ಗದಗ:
ಗುಜರಾತಿನಿಂದ ಜಿಲ್ಲೆಗೆ ಆಗಮಿಸಿರುವ ಒಬ್ಬರಲ್ಲಿ ಪಿ- 905, 36 ವಯಸ್ಸಿನ ಪುರುಷ ಹಾಗೂ ಗಂಜಿ ಬಸವೇಶ್ವರ ವೃತ್ತ ಪ್ರದೇಶದ ಪಿ-514 ಪ್ರಕರಣದ ದ್ವಿತೀಯ ಸಂರ್ಪಕದ ಇಬ್ಬರಿಗೆ ಪಿ-912, 61 ವರ್ಷದ ಪುರುಷ ಪಿ-913, 62 ವರ್ಷದ ಪುರುಷ ಕೋವಿಡ್ ಸೋಂಕು ದೃಢಪಟ್ಟ ವರದಿಯಾಗಿದೆ.
ಪಿ-912 ಪ್ರಕರಣದ 25 ಹಾಗೂ ಪಿ-913 ಪ್ರಕರಣದ 2 ಪ್ರಥಮ ಸಂಪರ್ಕದ ವ್ಯಕ್ತಿಗಳನ್ನು ಪತ್ತೆ ಮಾಡಿ ಅವರನ್ನು ಪ್ರತ್ಯೇಕ ನಿಗಾದಲ್ಲಿರಿಸಿದೆ. ಇನ್ನುಳಿದ ಸಂಪರ್ಕಿತರ ಪತ್ತೆ ಕಾರ್ಯ ನಡೆದಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಗುಜರಾತಿನ ಪಾಲನಪೂರ ದಿಂದ 14 ಹಾಗೂ ಅಹಮ್ಮದಾಬಾದದಿಂದ 2 ಆಗಮಿಸಿದ ಒಟ್ಟು 16 ವ್ಯಕ್ತಿಗಳನ್ನು ಜಿಲ್ಲೆಯ ಆಗಮನ ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡು ಸಾಂಸ್ಥಿಕ ಕೊರೊಂಟೈನ್ಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಅವರೆಲ್ಲರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಅವರಲ್ಲಿ ಒರ್ವರಿಗೆ ಸೋಂಕು ದೃಢಪಟ್ಟಿದೆ.
ಪಿ-514 ಪ್ರಕರಣದ ದ್ವಿತೀಯ ಸಂರ್ಪಕದ ಸೋಂಕು ದೃಢಪಟ್ಟ ಇಬ್ಬರು ಸೇರಿದಂತೆ ಮೂವರನ್ನು ಗದಗ ನಿಗದಿತ ಕೊವಿಡ್-19 ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗದಗ ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ ಪಾಸಿಟಿವ್ ಹೊಂದಿರುವ 8 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಒರ್ವರು ಮೃತಪಟ್ಟಿದ್ದು ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.