Saturday, 14th December 2024

೭೫ ನೇ ಸ್ವಾತಂತ್ರ÷್ಯ ಅಮೃತ ಮಹೋತ್ಸವ: ಪೂರ್ವಭಾವಿ ಸಭೆ

ಇಂಡಿ : ಜಿಲ್ಲೆಯಲ್ಲಿಯೇ ಅತೀ ದೊಡ್ಡದಾದ ಉಪ ವಿಭಾಗ ಹೊಂದಿರುವ ಇಂಡಿ ತಾಲೂಕಿನಲ್ಲಿ ಮೈಸೂರು ದಸರಾ ಹಬ್ಬದಲ್ಲಿ ಕಂಗೊಳಿಸುವ ಬಣ್ಣ,ಬಣ್ಣದ ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ಇಂಡಿ ತಾಲೂಕಿನಾಧ್ಯಂತ ೭೫ ನೇ ಸ್ವಾತಂತ್ರ÷್ಯದ ಅಮೃತ ಮಹೋತ್ಸವ ತಾಲೂಕು ಆಡಳಿತ ವಿಜ್ರಂಭಣೆಯಿಂದ ಆಚರಿಸಲು ರೂಪುರೇಷ ಗಳನ್ನು ತಯಾರಿಸಿಕೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಅವರು ಶನಿವಾರ ಪಟ್ಟಣದ ಪ್ರವಾಸಿ ಮಂದಿರದ ಸಭಾ ಭವನದಲ್ಲಿ ಕರೆದ ೭೫ ನೇ ಸ್ವಾತಂತ್ರ÷್ಯ ಅಮೃತ ಮಹೋತ್ಸವ ಹಾಗೂ ನೂಲಿ ಚಂದಯ್ಯನವರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

೭೫ ನೇ ಸ್ವಾತಂತ್ರ÷್ಯ ಅಮೃತ ಮಹೋತ್ಸವ ಆಚರಣೆ ವಿಶೇಷ ಮೆರಗು ಬರುವ ಹಾಗೆ ಆಚರಣೆ ಮಾಡಲು ಬೇಕಾದ ಎಲ್ಲ ಸಿದ್ದತೆಗಳು ತಯಾರಿಸಿಕೊಳ್ಳಬೇಕು.ಅ.೧೩ ರಿಂದ ೧೫ ವರೆಗೆ ತಾಲೂಕು ಮಟ್ಟದ ಕಚೇರಿಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಕಚೇರಿ ಗಳಿಗೆ ಸುಣ್ಣ,ಬಣ್ಣದಿಂದ ಶೃಂಗರಿಸಿ, ದೀಪಾಲಂಕಾರ ಮಾಡಬೇಕು ಎಂದು ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದ ಮೇಲೆ ಇಲ್ಲವೆ ತಾಲೂಕು ಕ್ರೀಡಾಂಗಣದ ಮೇಲೆ ದೊಡ್ಡದಾದ ಬಲೂನ ಹಾರಿಬಿಡಬೇಕು.ಇಂಡಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಐತಿಹಾಸಿಕ ಚರಿತ್ರೆಯನ್ನು ಮೆಲಕು ಹಾಕುವ ಬರವನ್ನು ಎಸಿ ಕಚೇರಿಯಲ್ಲಿ ಬರಹ ರೂಪದಲ್ಲಿ ಅಳವಡಿಸಬೇಕು ಎಂದು ಹೇಳಿದರು.

ರಾಷ್ಟçನಾಯಕರ ಜಯಂತಿ ಆಚರಣೆಯಲ್ಲಿ ಅವರನ್ನು ಒಂದು ಜಾತಿಗೆ ಸಿಮೀತಗೊಳಿಸುವಂತೆ ಅವರ ಜಯಂತಿ ಕಾರ್ಯಕ್ರಮ ಆಚರಣೆ ಮಾಡುವುದು ಬೇಡ. ಅವರೆಲ್ಲ ದೇಶದ ಆಸ್ತಿ ಪ್ರತಿಯೊಬ್ಬರು ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ಸಲ್ಲಿಸಬೇಕು. ತಾಲೂಕು ಮಟ್ಟದ ಅಧಿ ಕಾರಿಗಳು ರಾಷ್ಟç ನಾಯಕರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬಹಳ ಕಡಿಮೆ. ಹೀಗಾಗಬಾರದು.ತಾಲೂಕು ಮಟ್ಟದ ಅಧಿಕಾರಿಗಳೇ ಸರ್ಕಾರದ ಪ್ರತಿನಿಧಿಯಾಗಿ ಸರ್ಕಾರ ಅದೇಶ ಮಾಡಿದ ಮಹಾನ್ ನಾಯಕರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವುದು ಹೇಗೆ.ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು. ಎಲ್ಲ ಮಹಾನ ನಾಯಕರ ಜಯಂತಿ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಸಿಬ್ಬಂದಿ ವರ್ಗ ಉಪಸ್ಥಿತಿರಿದ್ದು ಅವರಿಗೆ ಗೌರವ ಸಲ್ಲಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿ ಕಾರಿಗಳಿಗೆ ತಾಕೀತು ಮಾಡಿದರು.

ದೇಶದ ಮಹಾನ್ ನಾಯಕರನ್ನು ಗೌರವಿಸುವ ಸಲುವಾಗಿ ಸರ್ಕಾರ ಅಂತಹ ಮಹನೀಯರ ಜಯಂತಿಯನ್ನು ಆಚರಣೆಗೆ ಆದೇಶ ಮಾಡಿದೆ. ಅಂದು ನೌಕರರಿಗೆ ರಜಾ ದಿನವು ನೀಡುತ್ತಿದೆ. ರಜಾ ದಿನದಂದು ನಾಲ್ಕೆ÷Êದು ಗಂಟೆ ಗಳ ಕಾಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರಿಗೆ ಗೌರವಿಸಬೇಕು.ರಾಷ್ಟç ನಾಯಕರನ್ನು ಒಂದು ಜಾತಿ,ವರ್ಗಕ್ಕೆ ಸಿಮೀತಗೊಳಿಸಬಾರದು.ಈ ರೀತಿ ಮುಂದೆ ಆಗದಂತೆ ಪ್ರತಿಯೊಬ್ಬ ತಾಲೂಕು ಮಟ್ಟದ ಅಽಕಾರಿ ಜಾಗ್ರತ ವಹಿಸಬೇಕು ಎಂದು ಹೇಳಿದರು.

ತಹಶೀಲ್ದಾರ ನಾಗಯ್ಯ ಹಿರೇಮಠ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.ಇಇ ಮನೋಜಕುಮಾರ ಗಡಬಳ್ಳಿ, ತಾಪಂ ಇಒ ಸುನೀಲ ಮದ್ದಿನ, ಎಇಇ ಎಸ್.ಆರ್.ರುದ್ರವಾಡಿ,ದಯಾನಂದ ಮಠ,ಬಿ.ಜೆ.ಇಂಡಿ,ಸಿಡಿಪಿಒ ಸುಮಂಗಲಾ ಹಿರೇಮನಿ, ಡಾ.ಅರ್ಚನಾ ಕುಲಕರ್ಣಿ, ಶಸಾಪ ಅಧ್ಯಕ್ಷ ಆರ್.ವಿ.ಪಾಟೀಲ,ರಾಮಸಿಂಗ ಕನ್ನೊಳ್ಳಿ,ಬಿಇಒ ವಸಂತ ರಾಠೋಡ,ಪುರಸಭೆ ಮುಖ್ಯಾಧಿಕಾರಿ ಲಕ್ಷಿ÷್ಮÃಶ ,ಬಸವರಾಜ ಗೊರನಾಳ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ,ಸAಸ್ಥೆಯ ಮುಖ್ಯಸ್ಥರು ಸಭೆಯಲ್ಲಿ ಇದ್ದರು.