ಇಂಡಿ: ಇಂಡಿ ತಾಲೂಕಿನ ಮಹತ್ವಾಕಾಂಕ್ಷಿ ಯೋಜನೆಯಾದ ಶ್ರೀರೇವಣಸಿದ್ದೇಶ್ವರ ನೀರಾವರಿ ಯೋನೆಗೆ ವಿಶೇಷ ಕಾಯಕಲ್ಪ ನೀಡಿ. ಪರಿಸರ ತಜ್ಞರ ಸಮೀತಿ ನಿರಾಕ್ಷೇಪಣಾ ಪತ್ರ ನೀಡಲು ಪರಿಸರ ಇಲಾಖೆಗೆ ಶಿಫಾರಸ್ಸು ಮಾಡಿದ ಜನಸಂಪನ್ಮೂಲ ಸಚಿವರಿಗೆ ಹೋರ್ತಿ ಹಾಗೂ ಇಂಡಿ ತಾಲೂಕಿನ ಸಮಸ್ತ ರೈತರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಭಾರತೀಯ ಜನತಾ ಪಕ್ಷದ ಓಬಿಸಿ ಜಿಲ್ಲಾ ಉಪಾಧ್ಯಕ್ಷ ಶೀಲವಂತ ಉಮರಾಣಿ ತಿಳಿಸಿದ್ದಾರೆ.
ವಿಜಯಪೂರ, ಇಂಡಿ ಇತರೆ ಭಾಗದ ರೈತರಿಗೆ ಈ ಯೋಜನೆಯಿಂದ ಅನುಕೂಲವಾಗ ಲಿದೆ. ಹೋರ್ತಿ ಭಾಗ ಗುಡ್ಡು ಗಾಡಿನಿಂದ ಎತ್ತರವಾದ ಪ್ರದೇಶ ನೀರು ಹೋಗದೆ ಇರುವ ಪ್ರದೇಶ ಎಂದು ಈ ಹಿಂದೆ ಕೈ ಬಿಟ್ಟಿದನ್ನು ಗಮನಿಸಿದ ಸಚಿವರು ಈ ಭಾಗದ ರೈತರ ಹಿತಚಿಂತನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅನುಷ್ಠಾನಕ್ಕೆ ತರಲು ಸಾಕಷ್ಟು ಶ್ರಮಿಸಿದ್ದಾರೆ.
ಇದು ಮಹತ್ವದ ನೀರಾವರಿ ಯೋಜನೆಯಾಗಿದ್ದು ಈ ಯೋಜನೆ ಅನಷ್ಠಾನದ ಸಂಕಲ್ಪ ದೊ0ದಿಗೆ ಪರಿಸ ಇಲಾಖೆಯ ನೀರಪೇಕ್ಷಣಾಪತ್ರ ಪಡೆದುಕೊಳ್ಳಲು ಪ್ರಸ್ತಾವನೆ ಸಲ್ಲಿಸ ಲಾಗಿತ್ತು. ಈ ಪ್ರಸ್ತಾವನೆ ರಾಜ್ಯಮಟ್ಟದಲ್ಲಿ ಪರಿಸ ತಜ್ಞರ ಸಮಿತಿಯಲ್ಲಿ ಯೋಜನೆ ಕುರಿತು ವಿಸ್ತಾರವಾಗಿ ಚರ್ಚಿಸಿದ ನಂತರ ಪರಿಸರ ತಜ್ಞರ ಸಮಿಇ ಪರಿಸರ ತೀರುವಳಿ ನೀಡಲು ಶೀಫಾರಸು ಮಾಡಿದೆ.
ಈ ನಿರ್ಧಾರ ಸಮಸ್ತ ಇಂಡಿ ,ವಿಜಯಪೂರ ತಾಲೂಕಿನ ರೈತರಿಗೆ ಅತ್ಯಂತ ಸಂತಸ ತಂದಿದೆ. ಈ ಯೋಜನೆ ೫೬ ಹಳ್ಳಿಗಳು ಒಟ್ಟು ೪೯.೭೩೦ ಹೇಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಲಿದೆ. ಇಂಡಿ ತಾಲೂಕಿಗೆ ಒಟ್ಟು ೨೮ ಹೆಕ್ಟರ್ ರೈತರ ಜಮೀನುಗಳಿಗೆ ನೀರಾವರಿ ಯೋಜನೆಯಾಗಲಿದೆ. ಇಡೀ ವಿಜಯಪೂರ ಜಿಲ್ಲೆ ಹಾಗೂ ಇಂಡಿ ಭಾಗದ ರೈತರು ನಿಮ್ಮ ಖುಣ ಮರೇಯುವುದಿಲ್ಲ ಎಂದು ತಿಳಿಸಿದ್ದಾರೆ.