Saturday, 14th December 2024

ವಸತಿ ಶಾಲೆಗೆ ಕಾಡಾನೆ ಲಗ್ಗೆ: ಅರಣ್ಯಾಧಿಕಾರಿಗಳ ಕಾರ್ಯಾಚರಣೆ

ಯಳಂದೂರು: ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬುಧವಾರ ಕಾಡಾನೆ ಲಗ್ಗೆ ಇಟ್ಟು ವಿದ್ಯಾರ್ಥಿಗಳು ಆತಂಕ್ಕೀಡಾಗಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ತಂತಿ ಬೇಲಿಯನ್ನು ಕಿತ್ತು ಆನೆಯು ಒಳ ಪ್ರವೇ ಶಿಸಿದೆ. ಸಿಬ್ಬಂದಿಯು ಕುಡಿಯುವ ನೀರಿನ ಮೋಟರ್ ಸ್ವಿಚ್ ಆನ್ ಮಾಡಲು ತೆರಳುತ್ತಿರು ವಾಗ ಆನೆಯನ್ನು ನೋಡಿದ್ದಾರೆ.

ತಕ್ಷಣ ಶಾಲೆಯ ಶಿಕ್ಷಕರ ವರ್ಗದವರಿಗೆ ತಿಳಿಸಿ ಶಾಲಾ ಮಕ್ಕಳನ್ನು ಕೊಠಡಿ ಒಳಗೆ ಇರಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

ತಕ್ಷಣ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಏರ್ ಗನ್ , ಪಟಾಕಿ ಸಿಡಿಸುವ ಮೂಲಕ ಕಾರ್ಯಾಚರಣೆ ಮಾಡಿ ಆನೆಯನ್ನು ಯಾವುದೇ ರೀತಿಯ ತೊಂದರೆಯಾಗದಂತೆ ಆನೆಯನ್ನು ಶಾಲೆಯಿಂದ ಹೊರ ಹೋಗುವ ರೀತಿಯಲ್ಲಿ ಕಾಯ೯ಚರಣೆ ಮಾಡಿದ್ದಾರೆ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.