Friday, 20th September 2024

ಕೂಡಗಿ ಎನ್.ಟಿ.ಪಿ.ಸಿ ಯಲ್ಲಿ ಅಗ್ನಿಶಾಮಕ ಅಣಕು ಪ್ರಾತ್ಯಕ್ಷಿಕತೆ

ಕೋಲಾರ: ತಾಲ್ಲೂಕಿನ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಅಣುಕು ಅಗ್ನಿಶಾಮಕ ಪ್ರಾತ್ಯಕ್ಷಿಕತೆ ನಡೆಯಿತು.

ಎನ್.ಟಿ.ಪಿ.ಸಿ ಯ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗೂ ಉಪಸ್ಥಿತಿರಿದ್ದರು. ಅಗ್ನಿ ಶಾಮಕ ಅಣಕು ಪ್ರಾತ್ಯಕ್ಷಿಕತೆ ಬೆಂಕಿ ಸನ್ನಿವೇಶವನ್ನು ಉಷ್ಣ ವಿದ್ಯುತ್ ಸ್ಥಾವರದ ಕಲ್ಲಿದಲು ಕನ್ವೆಯರ್ ನಲ್ಲಿ ನಡೆಸಲಾಯಿತು. ಕೂಡಗಿ ಎನ್ ಟಿ ಪಿ ಸಿ ತುರ್ತು ನಿರ್ವಹಣಾ ತಂಡಗಳು ತ್ವರಿತವಾಗಿ ಕಾರ್ಯ ನಿರ್ವಹಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವ ಸನ್ನಿವೇಶ ಸೃಷ್ಟಿಸಲಾಗಿತ್ತು.

ಈ ಸಂದರ್ಭದಲ್ಲಿ ಬೆಳಗಾವಿಯ ಕಾರ್ಖಾನೆ ಹಾಗೂ ಬಾಯ್ಲರ್ ಗಳ, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆ ಉಪ ನಿರ್ದೇಶಕ ವೆಂಕಟೇಶ ರಾಥೋಡ, ಕೊಲ್ಹಾರ ತಹಶೀಲ್ದಾರ ಪಿ.ಜಿ ಪವಾರ, ಎನ್.ಟಿ.ಪಿ.ಸಿ ಜಿ ಜಿ ಎಮ್ ವ್ಹಿ.ಕೆ ಪಾಂಡೆ, ಸ್ಥಾವರದ ಆಪರೇಶನ್ ಹಾಗೂ ಮೆಂಟೆನನ್ಸ ವಿಭಾಗದ ಹಿರಿಯ ಅಧಿಕಾರಿ ಎ.ಡಿ.ಕೆ ಗುಪ್ತಾ ಹಾಗೂ ಕೂಡಗಿ ಎನ್.ಟಿ.ಪಿ.ಸಿ ಸ್ಥಾವರದ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.