ಪಾಟ್ನಾ: ಬಿಹಾರದ ಸರ್ಕಾರಿ ವಿಶ್ವವಿದ್ಯಾಲಯದ ಪದವಿಪೂರ್ವ ವಿದ್ಯಾರ್ಥಿಯೊಬ್ಬ ನಿಗೆ 100 ಕ್ಕೆ 151 ಅಂಕ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.
ದರ್ಭಾಂಗಾ ಜಿಲ್ಲೆಯ ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯದಲ್ಲಿ ಎರಡು ವಿಷಯಗಳಲ್ಲಿ ಸೊನ್ನೆ ಅಂಕ ಗಳಿಸಿದ ಇನ್ನೊಬ್ಬ ವಿದ್ಯಾರ್ಥಿಗೆ ಮುಂದಿನ ತರಗತಿಗೆ ಬಡ್ತಿ ನೀಡಿದ ಘಟನೆಯೂ ನಡೆದಿದೆ.
ಬಿಎ ಆನರ್ಸ್ ವಿದ್ಯಾರ್ಥಿಗೆ ರಾಜ್ಯಶಾಸ್ತ್ರ ಪರೀಕ್ಷೆಯಲ್ಲಿ ಈ ರೀತಿ 100ಕ್ಕೆ 151 ಅಂಕ ನೀಡಲಾಗಿದೆ. ಫಲಿತಾಂಶ ನೋಡಿ ಖುದ್ದು ವಿದ್ಯಾರ್ಥಿಯೇ ದಂಗಾಗಿದ್ದಾನೆ.
ಇನ್ನೋರ್ವ ಬಿಕಾಂ ಎರಡನೇ ವರ್ಷದಲ್ಲಿ ಓದ್ತಾ ಇದ್ದ ವಿದ್ಯಾರ್ಥಿ ಅಕೌಂಟ್ಸ್ ಹಾಗೂ ಫೈನಾನ್ಸ್ ವಿಷಯದ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾನೆ. ಆದರೂ ಆತನನ್ನು ಮುಂದಿನ ತರಗತಿಗೆ ಕಳುಹಿಸಲಾಗಿತ್ತು. ಇವೆರಡೂ ಟೈಪಿಂಗ್‌ನಲ್ಲಾದ ತಪ್ಪುಗಳು ಎಂದು ವಿವಿ ಹೇಳಿಕೊಂಡಿದೆ. ಅದನ್ನು ಸರಿಪಡಿಸಿಕೊಂಡಿದ್ದೇವೆ ಎಂದು ಸಮರ್ಥಿಸಿಕೊಂಡಿದೆ.