ಪ್ಯಾರಿಸ್:
ಮಹಾಮಾರಿ ಕರೋನಾ ವಜ್ರಮುಷ್ಠಿಯಲ್ಲಿ ಇಡೀ ವಿಶ್ವ ನಲುಗುತ್ತಿದೆ. ವೈರಸ್ ಚಕ್ರವ್ಯೂಹದಲ್ಲಿ ಭಯಭೀತಿಯ ವಾತಾವರಣ ಸೃಷ್ಟಿಯಾಗಿರುವಾಗಲೇ ಸೋಂಕು ಮತ್ತು ಸಾವು ಪ್ರಕರಣಗಳ ಸಂಖ್ಯೆಯೂ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ.
ಪ್ರಪಂಚದಾದ್ಯಂತ ಈವರೆಗೆ 2.90 ಲಕ್ಷಕ್ಕೂ ಹೆಚ್ಚು ಸಾವು ಮತ್ತು 42.30 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ. ವಿಶ್ವವ್ಯಾಪಿ ಸಾವಿನ ಸಂಖ್ಯೆ 3 ಲಕ್ಷಕ್ಕೇರುವ ಆತಂಕವಿರುವಾಗಲೇ, ಸುಮಾರು 15 ಲಕ್ಷಕ್ಕಿಿಂತಲೂ ಅಧಿಕ ಮಂದಿ ಸಾಂಕ್ರಾಮಿಕ ರೋಗಗಳು ಚೇತರಿಸಿಕೊಂಡು ಗುಣಮುಖರಾಗಿರುವುದು ಸಮಾಧಾನಕರ ಸಂಗತಿಯಾಗಿದೆ.
ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಇಡೀ ಜಗತ್ತನಾದ್ಯಂತ ಅಪಾರ ಸಾವು ನೋವು ಮತ್ತು ಭಾರೀ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿರುವ ವಿನಾಶಕಾರಿ ಕರೋನಾ ವೈರಸ್ ದಾಳಿಯಿಂದ ಎಲ್ಲ ರಾಷ್ಟ್ರಗಳು ಕಂಗೆಟ್ಟು ಅಸಹಾಯಕವಾಗಿವೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಸಾಂಪ್ರಾಮಿಕ ರೋಗ ಪೀಡಿತರ ಸಂಖ್ಯೆ 46 ಲಕ್ಷ ದಾಟುವ ಆತಂಕವಿದೆ.
ಅಮೆರಿಕ, ಸ್ಪೇನ್, ಇಂಗ್ಲೆೆಂಡ್, ರಷ್ಯಾ ಮತ್ತು ಇಟಲಿ – ಅತಿ ಹೆಚ್ಚು ಸಾವು ಮತ್ತು ಸೋಂಕು ಸಂಭವಿಸಿದ ವಿಶ್ವದ ಟಾಪ್ ಫೈವ್ ದೇಶಗಳಾಗಿವೆ. ಜಗತ್ತಿನ 250ಕ್ಕೂ ಹೆಚ್ಚು ದೇಶಗಳು ಸತತ ನಾಲ್ಕೈದು ತಿಂಗಳುಗಳಿಂದ ಕರೋನಾ ನಿಗ್ರಹಕ್ಕಾಗಿ ನಿರಂತರ ಹೋರಾಟ ಮುಂದುವರಿಸಿದ್ದರೂ ಕರೋನಾ ನಿಯಂತ್ರಣ ಸಾಧ್ಯವಾಗದಿರುವುದು ಭಾರೀ ಕಳವಳಕಾರಿಯಾಗಿದೆ.