್ರತಿಭಟನೆ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರವೀಣ ಮಠ, ನಾಗೇಶ ಸಿಂಧೆ,ವಿನೋದ ಪವಾರ, ಅಖೀಲ ಬಂಕೂರ, ಶಿವಾಜಿ ಸಿಂಧೆ, ಅಕ್ಷಯ ಹಿಬಾರೆ, ಮುತ್ತು ಸಿಂದಗಿ, ಶ್ರೀಶೈಲ ಬೋಡಿ, ಅಕ್ಷಯ ಶಿವೂರ, ನಿಲೇಶ ಮಾನೆ, ಗಿರೀಶ ಪಾಟೀಲ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.