Friday, 22nd November 2024

ಸಚಿವ ಸಂಪುಟ ಪುನಾರಚಿಸಿದ ಮಮತಾ ಬ್ಯಾನರ್ಜಿ

ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನ್ನ ಸಚಿವ ಸಂಪುಟವನ್ನು ಪುನಾರಚನೆ ಮಾಡಿದ್ದಾರೆ.

ಎಂಟು ಸಚಿವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, ಈ ಪೈಕಿ ಬಿಜೆಪಿ ಮಾಜಿ ಸಂಸದ ಬಬುಲ್ ಸುಪ್ರಿಯೋ ಅವರಿಗೆ ಸ್ಥಾನ ನೀಡಲಾಗಿದೆ.

ಇತ್ತೀಚೆಗಷ್ಟೇ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಸಂಪುಟದಲ್ಲಿದ್ದ ಪಾರ್ಥ ಚಟರ್ಜಿ ಸಿಕ್ಕಿ ಬಿದ್ದಿದ್ದರು. ಈ ದಿನದಲ್ಲಿ ಮಮತಾ, ಪಾರ್ಥ ಚಟರ್ಜಿ ಅವರನ್ನು ಸಂಪುಟದಿಂದ ವಜಾ ಮಾಡಿದ್ದರು.