Sunday, 15th December 2024

’ಆಕಾಶ ಏರ್’ ಮೊದಲ ವಿಮಾನ ಹಾರಾಟ ಯಶಸ್ವಿ

ಮುಂಬೈ: ಉದ್ಯಮಿ ರಾಕೇಶ್ ಜುಂಜುನ್‌ವಾಲಾ ಮಾಲೀಕತ್ವದ ‘ಆಕಾಶ ಏರ್’ ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಭಾನು ವಾರ ಕಂಡಿದೆ. ಮುಂಬೈ- ಅಹಮದಾಬಾದ್ ಮಾರ್ಗದಲ್ಲಿ ಮೊದಲ ವಿಮಾನ ಹಾರಾಟ ಯಶಸ್ವಿಯಾಗಿ ನಡೆಸಿದೆ.

ಬೋಯಿಂಗ್ 737 ಮ್ಯಾಕ್ಸ್ ವಿಮಾನವನ್ನು ಆಕಾಶ್‌ ಏರ್ ಹಾರಾಟ ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ವಾರಕ್ಕೊಮ್ಮೆ ಕಾರ್ಯನಿರ್ವಹಿಸುವ 28 ವಿಮಾನಗಳ ಹಾಗೆಯೇ ಆ.13 ರಿಂದ ಬೆಂಗಳೂರು- ಕೊಚ್ಚಿ ಮಾರ್ಗದಲ್ಲಿ ಹಾರುವ 28 ವಿಮಾನ ಗಳ ಟಿಕೆಟ್‌ ಅನ್ನು ಮಾರಾಟ ಮಾಡಲಿದೆ ಎಂದು ತಿಳಿಸಿತ್ತು.

ಆಗಸ್ಟ್‌ನಲ್ಲಿ ಡಿಜಿಸಿಎಯಿಂದ ಗ್ರೀನ್ ಸಿಗ್ನಲ್ ಪಡೆದ ನಂತರ 72 ಮ್ಯಾಕ್ಸ್ ವಿಮಾನಗಳನ್ನು ಖರೀದಿಸಲು ಆಕಾಶ್ ಏರ್ ಕಳೆದ ವರ್ಷ ನವೆಂಬರ್ 26 ರಂದು ಬೋಯಿಂಗ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

ಆಗಸ್ಟ್ 13 ರಿಂದ ಬೆಂಗಳೂರು-ಕೊಚ್ಚಿ ಮಾರ್ಗದಲ್ಲಿ 28 ವಿಮಾನಗಳ ಟಿಕೆಟ್ ಮಾರಾಟವನ್ನು ಪ್ರಾರಂಭಿಸಿದೆ ಎಂದು ಆಕಾಶ ಏರ್ ಶುಕ್ರವಾರ ಪ್ರಕಟಣೆ ಯಲ್ಲಿ ತಿಳಿಸಿದೆ.

ಆಗಸ್ಟ್ 23ರಿಂದ ಬೆಂಗಳೂರು -ಅಹಮದಾಬಾದ್; ಸೆಪ್ಟೆಂಬರ್ 15ರಿಂದ ಮುಂಬೈ -ಚೆನ್ನೈ, ಆಗಸ್ಟ್ 30ರಿಂದ ಬೆಂಗಳೂರು-ಮುಂಬೈ ನಡುವೆ ವಿಮಾನ ಹಾರಾಟವನ್ನು ಸಂಸ್ಥೆ ಪ್ರಕಟಿಸಿದೆ.