ಕಳೆದ ತಿಂಗಳು ವರದಿಯಾದ ಈ ದಾಳಿಯನ್ನ ಈಗ ದೃಢಪಡಿಸಲಾಗಿದ್ದು, ದೋಷವನ್ನ ಸರಿಪಡಿಸಲಾಗಿದೆ ಎಂದು ಕಂಪನಿ ಹೇಳಿದೆ.
ಸಧ್ಯ 5.4 ಮಿಲಿಯನ್ ಬಳಕೆದಾರರ ಡೇಟಾ ದುರುದ್ದೇಶಪೂರಿತ ದಾಳಿಕೋರನ ಕೈಯಲ್ಲಿದೆ. ಸ್ಥಳ, ಯುಆರ್ಎಲ್, ಪ್ರೊಫೈಲ್ ಚಿತ್ರ ಮತ್ತು ಇತರ ಡೇಟಾ ದಂತಹ ಮಾಹಿತಿಯೊಂದಿಗೆ ಸುಮಾರು 5,485,636 ಖಾತೆಗಳ ಡೇಟಾವನ್ನ ಹೊಂದಿರುವುದಾಗಿ ದಾಳಿಕೋರ ಕಳೆದ ತಿಂಗಳು ಹೇಳಿದ್ದಾನೆ.
ಸಕ್ರಿಯ ಟ್ವಿಟರ್ ಖಾತೆ ಪರಿಶೀಲಿಸಲು ಮತ್ತು ಅವರ ಮಾಹಿತಿ ಪಡೆಯಲು ಇಮೇಲ್ನ ಫೋನ್ ಸಂಖ್ಯೆಯನ್ನು ಪ್ರಶ್ನಿಸಲು ಯಾರಿಗಾದರೂ ಅವಕಾಶ ನೀಡುವ ದೌರ್ಬಲ್ಯವನ್ನ ದಾಳಿಕೋರರು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.