Monday, 25th November 2024

36 ಕೋರೊನಾ ಪಾಸಿಟಿವ್ ; ಸಾವಿನ ಸಂಖ್ಯೆ 36

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ರಾಜ್ಯದ ಶನಿವಾರ ಹೊಸ 36 ಕರೋನಾ ಪಾಸಿಟಿವ್ ಕೇಸುಗಳು ಪತ್ತೆಯಾಗಿದ್ದು, ಈವರೆಗೆ ಸೋಂಕಿಗೆ 36 ಮಂದಿ ಬಲಿಯಾಗಿದ್ದಾರೆ.
 ಒಟ್ಟಾರೆ ರಾಜ್ಯದಲ್ಲಿ 1092 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, 496 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. 559 ಮಂದಿ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 13 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ 106 ಜನರನ್ನ ತಪಾಸಣೆ ಮಾಡಲಾಗಿದ್ದು, 6300 ಸ್ಯಾಂಪಲ್ಸ್ ಗಳನ್ನ ಪರೀಕ್ಷಿಸಲಾಗಿದೆ. ವಿದೇಶಿದಿಂದ ಬಂದಿರುವ ಪ್ರಯಾಣಿಕರು ಮೊದಲ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸದ ನಂತರ ಅವರ ಜಿಲ್ಲೆಗೆ ಹೋದ್ಮೆಲೆ ನೆಗೆಟಿವ್ ಇದ್ದರೂ 14 ದಿನ‌ ಹೋಂ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.
 ಕೋವಿಡ್ ವಲ್ಲದ ಇತರೆ ಆರೋಗ್ಯ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರನ್ನು ನಿರ್ವಹಣೆ ಮಾಡುವ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ. ವಲಸೆ ಕಾರ್ಮಿಕರು ರಸ್ತೆ ಅಥವಾ ರೈಲ್ವೆ ಹಳಿಗಳ ಮೂಲಕ ಸಾಗದ, ವಿಶೇಷವಾಗಿ ನಿಯೋಜಿಸಿರುವ ಬಸ್ ಮತ್ತು ಶ್ರಮಿಕ್ ರೈಲುಗಳ ಮೂಲಕ‌ ಪ್ರಯಾಣ ಮಾಡುವಂತೆ ಸೂಚಿಸಲಾಗಿದೆ.
ಗಡಿಭಾಗದ ಜಿಲ್ಲೆಗಳಲ್ಲಿ ಕೋವಿಡ್-19 ನಿಯಂತ್ರಣ ಚಟುವಟಿಕೆಗಳನ್ನು ಸುಗಮವಾಗಿ ನಿರ್ವಹಿಸಲು ಅವಶ್ಯವಿರುವ ಲಾಜಿಸ್ಟಿಕ್ಸ್ ಹಾಗೂ ಮಾನವ ಸಂಪನ್ಮೂಲದ ನಿರ್ವಹಣೆಯ ಜವಾಬ್ದಾರಿಯನ್ನು ಸಂಬಂಧಿತ ಪ್ರಾದೇಶಿಕ ಆಯುಕ್ತರಿಗೆ ವಹಿಸಿರುತ್ತಾರೆ.
*ಕ್ವಾರಂಟೈನ್ ನಲ್ಲಿ ಇರುವರಿಗೆ ಸರಿಯಾದ ಆಹಾರ ಪೂರೈಕೆ ಮಾಡದ ಆರೋಪ*
ಇತ್ತ ವಿದೇಶಗಳಿಂದ ಹಾಗೂ ಹೊರ ರಾಜ್ಯದಿಂದ ಬರುವ ಪ್ರಯಾಣಿಕರು ಕಡ್ಡಾಯ ಕ್ವಾರಂಟೈನ್ ಇರಬೇಕು. ಈ ವೇಳೆ ಸರ್ಕಾರಿ ಕ್ವಾರಂಟೈನ್  ಅಥವಾ ಇಷ್ಟದ ಖಾಸಗಿ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಆಗಬಹುದು. ಆದರೆ ಇಂತಹ ಖಾಸಗಿ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಆದವರಿಗೆ ಸರಿಯಾದ ತಿಂಡಿ ಊಟದ ವ್ಯವಸ್ಥೆ ಇಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಈ ನಿಟ್ಟಿನಲ್ಲಿ ಎಚ್ಚೇತುಕೊಂಡಿರುವ ಇಲಾಖೆ, ಸ್ವಚ್ಚತೆ‌ಹಾಗೂ ಆಹಾರ ಪೂರೈಕೆ ಬಗ್ಗೆ ದೂರು ಗಳು ಬಂದಿವೆ. ಕ್ವಾರಂಟೈನ್ ಬಂದವರನ್ನ ಗೆಸ್ಟ್ ಗಳ ರೀತಿಯಲ್ಲಿ ನೋಡಿಕೊಳ್ಳಬೇಕು. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರುಗಳ ಸಂಬಂಧ ಪರಿಶೀಲಿಸುವಂತೆ ಸೂಚಿಸಲಾಗಿದೆ ಅಂತ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
 ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚಿಸಿ ಈ ರೀತಿ ಕೆಲಸದಲ್ಲಿ ತೊಡಗಿರುವ ಹೋಟೆಲ್ ಗಳ ಲೈಸನ್ಸ್ ಕ್ಯಾನ್ಸಲ್ ಮಾಡುವ ಅವಕಾಶ ಇರಲಿದೆ. ಈ ಬಗ್ಗೆ ಮಾತಾನಾಡಲಾಗುವುದು ಅಂತ ತಿಳಿಸಿದ್ದಾರೆ.