ಜನವರಿ 24ರಂದು ಸರ್ಕಾರ ಆದೇಶ ಹೊರಡಿಸಿ ಆನಂದ್ ಸಿಂಗ್ ಹಾಗೂ ಶಶಿಕಲಾ ಅವರಿಗೆ ಕ್ರಮವಾಗಿ ಕೊಪ್ಪಳ, ವಿಜಯನಗರ ಜಿಲ್ಲಾ ಉಸ್ತುವಾರಿಯಾಗಿ ನೇಮಿಸಿತ್ತು.
ನೂತನ ಜಿಲ್ಲೆ ಉಸ್ತುವಾರಿ ವಹಿಸಬೇಕೆಂದು ಆನಂದ್ ಸಿಂಗ್ ಸತತವಾಗಿ ಒತ್ತಾಯಿಸುತ್ತ ಬಂದಿದ್ದರು. ಕೊನೆಗೂ ಅವರ ಮಾತಿಗೆ ಈಗ ಮನ್ನಣೆ ಸಿಕ್ಕಿದೆ. ಶಶಿಕಲಾ ಅವರು ವಿಜಯ ನಗರದತ್ತ ಸುಳಿಯದ ಕಾರಣ ತೀವ್ರ ಟೀಕೆಗೆ ಗುರಿಯಾಗಿತ್ತು.