Saturday, 23rd November 2024

ಮುಂದಿನ 5 ವರ್ಷಗಳಲ್ಲಿ 20 ಲಕ್ಷ ಉದ್ಯೋಗ: ಅರವಿಂದ್ ಕೇಜ್ರಿವಾಲ್

ನವದೆಹಲಿ: ಎಎಪಿ ನೇತೃತ್ವದ ದೆಹಲಿ ಸರ್ಕಾರವು ಮುಂದಿನ 5 ವರ್ಷಗಳಲ್ಲಿ ಯುವಕರಿಗೆ 20 ಲಕ್ಷ ಉದ್ಯೋಗಗಳನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

ಸರ್ಕಾರವು ರಾಷ್ಟ್ರ ರಾಜಧಾನಿಯ ಮಜ್ನು ಕೆ ತಿಲಾ ಪ್ರದೇಶ ಮತ್ತು ಚಾಂದಿನಿ ಚೌಕ್ ಪ್ರದೇಶದಲ್ಲಿ ಎರಡು ಆಹಾರ ಕೇಂದ್ರಗಳನ್ನು ಸ್ಥಾಪಿಸುತ್ತಿದೆ ಎಂದರು.

ಮುಂದಿನ 5 ವರ್ಷಗಳಲ್ಲಿ ಉದ್ಯೋಗ ಸೃಷ್ಟಿಸಲು ನಾವು ನಿರ್ಧರಿಸಿದ್ದೇವೆ. ಹೀಗಾಗಿ ದೆಹಲಿಯು ಪರಿಷ್ಕೃತ ಆಹಾರ ಕೇಂದ್ರಗಳನ್ನು ಪಡೆಯಲಿದೆ. ದೆಹಲಿಯು ಟಿಬೆಟಿಯನ್, ಪಂಜಾಬಿ ಆಹಾರದ ವಿವಿಧ ಮಾರುಕಟ್ಟೆಗಳನ್ನು ಹೊಂದಿದೆ. ನಾವು ಅವರ ಭೌತಿಕ ಮೂಲ ಸೌಕರ್ಯ, ರಸ್ತೆಗಳು, ವಿದ್ಯುತ್, ನೈರ್ಮಲ್ಯವನ್ನು ಸುಧಾರಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳು ಈ ಮಾರುಕಟ್ಟೆಗಳಿಗೆ ಭೇಟಿ ನೀಡಿ ದಿನನಿತ್ಯದ ಲೆಕ್ಕಾಚಾರವನ್ನು ಪತ್ತೆಹಚ್ಚಿದ್ದಾರೆ ಮತ್ತು ಈ ಎರಡು ಮಾರುಕಟ್ಟೆಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.

ಮುಂದಿನ ಹಂತದಲ್ಲಿ, ಎಲ್ಲಾ ಇತರ ಆಹಾರ ಕೇಂದ್ರಗಳನ್ನು ಗುರುತಿಸಲಾಗುವುದು ಮತ್ತು ಮರುಅಭಿವೃದ್ಧಿಪಡಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದರು.