ವಿಶ್ವವಾಣಿ ಸುದ್ದಿಮನೆ , ಬೆಂಗಳೂರು
ರಾಜಧಾನಿಯ ಬೆಂಗಳೂರಿನಲ್ಲಿ ಇರುವ ಕಬ್ಬನ್‌ಪಾಕ್‌ಗೆ ಹೊಸ ಕಳೆಬಂದಿದೆ. ಎಲ್ಲೋ ಹೋಗಿದ್ದ ಪಕ್ಷಿಗಳು ಮತ್ತೆ ಬಂದಿದ್ದು ಪಾರ್ಕ್‌ನಲ್ಲಿ ಪಕ್ಷಿಗಳ ಕಲರವ ಬಂದಿದ್ದು ಪಾರ್ಕ್‌ನಲ್ಲಿ ಪಕ್ಷಿಗಳ ಕಲರವ ಕೇಳಿಬರುತ್ತಿದೆ. ಆದರೆ, ಪಕ್ಷಿ ಸಂಕುಲ ಆಹಾರ ಹಾಗೂ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕರೋನಾ ಸಂಕಟದಿಂದ ಬೆಂಗಳೂರಿನ ನಗರದಲ್ಲಿ ವಾಹನಗಳ ಓಡಾಟ ತೀರಾ ಇಳಿಮುಖವಾಗಿದ್ದರಿಂದ ಪರಿಸರ ಶುದ್ದವಾಗಿದೆ. ಆದರೆ ಪಕ್ಷಿ ಸಂಕುಲ ಆಹಾರಕ್ಕಾಗಿ ಆ ಕಡೆ ಈ ಕಡೆ ಹಾರಾಡಿ ಏನೂ ಸಿಗದಂತಾಗಿದೆ. ಇನ್ನು ಉದ್ಯಾನವನದಲ್ಲಿ ನೀರಿಗೂ ತತ್ವಾರ ಎದುರಾಗಿದೆ. ಅಲ್ಲಲ್ಲಿ ನೀರನ್ನು ಇಡಲಾಗುತ್ತಿತ್ತು. ಈಗ ಅಂತಹ ಕಾರ್ಯವೇ ಆಗುತ್ತಿಲ್ಲ.
ಪಾರ್ಕ್‌ನಲ್ಲಿ ಮಾನವ ಸಂಚಾರವನ್ನು ಸಂಪೂರ್ಣವಾಗಿ ನಿಷೇದಿಸಿರುವದರಿಂದ ಕಬ್ಬನ್‌ಪಾರ್ಕ್‌ನೊಳಗೆ ನೀರು ಆಹಾರವಿಲ್ಲದೆ ಪಕ್ಷಿಗಳ ಸ್ಥಿತಿ ತ್ರಾಸದಾಯಕವಾಗಿದೆ. ಕಬ್ಬನ್ ಪಾರ್ಕ್ ವೀಕ್ಷಣೆಗೆ ಬರುವವರು ಚೆಲ್ಲುತ್ತಿದ್ದ ಆಹಾರವೇ ಪಕ್ಷಿಗಳಿಗೆ ಹೊಟ್ಟೆ ತುಂಬುತ್ತಿತ್ತು. ಈಗ ಅದೂ ಇಲ್ಲವಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಬ್ಬನ್‌ಪಾರ್ಕ್‌ನಲ್ಲಿ ಹಲವಾರು ಪ್ರಭೇದ ಪಕ್ಷಿಗಳುಬಂದಿವೆ. ಬೆಳಗಿನ ಜಾವ ಹಾಗೂ ಸಂಜೆ ವೇಳೆ ಪಾರ್ಕ್‌ನ ಪಕ್ಕದಲ್ಲಿ ಹಾದುಹೋದರೆ ಪಕ್ಷಿಗಳ ಕಲರವ ಕೇಳಿಬರುತ್ತದೆ. ಈಗ ಆಹಾರ ಹಾಗೂ ನೀರು ಇಲ್ಲದೆ ಪಕ್ಷಿಗಳ ಧ್ವನಿಯೇ ಉಡುಗಿ ಹೋಗುವಂತಾಗುತ್ತಿದೆ.
ಪಾರ್ಕ್‌ನ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ತೋಟಗಾರಿಕೆ ಇಲಾಖೆ ಅಲ್ಲಲ್ಲಿ ಪಕ್ಷಿಗಳಿಗೆ ನೀರನ್ನು ಒದಗಿಸುವುದಲ್ಲದೆ, ಕೆಲ ಸಂಘ ಸಂಸ್ಥೆಗಳೊಂದಿಗೆ ಚರ್ಚೆ ಮಾಡಿ ಅವರ ಮೂಲಕ ಪಕ್ಷಿಗಳಿಗೆ ಹಾಗೂ ಪ್ರಾಣಿಗಳಿಗೆ ಆಹಾರ ಒದಗಿಸುವಂತೆ ಕೋರಬಹುದಾಗಿತ್ತು. ಈ ಕಾರ್ಯವನ್ನು ಮಾಡದ ಪಕ್ಷಿಗಳು ವಿಲವಿಲ ಒದ್ದಾಡುವಂತಾಗಿದೆ.
ಇದನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತರೊಬ್ಬರು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿದ್ದರು. ಈವೇಳೆ ಮುಖ್ಯ ನ್ಯಾಯಮೂರ್ತಿ ಅವರು ತೋಟಗಾರಿಕೆ ಇಲಾಖೆಗೆ ಪತ್ರಗೆ ಬರೆದು ಪ್ರತಿನಿತ್ಯ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ. ಇದರಿಂದ ಕೆಲ ದಿನಗಳ ಕಾಲ ಪಕ್ಷಿಗಳಿಗೆ ನೀರನ್ನು ನೀಡುವ ಕಾರ್ಯವಾಯಿತು. ಆದರೆ ನಂತರ ತೋಟಗಾರಿಕೆ ಇಲಾಖೆ ಮರೆತುಬಿಟ್ಟಿದೆ. ಇದರಿಂದ ಪಕ್ಷಿಗಳು ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅದ್ದರಿಂದಾಗಿ ಮತ್ತೆ ತೋಟಗಾರಿಕೆ ಪಕ್ಷಿಗಳಿಗೆ ಆಹಾರ ನೀರು ದೊರೆಯುವಂತೆ ಮಾಡಬೇಕಾಗಿದೆ.