Friday, 22nd November 2024

ನಿರ್ಗಮಿತ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡುಗೆ ಗೌರವಪೂರ್ಣ ಬೀಳ್ಕೊಡುಗೆ

ನವದೆಹಲಿ: ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸದಸ್ಯರಾಗಿ ಐದು ವರ್ಷ ಯಶಸ್ವಿಯಾಗಿ ಕೆಲಸ ಮಾಡಿದ ಎಂ.ವೆಂಕಯ್ಯ ನಾಯ್ಡು ಅವರಿಗೆ ಸೋಮ ವಾರ ಸದನದಲ್ಲಿ ಗೌರವಪೂರ್ಣ ಬೀಳ್ಕೊಡುಗೆ ನೀಡಲಾ ಯಿತು.

ನಾಯ್ಡು ಅವರ ಅಧಿಕಾರಾವಧಿ ಬುಧವಾರ ಅಂತ್ಯವಾಗಲಿದ್ದು, ಉತ್ತರಾಧಿ ಕಾರಿ ಜಗದೀಪ್ ಧನಕರ್ ಅವರು ಆ.11ರಂದು ಪ್ರಮಾಣ ವಚನ ಸ್ವೀಕರಿಸ ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಇತರ ಉನ್ನತ ನಾಯಕರು ಮತ್ತು ಸದಸ್ಯರು ವೆಂಕಯ್ಯ ನಾಯ್ಡು ಅವರ ಗುಣಗಾನ ಮಾಡಿದರು.

ಸದನದ ಬೀಳ್ಕೊಡುಗೆ ಬಳಿಕ ಸಂಜೆ ಜಿ.ಎಂ.ಸಿ ಬಾಲಯೋಗಿ ಆಡಿಟೋರಿಯಂನಲ್ಲಿ ಸದನದ ಎಲ್ಲ ಸದಸ್ಯರ ಪರವಾಗಿ ನಾಯ್ಡು ಅವರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. ಅಲ್ಲಿ ಪ್ರಧಾನ ಮಂತ್ರಿಗಳು ನಾಯ್ಡು ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸ ಲಿದ್ದಾರೆ.

ರಾಜ್ಯಸಭೆಯ ಉಪಾಧ್ಯಕ್ಷರು ಬೀಳ್ಕೊಡುಗೆ ಭಾಷಣ ಮಾಡಲಿದ್ದಾರೆ. ಬಳಿಕ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷ ರಾಗಿದ್ದ ನಾಯ್ಡು ಅವರ ಅವಯ ನಡೆದ ಯಶಸ್ವಿ ಅನುಷ್ಠಾನಗಳನ್ನು ವಿವರಿಸುವ ಪುಸ್ತಕವನ್ನು ಪ್ರಧಾನ ಮಂತ್ರಿಯವರು ಬಿಡುಗಡೆ ಮಾಡಲಿದ್ದಾರೆ. ನಂತರ ಸಂತೋಷ ಕೂಟ ನಡೆಯಲಿದೆ.