Friday, 22nd November 2024

1,50,173 ಕೋಟಿ ರೂ.ಗಳ ಸ್ಪೆಕ್ಟ್ರಮ್ ಮಾರಾಟ

ನವದೆಹಲಿ: 5ಜಿ ಸ್ಪೆಕ್ಟ್ರಂನ ಭಾರತದ ಮೊದಲ ಹರಾಜು ಸೋಮವಾರ ಮುಕ್ತಾಯ ಗೊಂಡಿದ್ದು, 1,50,173 ಕೋಟಿ ರೂ.ಗಳ ಸ್ಪೆಕ್ಟ್ರಮ್ʼನ್ನ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ.

ಏಳು ದಿನಗಳ ಕಾಲ ನಡೆದ ಹರಾಜು ಸೋಮವಾರ ಮಧ್ಯಾಹ್ನ ಕೊನೆಗೊಂಡಿತು. ಸೋಮವಾರ ಹರಾಜಿನ ಏಳನೇ ದಿನವಾ ಗಿದ್ದು, ಮಾರಾಟದಿಂದ ಬರುವ ಆದಾಯಕ್ಕೆ ತಾತ್ಕಾಲಿಕ ಸಂಖ್ಯೆ ₹1,50,173 ಕೋಟಿ ಮತ್ತು ಅಂತಿಮ ಸಂಖ್ಯೆಗಳನ್ನ ತಾಳೆ ಮಾಡ ಲಾಗುತ್ತಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ ಜಿಯೋ, ಪ್ರತಿಸ್ಪರ್ಧಿಗಳಾದ ಭಾರ್ತಿ ಏರ್ಟೆಲ್ ಮತ್ತು ವೊಡಾ ಫೋನ್ ಐಡಿಯಾ ಮತ್ತು ಬಿಲಿಯನೇರ್ ಗೌತಮ್ ಅದಾನಿ ಅವ್ರ ಅದಾನಿ ಎಂಟ ರ್ಪ್ರೈಸಸ್ ಲಿಮಿಟೆಡ್ 5ಜಿ ತರಂಗಾಂತರಗಳ ಬಿಡ್ಡರ್ಗಳಲ್ಲಿ ಸೇರಿವೆ.

ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್, ‘ಈ ವರ್ಷದ ಅಕ್ಟೋಬರ್ ವೇಳೆಗೆ 5ಜಿ ಅನ್ನು 4ಜಿ ಗಿಂತ ಸುಮಾರು 10 ಪಟ್ಟು ವೇಗವಾಗಿ ಡೇಟಾ ವೇಗವನ್ನ ಒದಗಿಸಬಹುದು ಎಂದು ಸರ್ಕಾರ ಹೇಳುತ್ತದೆ’ ಎಂದು ಹೇಳಿದ್ದರು.