ಇಂಡಿ : ಮಿರಗಿ ಗ್ರಾಮದಲ್ಲಿ ಜನಿಸಿ ಪ್ರಪಂಚದ ಜನರ ಉದ್ದಾರ ಮಾಡಿದ ಯಲ್ಲಾಲಿಂಗ ಶ್ರೀಗಳು, ಸಂಸಾರದಲ್ಲಿ ಸಾಗಿ ಬಂದು ಪರಮಾತ್ಮ ಕಂಡುಕೊ೦ಡ ಯೋಗಿ ಪುರುಷ ಯಲ್ಲಾಲಿಂಗ ಶ್ರೀಗಳು, ಅವರ ಕರುಣೆ, ಆಶೀರ್ವಾದ ಈ ಭಾಗದ ಜನರ ಮೇಲೆ ಇರಲಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಗುರುವಾರ ತಾಲೂಕಿನ ಮಿರಗಿ ಗ್ರಾಮದಲ್ಲಿ ಹಮ್ಮಿಕೊಂಡ ಶ್ರೀ ಯಲ್ಲಾಲಿಂಗ ಮಹಾಪ್ರಭುಗಳ ೧೩೭ನೇ ಜಯಂತೋ ತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಯಲ್ಲಾಲಿಂಗ ಶ್ರೀಗಳು ಕರ್ನಾಟಕ ರಾಜ್ಯದ ಕಟ್ಟ ಕಡೆಯ ಹಳ್ಳಿಯ ಜನಿಸಿ ತಮ್ಮ ಪರಮಾ ತ್ಮನ ಶಕ್ತಿಯಿಂದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ಗೋವಾ ರಾಜ್ಯಗಳ ಉದ್ದಗಲಕ್ಕೂ ಭಕ್ತಸಮೂಹ ಹೊಂದಿ ನಾಡಿನ ಉದ್ದಾರ ಮಾಡಿದ್ದಾರೆ ಎಂದು ಹೇಳಿದರು.
ಮಿರಗಿ ಗ್ರಾಮ ಶ್ರೀ ಸಂಗಮೇಶ್ವರ ನೆಲಸಿದ ಪುಣ್ಯ ಸ್ಥಳ ,ಅಣ್ಣ ಬಸವಣ್ಣನವರ ಆಚಾರ, ವಿಚಾರ ಮೈಗೂಡಿಸಿಕೊಂಡು ಬದುಕು ಸಾಗಿಸುವ ಇಲ್ಲಿನ ಜನರು ಹೃದಯ ವಿಶಾಲತೆ ಹೊಂದಿದ್ದಾರೆ.ಧರ್ಮ,ನ್ಯಾಯ, ನಿತಿ ಉಳಿದಿದ್ದರೆ ಅದು ತಾಯಂದಿರಲ್ಲಿ ಉಳಿದಿದೆ. ಇಂದಿನ ಅಧುನಿಕ ಭರಾಟೆಯಲ್ಲಿ ಧರ್ಮ ನಿಶಿಸಿ ಹೋಗುತ್ತಿರುವ ಇಂದಿನ ದಿನದಲ್ಲಿ ಧರ್ಮ ಜಾಗ್ರತಿ ಮೂಡಿಸುವ ಕೆಲಸ ಸದಾ ನಡೆಯುತ್ತಿರುವುದು ಶ್ಲಾಘನೀಯ.ಮಿರಗಿ ಗ್ರಾಮ ತನ್ನದೆ ಆದ ಇತಿಹಾಸ ಪರಂಪರೆ ಹೊಂದಿದ ಗ್ರಾಮವಾಗಿದೆ.
ಸಂಗಮೇಶ್ವರ ನೆಲೆಸಿದ ಸ್ಥಳ,ಯಲ್ಲಾಲಿಂಗ ಮಹಾರಾಜರು ಜನಿಸಿದ ಪುಣ್ಯಗ್ರಾಮ ಮಿರಗಿ ಗ್ರಾಮಕ್ಕೆ ನಾದ ಗ್ರಾಮದಿಂದ ಮಿರಗಿ ಗ್ರಾಮದವರೆಗೆ ರಸ್ತೆ ಡಾಂಬರೀಕರಣಕ್ಕಾಗಿ ೫ ಕೋಟಿ ಅನುಧಾನ ಮಂಜೂರು ಆಗಿದ್ದು,೧೫ ದಿನದೊಳಗಾಗಿ ರಸ್ತೆ ಅಭಿವೃದ್ದಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಮುಗಳಖೋಡ,ಜಿಡಗಾ ಮಠದ ಪೀಠಾಽಪತಿ ಶ್ರೀ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ,ಮುಗಳಖೋಡ ಮಹಾಮಠದ ಕೀರ್ತಿ ಗಗನಕ್ಕೆ ಮುಟ್ಟಬೇಕಾದರೆ ಅದರ ಶ್ರೇಯಸ್ಸು ಮಿರಗಿ ಗ್ರಾಮಕ್ಕೆ ಸಲ್ಲುತ್ತದೆ ಎಂದು ಹೇಳಿದರು.ಯಲ್ಲಾಲಿಂಗ ಮಹಾಪ್ರಭುಗಳ ಜನ್ಮಸ್ಥಳ ಮಿರಗಿ ಗ್ರಾಮದ ಮೇಲೆ ಹಾಗೂ ಮಿರಗಿ ಗ್ರಾಮದ ಸವಾಂಗೀಣ ಅಭಿವೃದ್ದಿಗೆ ಶಾಸಕರು ಸಧ್ಯ ಇಟ್ಟಿರುವ ಕಾಳಜಿ ಇನ್ನಷ್ಟು ಇಡಬೇಕು ಎಂದು ಹೇಳಿದರು.
ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೋಮ್ಮಯ್ಯ ಮಹಾಸ್ವಾಮೀಜಿ,ರೋಡಗಿ ವೀರಕ್ತಮಠದ ಅಭಿನವ ಶಿವಲಿಂಗೇಶ್ವರ ಶ್ರೀ,ಕುಮಾರೇಶ್ವರ ಶಿವಲಿಂಗ ಶ್ರೀ,ಡಾ.ಸ್ವರೂಪಾನಂದ ಶ್ರೀ ಸಾನಿಧ್ಯ ವಹಿಸಿದ್ದರು.
ಬಿಜೆಪಿ ಜಿಲ್ಲಾ ಮುಖಂಡ ದಯಾಸಾಗರ ಪಾಟೀಲ, ಬಿಜೆಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಡಿ.ಪಾಟೀಲ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಚನ್ನು ಶ್ರೀಗಿರಿ,ಮಂಜುನಾಥ ಕಾಮಗೊಂಡ,ರುದ್ರು ಅಲಗೊಂಡ, ಅಶೋಕಗೌಡ ಪಾಟೀಲ, ಭೀಮರಾಯ ಮದರಖಂಡಿ,ಗುರಣ್ಣ ಪಡಶೆಟ್ಟಿ, ವೈ.ಜಿ.ಬಿರಾದಾರ, ಚಿದಾನಂದ ಆಲಮೇಲ, ಡಾ.ದೇವೆಂದ್ರ ಬರಡೋಲ,ರಮೇಶ ಕನಮಡಿ, ಶ್ರೀಮಂತ ಖಸ್ಕಿ, ಚಂದಣ್ಣ ಆಲಮೇಲ,ಶಿವಾನಂದ ರಾವೂರ,ಮಲ್ಲು ಚಾಕುಂಡಿ,ಮಲ್ಲು ಬಿರಾದಾರ, ರಾಜು ಹಳ್ಳಿ,ಬಸವರಾಜ ಬಂಡಿ, ಗಂಗಾಧರ ಬಡಿಗೇರ, ಧರೆಪ್ಪ ಹಳ್ಳಿ, ಸಿದ್ದರಾಮ ಕಲಶೆಟ್ಟಿ,ಭೀಮಣ್ಣ ಅವಟಿ, ರಾಮ ದುದ್ದುಣಗಿ,ಜಟ್ಟೆಪ್ಪ ಅವಟಿ, ಶ್ರೀಶೈಲ ಠಕ್ಕಾ,ಸಂಗಣ ಯಾತನೂರ,ಮುತ್ತುಸಾಹುಕಾರ ಅತನೂರ, ಶ್ರೀಕಾಂತ ರೋಡಗಿ,ನಿಂಗಣ್ಣ ರಾವೂರ, ನಾಗಪ್ಪ ಬ್ಯಾಳಿ,ಯಲ್ಲಪ್ಪ ಘಾಳಿ,ಯಲ್ಲಪ್ಪ ಹಂಜಗಿ, ಚಿದಂಬರ ಪಾಟೀಲ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.