Friday, 22nd November 2024

ಚಿರತೆ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ: ರಾಜಾ ವೆಂಕಟಪ್ಪ ನಾಯಕ

ಮಾನ್ವಿ: ಪಟ್ಟಣದಲ್ಲಿ ಶಾಸಕ ರಾಜಾವೆಂಕಟಪ್ಪನಾಯಕ ಅರಣ್ಯಾಧಿಕಾರಿ ರಾಜೇಶನಾಯಕರವರಿಗೆ ಸೂಚನೆ ನೀಡಿ ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿನ ಗುಡ್ಡ ಗಳಲ್ಲಿ ಕಳೆದ ೬ ತಿಂಗಳಿ0ದ ಚಿರತೆಯ ಚಲನವಲನ ಕಂಡುಬ0ದಿದ್ದು ಚಿರತೆಯಿಂದ ಹಾಗೂ ವನ್ಯ ಪ್ರಾಣಿಗಳಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿಯಲು ಗ್ರಾಮದ ವ್ಯಾಪ್ತಿ ಯಲ್ಲಿ ಹಾಗೂ ಬೆಟ್ಟದೂರು ಗ್ರಾಮದ ವ್ಯಾಪ್ತಿಯಲ್ಲಿ ಬೋನ್ ಗಳನ್ನು ಅಳವಡಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮಸ್ಥರು ವದಂತಿ ಗಳಿಗೆ ಕಿವಿಗೊಡದೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಬೇಕು.

ನೀರಮಾನ್ವಿ, ಬೆಟ್ಟದೂರು ಗ್ರಾಮದ ಜನರಿಗೆ ಹಾಗೂ ಜಾನುವಾರುಗಳಿಗೆ ಸಾಕು ಪ್ರಾಣಿ ಗಳಿಗೆ ಯಾವುದೆ ಹಾನಿ ಸಂಭವಿಸದ0ತೆ ನಿರಂತರವಾಗಿ ಅರಣ್ಯ ಇಲಾಖೆಯ ಅಧಿಕಾರಿ ಗಳೊಂದಿಗೆ ಸಂಪರ್ಕದಲ್ಲಿದ್ದು ಅಗತ್ಯವಾದ ಸೂಚನೆ ನೀಡುವುದರೊಂದಿಗೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ವಲಯ ಅರಣ್ಯಾಧಿಕಾರಿ ರಾಜೇಶನಾಯಕ ಮಾತನಾಡಿ ನೀರಮಾನ್ವಿಯ ಸಿದ್ದರೂಡರ ಮಠದ ಹತ್ತಿರದಲ್ಲಿ ಹೆಚ್ಚುವರಿ ಬೋನ್ ಇಡಲಾಗಿದ್ದು ವನ್ಯ ಜೀವಿ ತಜ್ಞರು ಚಿರತೆ ಸಂತಾನೋತ್ಪತಿಗಾಗಿ ಗ್ರಾಮದ ಹತ್ತಿರದ ಗುಡ್ಡಕ್ಕೆ ಆಗಮಿಸಿದ್ದು ಎರಡು ತಿಂಗಳಲ್ಲಿ ಮರಿಗಳೊಂದಿಗೆ ಈ ಪ್ರದೇಶದಿಂದ ಅರಣ್ಯ ಪ್ರದೇಶಕ್ಕೆ ಹೋಗಲಿದ್ದು ಗುಡ್ಡದಲ್ಲಿ ಮಂಗ,ನವಿಲು, ಸೇರಿದಂತೆ ಇತರ ವನ್ಯ ಪ್ರಾಣಿಗಳು ಇರುವುದರಿಂದ ಅವುಗಳನ್ನೇ ಆಹಾರವಾಗಿ ತಿನ್ನುತ್ತಿದ್ದು ಗ್ರಾಮದ ಜಾನುವಾರುಗಳ ಮೇಲೆ ಇದುವರೆಗೂ ದಾಳಿ ಮಾಡಿಲ್ಲ ಜನರು ಚಿರತೆಯ ಸೆರೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಅರಣ್ಯಧಿಕಾರಿ ಬಸವರಾಜ, ಪಕ್ಷೀ ಪ್ರೇಮಿ ಸಲ್ಲಾವುದ್ದಿನ್, ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.