ರಾಯಚೂರು: ಜಿಲ್ಲೆಯ ಮಾನವಿ ವಲಯ ವ್ಯಾಪ್ತಿಯ ದೇವದರ್ಗ ತಾಲ್ಲೂಕಿನ ಆಲ್ಕೊಡ್ ತಾಂಡಾದಲ್ಲಿ ಅಬಕಾರಿ ಇಲಾಖೆಯ ವತಿಯಿಂದ ನಡೆದ ದಾಳಿಯಲ್ಲಿ ಆರೋಪಿಗಳಾದ ಪಾಂಡು ತಂದೆ ಬಸಪ್ಪ ಮತ್ತು ವಾಸಪ್ಪ ತಂದೆ ಸಾಬಯ್ಯಾ ಎಂಬವರ ಹತ್ತಿರ ೩೫ ಲೀಟರ್ ಕಳ್ಳಬಟ್ಟಿ ಸಾರಾಯಿ ಹಾಗೂ ಸಾರಯಿ ಸಾಗಣಿಕೆಗೆ ಬಳಸಲಾಗುತ್ತಿದ್ದ ಒಂದು ದ್ವಿಚಕ್ರ ವಾಹನ ವನ್ನು ಜಪ್ತು ಪಡಿಸಿ ಕೊಳ್ಳಲಾಗಿದ್ದು ಅರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ವಲಯ ನೀರಿಕ್ಷಕ ಬಸವರಾಜ ಕಾಕರಗಲ್ ಮಾಹಿತಿ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ ಶನಿವಾರ ಖಚಿತ ಮಾಹಿತಿ ಮೇರೆಗೆ ಮಾನ್ಯ ಅಬಕಾರಿ ಅಪರ ಆಯುಕ್ತರು ಡಾ.ವೈ. ಮಂಜು ನಾಥ್ ಅವರ ಆದೇಶದಂತೆೆ ಮಾನ್ಯ ಅಬಕಾರಿ ಜಂಟಿ ಆಯುಕ್ತರು ಬಸವರಾಜ ಹಡಪದ ರವರ ನಿÀರ್ದೇಶನದಂತೆ ಮಾನ್ಯ ಅಬಕಾರಿ ಉಪ ಆಯುಕ್ತರು ರಾಯಚೂರು ಜಿಲ್ಲೆ ರಾಯಚೂರು ಹಾಗೂ ಅಬಕಾರಿ ಉಪ ಅಧೀಕ್ಷಕರು ಕೃಷ್ಣ ಹರಿ ರವರ ಮರ್ಗರ್ಶನದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದರು.
ಅಬಕಾರಿ ಉಪ ನಿರೀಕ್ಷಕರಾದ ಶಿವಲಿಂಗ ಸ್ವಾಮಿ, ಅಬಕಾರಿ ಇಲಾಖೆಯ ಪೇದೆಗಳಾದ ಆಂಜಿನಯ್ಯ, ವೆಂಕೋಬ, ಕಲ್ಯಾಣ, ನಾಗನಗೌಡ, ಮಹಿಬೊಬ್ ಮತ್ತು ರಸೂಲ್ ಇದ್ದರು.