Sunday, 15th December 2024

ಶಾಲೆ ಸಂಪೂರ್ಣ ಶಿಥಿಲ: ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸ್ಥಳಕ್ಕೆ ಭೇಟಿ

ಇಂಡಿ: ಮಾವಿನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಶಿಥಿಲಗೊಂಡಿದ್ದು ಮಳೆಗಾಲದಲ್ಲಿ ಮಕ್ಕಳು ಜೀವ ಕೈಯಲ್ಲಿ ಹಿಡಿದು ಕೊಡುವ ಪಾಠ ಕಲಿಯುವ ಪರಸ್ಥಿತಿ ನಿರ್ಮಾಣವಾಗಿದೆ ಎಂಬ ಸುದ್ದಿ ತಿಳಿದ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಭಾರತ ದೇಶದಲ್ಲಿ ಶೇ.೮೫ ಪ್ರತಿಶತ ಹಳ್ಳಿಗಳಿವೆ. ಗ್ರಾಮಗಳ ಸರ್ವಾಂಗೀಣ ಪ್ರಗತಿಯ ದೇಶ ಅಭಿವೃದ್ದಿ ಸಾಧ್ಯ. ಹಳ್ಳಿಗಳ ಮೂಲಭೂತ ಸೌಲಭ್ಯಗಳು ಈಡೇರಿಸಿಕೊಳ್ಳುವ ಸಲು ವಾಗಿಯೇ ಸರಕಾರಗಳು ಸ್ಥಳೀಯ ಜಿ.ಪಂ.ತಾ.ಪಂ ಗ್ರಾಮ ಪಂಚಾಯತಿಯನ್ನು ಹುಟ್ಟು ಹಾಕಿವೆ. ಆದ್ದರಿಂದ ಗ್ರಾಮಗಳಲ್ಲಿರುವ ಗ್ರಾಮ ಪಂಚಾಯತಿ ಸ್ಥಳೀಯ ಶಾಲೆ ಗಳಿಗೆ ಹೆಚ್ಚು ಆದ್ಯತೆ ನೀಡಬೇಕು.

ಶಾಲೆಯ ವ್ಯವಸ್ಥೆ ನೋಡಿದರೆ ಬಾರಿ ಅಪಾಯಕ್ಕೆ ಅವ್ಹಾನ ನೀಡುವಂತಾಗಿದೆ. ಕೂಡಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿ.ಪಂ ಮತ್ತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕೂಡಲೇ ಕಟ್ಟಡ ನಿರ್ಮಾಣವಾಗುವಂತೆ ಅಧಿಕಾರಿಗಳು ಕಾಳಜಿ ವಹಿಸಬೇಕು.

ಸ್ಥಳೀಯ ಪಂಚಾಯತಿ ಅಧ್ಯಕ್ಷರು, ಸದಸ್ಯರು ಶಾಲೆಯ ಸರ್ವಾಂಗೀಣ ಅಭಿವೃದ್ದಿ ಕಡೆ ಗಮನ ಹರಿಸಿ ಮಕ್ಕಳ ಶೈಕ್ಷಣಿಕ ಶ್ರೇಯೋ ಭಿವೃದ್ದಿಗೆ ಶ್ರಮಿಸಬೇಕು ಎಂದು ವಿನಂತಿಸಿದರು.

ಈಗಾಗಲೇ ಜಿಲ್ಲಾ ಪಂಚಾಯತಿಗೆ ಶಾಲಾ ಕಟ್ಟಡದ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಂತ ಹಂತವಾಗಿ ಸದ್ಯ ೨ ಕೋಣೆಗಳು ತುರ್ತು ಕಟ್ಟಿಸಿ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.

ಶಿಕ್ಷಕ ಶಿವಾನಂದ ದಳವಾಯಿ,ಶಂಕರ ಪಾರ್ಷಿ, ರಮೇಶ ಬಾರಾಣೆ, ಮಂಜುನಾಥ ಕುಶನಗೌಡ ಪಾಟೀಲ,ಚಂದ್ರಕಾ೦ತ ಕಾಂಬಳೆ, ಅಶೋಕ ಅಕಲಾದಿ, ಧರ್ಮರಾಜ ಮದರಖಂಡಿ ಇದ್ದರು.