ಬಸವನಬಾಗೇವಾಡಿ: ತಾನು ಎಲ್ಲರಿಗಾಗಿ ಎಲ್ಲರು ತನಗಾಗಿ ಎಂಬ ಬಾವನೆಯಿಂದ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸು ವಂತಾಗಬೇಕು ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಶ್ರೀ ಬಸವ ಬಂಜಾರಾ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನೇರವೆರಿಸಿ ಮಾತನಾಡಿದ ಅವರು ವರ್ಷ ದಲ್ಲಿ ಒಂಬತ್ತು ತಿಂಗಳು ಕಷ್ಟ ಪಟ್ಟು ದುಡಿದು ಒಂದೇ ತಿಂಗಳಲ್ಲಿ ಖರ್ಚು ಮಾಡುವ ತಾವುಗಳು ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು.
ಬ್ಯಾಂಕುಗಳಲ್ಲಿ ಸಾಲ ಪಡಿಯಬೇಕು ಅದರಂತೆ ಸಮಯಕ್ಕೆ ಸರಿಯಾಗಿ ಸಾಲ ಮರು ಪಾವತಿಸಬೇಕು ಅಂದಾಗ ಸಕಾರಿ ಸಂಘಗಳು ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ ಅಲ್ಲದೆ ಸಮಾಜದ ಕಡು ಬಡವರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಈ ಒಂದು ಸಹಕಾರಿ ಸಂಘ ಕಾರ್ಯ ನಿರ್ವಹಿಸುವಂತಾಗಲಿ ಎಂದರು.
ಮಾಜಿ ಸಚಿವ ಎಸ್,ಕೆ, ಬೆಳ್ಳುಬ್ಬಿ ಮಾತನಾಡಿ ಬಂಜಾರಾ ಸಮಾಜ ಭಾಂಧವರು ಎಲ್ಲ ರಂಗದಲ್ಲಿಯು ಸೇವೆ ಸಲ್ಲಿಸುತ್ತಿದ್ದಾರೆ, ಬಂಜಾರಾ ಸಮಾಜದವರು ಶ್ರಮ ಜೀವಿಗಳಾಗಿ ದ್ದಾರೆ. ಸಮಾಜದಲ್ಲಿ ಪ್ರತಿಯೊಬ್ಬರು ಆರ್ಥಿಕವಾಗಿ ಸಮಾಜ ಸೇವೆ ಮಾಡಿದಾಗ ಮಾತ್ರ ಸಮಾಜ ಆರ್ಥಿಕವಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿರಕ್ತ ಮಠದ ಸಿದ್ದಲಿಂಗ ಮಹಾಸ್ವಾಮಿಗಳು. ಹಾಗೂ ಕೆಸರಟ್ಟಿಯ ಸೋಮಲಿಂಗ ಮಹಾಸ್ವಾಮೀಗಳು ವಹಿಸಿದ್ದರು.
ಪಿಕೆಪಿಎಸ್ ಬ್ಯಾಂಕ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ವಿಮಾ ನಿಗಮ ಮಹಾಮಂಡಳ ಅಧ್ಯಕ್ಷ ಶಿವನಗೌಡ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಬಂಜಾರಾ ಮುಖಂಡರಾದ ಮಲ್ಲಿಕಾರ್ಜುನ ನಾಯಕ್, ಡಾ, ಬಸವರಾಜ ಚವ್ಹಾಣ, ರವಿ ರಾಠೋಡ, ಶಿವಾಜಿ ಲ ರಾಠೋಡ, ಸಂಗಮೆಶ ಒಲೇಕಾರ ಬಸವರಾಜ ಗೊಳಸಂಗಿ, ಸೇರಿದಂತೆ ಮುಂತಾದವರು ವೇದಿಕೆಯಲ್ಲಿ ದ್ದರು.