ಚುನಾವಣೆ ಆಯೋಗ ಆದೇಶದ ಹಿನ್ನಲೆಯಲ್ಲಿ ವಿವಿಧ ರಾಜಕೀಯ ಪಕ್ಷದ ಮುಖಂಡರೊ0ದಿಗೆ ಸಭೆ
ರಾಯಚೂರು: ಸಾರ್ವಜನಿಕರು ಮತದಾನದ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ನೋಂದಣಿ ಪ್ರಕ್ರಿಯೆಗೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಅಗತ್ಯ ನೆರವು ನೀಡುವಂತೆ ಅಪರ ಜಿಲ್ಲಾಧಿಕಾರಿ ಡಾ. ಕೆ.ಆರ್.ದುರುಗೇಶ್ ಕೋರಿದರು.
ಜು.25ರ ಸೋಮವಾರ ದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಕೇಂದ್ರ ಚುನಾವಣೆ ಆಯೋಗ ಆದೇಶದ ಪ್ರಕಾರ ಗುರುತಿನ ಚೀಟಿಗೆ ಆಧಾರ್ ನೋಂದಣಿಗೆ ಸಂಬAಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ ದರು.
ಮುಂಬಾರು ಆಗಷ್ಟ್ 1ರಿಂದ ಡಿ.31ವರೆಗೆ ಹೊಸ ಮತದಾರರು ಸೇರ್ಪಡೆ ಹಾಗೂ ಮತದಾನ ಗುರುತಿನ ಚೀಟಿಗೆ ಆಧಾರ್ ನೋಂದಣಿ ಮಾಡಲು ವಿವಿಧ ಕಾರ್ಯಕ್ರಮಗಳು ಮತ್ತು ವಿಶೇಷ ಶಿಬಿರಗಳನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಿಇಒ, ಡಿಇಒ, ಹಾಗೂ ಇಆರ್‌ಒಗಳ ನೇತೃತ್ವದಲ್ಲಿ ನಡೆಯಲಿದ್ದು, ಇದಕ್ಕೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಗಳು ಸಹಕಾರ ನೀಡಬೇಕೆಂದರು.
ಕೇಂದ್ರ ಹಾಗೂ ರಾಜ್ಯ ಚುನಾವಣೆ ಆದೇಶ ಪ್ರಕಾರ ಮತದಾನ ಗುರುತಿನ ಚೀಟಿಗೆ ಆಧಾರ್ ನೋಂದಣಿ ಮಾಡುವುದು ಕಡ್ಡಾಯ ವಾಗಿದ್ದು, ಗರುಡ ಮತ್ತು ವಿಹೆಚ್ ಅ್ಯಪ್‌ಗಳ ಮೂಲಕ ನೋಂದಣಿ ಮಾಡುವಂತೆ ಸಾರ್ವಜನಿಕರಿಗೆ ಸಲಹೆ ನೀಡಬೇಕು. ಅಲ್ಲದೆ ಈ ಕುರಿತು ಮುಂದಿನ ದಿನಗಳಲ್ಲಿ ಸಂಬ0ಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ವಹಿಸಲಾಗುತ್ತದೆ ಎಂದರು.
ಆಫ್ ಲೈನ್‌ನಲ್ಲಿ 6ಬಿ ಫಾರಂನಲ್ಲಿ ಮತದಾರರಿಂದ ಸ್ವಯಂ ಪ್ರೇರಣೆ ಮೂಲಕ ಆಧಾರ್ ಸಂಖ್ಯೆಯನ್ನು ಸಂಗ್ರಹಣೆ ಮಾಡಲು ಮನೆ ಮನೆಗೆ ಬಿಎಲ್‌ಒಗಳನ್ನು ನೇಮಕ ಮಾಡುತ್ತೇವೆ. ಆಧಾರ್ ಕಾರ್ಡ್ ಎಲ್ಲಾ ಭಾರತೀಯ ನಾಗರಿಕರಿಗೆ ಅತ್ಯಗತ್ಯ ದಾಖಲೆ ಯಾಗಿದೆ.
ಇದು ಗುರುತಿನ ಪ್ರಾಥಮಿಕ ರೂಪವಾಗಿದೆ ಮತ್ತು ಡ್ರೈವಿಂಗ್ ಲೈಸೆನ್ಸ್, ಪ್ರಯಾಣ ಟಿಕೆಟ್‌ಗಳು ಮತ್ತು ಮುಂತಾದ ಸೇವೆಗಳ ಸಮೂಹವನ್ನು ಪಡೆದುಕೊಳ್ಳುವ ಅಗತ್ಯವಿದೆ. ವೋಟರ್ ಐಡಿ 18ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಚುನಾವಣೆ ಪ್ರಕ್ರಿಯಲ್ಲಿ ಭಾಗವಹಿಸಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಪಕ್ಷದ ವಕ್ತಾರರು ಹಾಗೂ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.