Sunday, 15th December 2024

ಆಗಸ್ಟ್’ನಲ್ಲಿ ಕೇರಳ ಸರ್ಕಾರದಿಂದ ಇ- ಟ್ಯಾಕ್ಸಿ ಸೇವೆ ಆರಂಭ

ತಿರುವನಂತಪುರಂ: ಕೇರಳ ಸರ್ಕಾರವು ಮುಂದಿನ ತಿಂಗಳಿನಿಂದ ತನ್ನದೇ ಆದ ಇ- ಟ್ಯಾಕ್ಸಿ ಸೇವೆ ಪ್ರಾರಂಭಿಸಲಿದೆ.

ದೇಶದಲ್ಲಿ ಕೇರಳ ರಾಜ್ಯ ಸರ್ಕಾರದಿಂದ ಮೊದಲ ಉಪಕ್ರಮವೆಂದು ಪರಿಗಣಿಸ ಲಾಗಿದೆ. ‘ಕೇರಳ ಸವಾರಿ’ ಎಂಬ ಹೆಸರಿನ ಆನ್‌ ಲೈನ್ ಟ್ಯಾಕ್ಸಿ ಬಾಡಿಗೆ ಸೇವೆಯನ್ನು ರಾಜ್ಯ ಕಾರ್ಮಿಕ ಇಲಾಖೆ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಆಟೋ- ಟ್ಯಾಕ್ಸಿ ನೆಟ್‌ವರ್ಕ್‌ ಗಳನ್ನು ಸಂಪರ್ಕಿಸುವ ಮೂಲಕ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಸುರಕ್ಷಿತ ಮತ್ತು ವಿವಾದ ಮುಕ್ತ ಪ್ರಯಾಣವನ್ನು ಖಾತರಿಪಡಿಸುವ ಉದ್ದೇಶದಿಂದ ಈ ಸೇವೆಯನ್ನು ಹೊರತರುತ್ತಿದೆ.

ಕೇರಳದ ಸಾರ್ವಜನಿಕ ಶಿಕ್ಷಣ ಮತ್ತು ಕಾರ್ಮಿಕ ಸಚಿವ ವಿ ಶಿವನ್‌ಕುಟ್ಟಿ ಮಾತನಾಡಿ, ದೇಶದಲ್ಲಿ ಸರ್ಕಾರವೊಂದು ಆನ್‌ಲೈನ್ ಟ್ಯಾಕ್ಸಿ ಸೇವೆ ಪ್ರಾರಂಭಿ ಸುತ್ತಿರುವುದು ಇದೇ ಮೊದಲು. ಕಾರ್ಮಿಕರ ಕಲ್ಯಾಣ ಉದ್ದೇಶದಿಂದ ಬಹುರಾಷ್ಟ್ರೀಯ ಕಂಪನಿಗಳ ಮಾದರಿಯಲ್ಲಿ ಪ್ರಬಲ ಸ್ಪರ್ಧೆ ನೀಡಲು ಮುಂದಾಗುತ್ತಿದೆ ಎಂದು ತಿಳಿಸಿದರು.

ಕೇರಳ ಸವಾರಿ ನಿಗದಿತ ದರದ ಹೊರತಾಗಿ ಶೇ 8ರಷ್ಟು ಸೇವಾ ಶುಲ್ಕವನ್ನು ಮಾತ್ರ ವಿಧಿಸಲಿದೆ. ಕೇರಳ ಸವಾರಿ ಆಯಪ್ ಮಕ್ಕಳು ಮತ್ತು ಮಹಿಳೆಯರಿಗೆ ಬಳಸಲು ಅತ್ಯಂತ ಸುರಕ್ಷಿತವಾದ ವ್ಯವಸ್ಥೆಯಾಗಿದೆ. ಆಯಪ್‌ನಲ್ಲಿ ಪ್ಯಾನಿಕ್ ಬಟನ್ ವ್ಯವಸ್ಥೆ ಇದ್ದು, ಇದು ಕಾರು ಅಪಘಾತದ ಸಂದರ್ಭದಲ್ಲಿ ಅಥವಾ ಬೇರೆ ಯಾವುದೇ ರೀತಿಯ ಅಪಾಯದ ಸಂದರ್ಭದಲ್ಲಿ ಒತ್ತಬಹುದು ಎಂದು ತಿಳಿಸಿದರು.

ಆಗಸ್ಟ್ 17 ರಂದು ಮಲಯಾಳಂ ತಿಂಗಳ ಚಿಂಗಮ್‌ನ ಆರಂಭದ ದಿನದಂದು ಇಲ್ಲಿನ ಕನಕಕ್ಕುನ್ನು ಅರಮನೆಯಲ್ಲಿ ನಡೆಯಲಿ ರುವ ಸಮಾರಂಭದಲ್ಲಿ ಹೊಸ ಸೇವೆಯನ್ನು ಪ್ರಾರಂಭಿಸಲಾಗುವುದು.