Sunday, 24th November 2024

5 ರಾಜ್ಯಗಳ ಮೇಲೆ ಕರೋನಾ ತೂಗುಗತ್ತಿ

ದೆಹಲಿ:

ಕರೋನಾ ವೈರಸ್ ನಿಗ್ರಹಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶತಾಯಗತಾಯ ಪ್ರಯತ್ನಿಸುತ್ತಿದ್ದರೂ ಹೆಮ್ಮಾರಿಯ ಹಾವಳಿ ಮುಂದುವರಿದಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಾವು ಮತ್ತು ಸೋಂಕು ಪ್ರಕರಣಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ದೇಶದ ಕರೋನಾ ಕೇಸ್‌ಗಳಲ್ಲಿ ಶೇ.40ರಷ್ಟು ಈ ರಾಜ್ಯದಲ್ಲಿ ಕಂಡು ಬಂದಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಅಂಕಿ ಅಂಶಗಳ ಆಧಾರದ ಮೇಲೆ ಟಾಪ್ 10 ರಾಜ್ಯಗಳನ್ನು ಅತ್ಯಧಿಕ ಸೋಂಕು ಪೀಡಿತವೆಂದು ಪರಿಗಣಿಸಲಾಗಿದೆ.

ಇವುಗಳಲ್ಲಿ ಐದು ರಾಜ್ಯಗಳಲ್ಲಿ ಆತಂಕಕಾರಿ ಮಟ್ಟದಲ್ಲಿ ಸಾಂಕ್ರಾಮಿಕ ರೋಗಿಗಳ ಸಂಖ್ಯೆ ಏರುತ್ತಿದೆ. ಅವುಗಳೆಂದರೆ ಮಹಾರಾಷ್ಟ್ರ-24,437, ಗುಜರಾತ್-8,903, ತಮಿಳುನಾಡು- 8,718, ದೆಹಲಿ-7,633, ಮತ್ತು ರಾಜಸ್ತಾನ-4,126.
ಟಾಪ್ ಟೆನ್ ರಾಜ್ಯಗಳಲ್ಲಿ ಸ್ಥಾನ ಪಡೆದಿರುವ ಮಧ್ಯಪ್ರದೇಶ-3,986, ಉತ್ತರ ಪ್ರದೇಶ-3,664, ಪಶ್ಚಿಮ ಬಂಗಾಳ-2,177,
ಆಂಧ್ರಪ್ರದೇಶ-2,090, ಹಾಗೂ ಪಂಜಾಬ್-1,914.  ನಂತರದ ಸ್ಥಾನಗಳಲ್ಲಿ ತೆಲಂಗಾಣ-1,326, ಜಮ್ಮು ಮತ್ತು ಕಾಶ್ಮೀರ-934, ಕರ್ನಾಟಕ-926(13ನೇ ಸ್ಥಾನ), ಬಿಹಾರ-831 ಹಾಗೂ ಹರಿಯಾಣ-780 ರಾಜ್ಯಗಳಿವೆ.