ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ‘ಆಳ್ವಾಸ್ ನುಡಿಸಿರಿ’ ಸಮ್ಮೇಳ ನವು ನಡೆದಿರಲಿಲ್ಲ. ಈ ಬಾರಿ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ.
ಮೂರು ದಿನಗಳು ನಡೆಯುವ ಈ ಸಮ್ಮೇಳನವು ಸಂಭ್ರಮದ ವಾತಾವರಣ ಕಲ್ಪಿಸಿ ಕನ್ನಡದ ಬೆಳವಣಿಗೆಗೆ ಮಹತ್ವದ ಕಾಣಿಕೆ ನೀಡಬೇಕೆಂಬುದು, ಕನ್ನಡಿಗರನ್ನು ಒಗ್ಗೂಡಿಸಬೇಕೆಂಬುದು ನಮ್ಮ ಆಸೆ. ಈ ನಿಟ್ಟಿನಲ್ಲಿ ನಾವು ಈಗಾಗಲೇ ಕಾರ್ಯಪ್ರವೃತ ರಾಗಿದ್ದೇವೆ ಎಂದು ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.