Friday, 22nd November 2024

ಚಹಾನೂ ಕುಡೀರಿ…ಕಪ್ ಅನ್ನು ತಿನ್ನಿ…

ವಡೋದರಾ: ಇಲ್ಲೊಂದೆಡೆ ತಯಾರಿಸುವ ಚಹಾ ರುಚಿಯನ್ನು ನೀವು ಬೇರೆಲ್ಲೂ ನೋಡಿರಲು ಸಾಧ್ಯವೇ ಇಲ್ಲ. ಕಾರಣ,

ಗುಜರಾತ್‌ನ ವಡೋದರಾದಲ್ಲಿ ಪ್ಲಾಸ್ಟಿಕ್ ಅಥವಾ ಮಣ್ಣಿನ ಕಪ್‌ಗಳಲ್ಲಿ ಚಹಾ ವಿತರಿಸುವುದಿಲ್ಲ.

ಚಾಕೊಲೇಟ್-ರುಚಿಯ ಕಪ್‌ಗಳಲ್ಲಿ ಮಾರಾಟ ಮಾಡುವ ಸ್ಟಾಲ್ ಇದೆ. ಇದೊಂದು ಕೋನ್ ಐಸ್ಕ್ರೀಂ ರೀತಿ ಇದ್ದಂತೆ. ಚಹಾ ಕುಡಿದಾದ ಬಳಿಕ ಕಪ್ ಅನ್ನು ಎಸೆಯುವಂತಿಲ್ಲ. ಚಹಾ ಸೇವನೆ ಬಳಿಕ ಬಿಸ್ಕೆಟ್ ತಿನ್ನುವಂತೆ ಕಪ್ ಅನ್ನು ತಿನ್ನಬಹುದು.

ಅನಾಥಾಶ್ರಮದಲ್ಲಿ ಬೆಳೆದ ನಾಲ್ವರು ಸ್ನೇಹಿತರು ಈ ಪರಿಕಲ್ಪನೆಯೊಂದಿಗೆ ಹೊರತಂದಿದ್ದಾರೆ. ಪ್ಲಾಸ್ಟಿಕ್ ಅನ್ನು ನಿಷೇಧಿಸಿದ ತಕ್ಷಣ, ಹೊಸದನ್ನು ಪ್ರಯತ್ನಿಸಲು ನಿರ್ಧರಿಸಿದ್ದಾರೆ. ಮರಗಳನ್ನು ಕಡಿದ ನಂತರ ತಯಾರಿಸಿದ ಪ್ಲಾಸ್ಟಿಕ್‌ ಜೊತೆಗೆ ಪೇಪರ್‌ ಕಪ್‌ಗಳೂ ಕೂಡ ಹಾನಿಕಾರಕ.

ಹೀಗಾಗಿ ಈ ರೀತಿಯ ಆಲೋಚನೆ ಬಂದಿದ್ದಾಗಿ ಹೇಳಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಇಷ್ಟಪಟ್ಟಿದ್ದಾರೆ.