ದೇವದುರ್ಗ : ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ತಾಲೂಕು ಸಮಿತಿ ಮುಖಂಡರು ವಸತಿ ನಿಲಯ ವಿದ್ಯಾರ್ಥಿಗಳಿ ಮೂಲಸೌಕರ್ಯ ಗಳನ್ನು ಒದಗಿಸುವಂತೆ ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸಿದರು,
ಇನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷರಾದ ರೂಪಾ ಶ್ರೀನಿವಾಸ ನಾಯಕ ಮಾತನಾಡಿ ದೇವದುರ್ಗ ತಾಲೂಕಿನಲ್ಲಿ ನಿರ್ಮಾಣವಾಗಿರುವಂಥ ಸುರ್ಸಜಿತ ಡಿಪ್ಲೋಮಾ ಕಾಲೇಜುಗಳು ನೋಡುವುದಕ್ಕೆ ಹೈಟೆಕ್ ಆಗಿ ಕಾಣುತ್ತಿದ್ದು ಹಾಗೂ ವಿದ್ಯಾರ್ಥಿಗಳಿಗೆ ಲಭ್ಯ ಇರುವುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ, ಆದರೆ ವಿದ್ಯಾರ್ಥಿಗಳಿಗೆ ಯಾವುದೇ ಒಂದೇ ಒಂದು ಕ್ಲಾಸ್ ರೂಮ್ ಆಗಿರಬಹುದು ಅಥವಾ ಲ್ಯಾಬೋರೇಟರಿಸ್ ಆಗಿರಬಹುದು ಯಾವುದೇ ಆಗಲೇ ಆ ವಿದ್ಯಾರ್ಥಿಗಳಿಗೆ ಹಸ್ತಾಂತರಿ ಸಿಲ್ಲಿ ಇದರಿಂದ ಆ ಕಾಲೇಜು ಮಕ್ಕಳು ಲ್ಯಾಬಿಗಾಗಿ ದೇವದುರ್ಗದಿಂದ ರಾಯಚೂರಿಗೆ ತೆರಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಗೂ ಆ ಭಾಗದ ಬಸ್ಸಿನ ವ್ಯವಸ್ಥೆ ಕೂಡ ಇರುವುದಿಲ್ಲ ಹಾಗೂ ಮೂಲಭೂತ ಸೌಕರ್ಯಗಳು ಕೂಡ ಇರುವುದಿಲ್ಲ ಜೊತೆಗೆ ಗೂಗಲ್ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬಸ್ಸು ಇರಲಾರದ ಕಾರಣ ಆ ಕಾಲೇಜ್ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಯಾಗುತ್ತಿದೆ, ಆದ ಕಾರಣ ಹೆಚ್ಚುವರಿ ಬಸ್ಸು ಗೂಗಲ್ ಭಾಗಕ್ಕೆ ಬಿಡಬೇಕು.
ಈ ವಿಷಯವಾಗಿ ನಮ್ಮ ರೈತ ಸಂಘಟನೆ ಹಾಗೂ ಕಾಲೇಜ್ ವಿದ್ಯಾರ್ಥಿಗಳು ಸಾಕಷ್ಟು ಬಾರಿ ನಾವು ಮನವಿ ಮಾಡಿದರೂ ಸಹಾ ಯಾವುದೇ ಪ್ರಯೋಜನವಾಗಿಲ್ಲ, ಇದು ಎಂತಹ ದುರ್ದೈವ ಶಾಸಕರು ಕೇವಲ ಭಾಷಣಕ್ಕೆ ಮಾತ್ರ ಸೀಮಿತ, ಹಳ್ಳಿಗಳಿಗೆ ಸಾರಾಯಿ ಸಿಗುತ್ತದೆ ಆದರೆ ನೀರು ಸಿಗುತ್ತಿಲ್ಲ, ಮುಂದಿನ ದಿನಗಳಲ್ಲಿ ನಾವು ಎಲ್ಲರೂ ಹೆಚ್ಚಿತಕೊಳ್ಳಬೇಕು, ಎಂದು ಹೇಳಿದರು,
ಈ ಒಂದು ಹೋರಾಟವನ್ನು ಉದ್ದೇಶಿಸಿ ಎಸ್ ಎಫ್ ಐ ತಾಲೂಕು ಕಾರ್ಯ ದರ್ಶಿ ಮಹಾಲಿಂಗ ದೊಡ್ಡಮನಿ ಮಾತನಾಡಿ ಏಷ್ಯಾ ಖಂಡದಲ್ಲಿ ಅತ್ಯಂತ ಹಿಂದುಳಿದ ಭಾಗ ಎಂದರೇ ನಮ್ಮ ದೇವದುರ್ಗ ತಾಲೂಕು ಇಲ್ಲಿ ಶಿಕ್ಷಣದ ಕೊರತೆ ಬಹಳ ಇದ್ದು ಸರ್ಕಾರ ದಿಂದ ಸಾಕಷ್ಟು ಅನುದಾನ ಬಂದಿದ್ದರೂ ಸಹ ಕಾಲೇಜಿನ ವ್ಯವಸ್ಥೆಗಳ ಸರ್ಕಾರ ಮಾಡಿಕೊಟ್ಟಿದೆ.
ಆದರೆ ದುರ್ದೈವವೆಂದರೆ ಕಟ್ಟಡಗಳು ನಿರ್ಮಾಣವಾದರೂ ಸಹ ಇನ್ನೂವರೆಗೂ ಕಾಲೇಜ್ ಮಕ್ಕಳಿಗೂ ಇನ್ನು ಯಾವುದೋ ಕಟ್ಟಡಗಳ ಹಸ್ತಾಂತರಿಸಿ ಇಲ್ಲ ಮತ್ತು ಇದರಿಂದ ಅಧಿಕಾರಿಗಳ ನಿರ್ಲಕ್ಷ್ಯತನ ಹಾಗೂ ಸರ್ಕಾರದ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದೆ ಎಂದು ಹೇಳಿದರು,
ಇದೆ ಸಂದರ್ಭದಲ್ಲಿ ರೈತ ಸಂಘಟನೆ ಮುಖಂಡ ಮರಲಿಂಗ ನಾಯಕ, ಎಸ್ ಎಫ್ ಐ ತಾಲೂಕು ಅಧ್ಯಕ್ಷ ಎಸ್ ಕೆ ಮುಜಮಿಲ್, ಬಾಷ್ ಸಾಬ್ ಶ್ಯಾನರದೊಡ್ಡಿ, ಸತೀಶ್,ಮೈಬಬೂ ಪಲಕನಮರಡಿ, ವಿದ್ಯಾರ್ಥಿಗಳಾದ ರೇಖಾ ನಾಯಕ, ಮಮತಾ, ಅನು, ಶಿವಲೀಲಾ, ಬಸಮ್ಮ, ಶಿವಗಂಗಾ, ರಮೇಶ್, ಶಶಿಕುಮಾರ್,ಶಿವು,ಬಸವ, ಹನುಮಂತ, ಮತ್ತು ಇತರರು ಇದ್ದರು,