ಇಂಡಿ: ಸತ್ಯ ಪ್ರತಿಪಾದನಾ ಸತ್ಯಾಗ್ರಹವನ್ನು ಮಾಡುತ್ತಿರುವ ಬೇಡಜಂಗಮರನ್ನು ಬಂಧಿಸಿರುವುದನ್ನು ಖಂಡಿಸಿ ತಾಲೂಕಾ ಬೇಡ ಜಂಗಮ ಒಕ್ಕೂಟ,ಕ್ಷೇಮಾಭಿವೃದ್ದಿ ಸಂಘ ಇಂಡಿ ವತಿಯಿಂದ ಅನೇಕ ಮಠಾಧೀಶರು ಹಾಗೂ ಬೇಡಜಂಗಮ ಸಮಾಜದ ಮುಖಂಡರು ಸೋಮವಾರ ಮಿನಿವಿಧಾನಸೌಧಾಕ್ಕೆ ತರೆಳಿ ತಹಶೀಲ್ದಾರ ಕಾರ್ಯಾಲಯದ ಶಿರಸ್ತೆದಾರ ರೇವಡಿಗಾರ ಮೂಲಕ ಕರ್ನಾಟಕ ಸರಕಾರದ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಂಥನಾಳದ ವೃಷಭಲಿಂಗ ಮಹಾಸ್ವಾಮಿಗಳು ಮಾತನಾಡಿ ಬೇಡ ಜಂಗಮ ಪರಿಶಿಷ್ಠ ಜಾತಿ ಪ್ರಮಾಣ ಪತ್ರ ಕೊಡಬೇಕು. ಬೇಡ ಜಂಗಮರ ಹೋರಾಟ ನಾಡಿನ ಪರಮ ಪೂಜ್ಯರ ನೈತೃತ್ವದಲ್ಲಿ ಮುಖ್ಯ ಮಂತ್ರಿಗಳಿಗೆ ಬೇಡ ಜಂಗಮ ಮಠಾ ಧೀಶರು ಪಾದಯಾತ್ರೆ ಮೂಲಕ ಮನವಿ ಕೊಡುವಾಗ ಬಂಧಿಸಿರುವುದು ಸಂವಿಧಾನ ಮತ್ತು ಮಠಾಧೀಶರಿಗೆ ಅವಮಾನ ಮಾಡಿದಂತಾಗಿದೆ.
ನಾವು ಬೇರೆಯವರ ಮನಸ್ಸಿಗೆ ನೋವಾಗುವಂತೆ ಪ್ರತಿಭಟನೆ ಮಾಡುತ್ತಿಲ್ಲ .ಮತ್ತು ಇನ್ನೋಬ್ಬರಿಂದ ಕಿತ್ತಿ ಕೊಳ್ಳುತ್ತಿಲ್ಲ ಸಂವಿಧಾನ ಬದ್ದವಾಗಿ ನಮ್ಮ ಹಕ್ಕು ಕೊಡಿ ಎನ್ನುತ್ತೇವೆ. ಮುಖ್ಯ ಮಂತ್ರಿಗಳಾದ ಬಸವರಾಜ ಬೋಮ್ಮಾಯಿ ಯವರು ಕೂಡಲೆ ಪರಿಶಿಷ್ಠ ಜಾತಿ ಪ್ರಮಾಣ ಪತ್ರ ಶೀಘ್ರ ಬಗೆಹರಿಸಬೇಕು ಎಂದು ನಾಡಿನ ಮಠಾಧೀಶರ ಪರವಾಗಿ ಮನವಿ ಮಾಡಿದರು.
ಯಾರ ಹಕ್ಕು ಕಸಿದುಕೊಳ್ಳುವುದಿಲ್ಲ ನಮ್ಮ ಹಕ್ಕಿಗಾಗಿ ಹೋರಾಟ ನಡೆದಿದೆ ಕೂಡಲೆ ಸರಕಾರ ಎಚ್ಚೇತ್ತು ಬೇಡಜಂಗಮರಿಗೆ ಪರಿಶಿಷ್ಠ ಜಾತಿ ಪ್ರಮಾಣ ಪತ್ರ ಶೀಘ್ರ ಇತ್ಯೆರ್ಥ ಪಡಿಸಬೇಕು. ನಾವು ಒಂದೇ ಸಮಾಜದ ಒಳಿತಿಗಾಗಿ ಇರುವುದಿಲ್ಲ ಒಳ್ಳೆಯ ಪರ ಎಲ್ಲರಿಗಾಗಿ ಇದ್ದೇವೆ ಎಂದು ಹತ್ತಳ್ಳಿಯ ಗುರುಪಾದೇಶ್ವರ ಶ್ರೀಗಳು ಹೇಳಿದರು.
ತಡವಲಗಾ ಶ್ರೀಮಠದ ರಾಚೋಟೇಶ್ವರ ಮಹಾಸ್ವಾಮಿಗಳು, ಮರುಘೇಂದ್ರ ಮಹಾಸ್ವಾಮಿಗಳು, ಮೌನೇಂದ್ರ ಶಿವಾಚಾರ್ಯರರು, ಅಗರಖೇಡದ ಪ್ರಭುಲಿಂಗೇಶ್ವರ ಮಹಾಸ್ವಾಮಿಗಳು,ರೋಡಗಿಯ ಶಿವಲಿಂಗೇಶ್ವರ ಶಿವಾಚಾರ್ಯರರು ಸಾನಿಧ್ಯವಹಿಸಿದರು.
ಶಿವಯೋಗಿ ರೂಗಿಮಠ, ಸೋಮಯ್ಯ ಹಿರೇಪಠ, ಎಸ್.ಎಸ್ ರೂಗಿಮಠ, ಷೆಡಕ್ಷರಿ ಹಿರೇಮಠ, ಮುತ್ತು ಹಿರೇಮಠ, ಸೋಮಯ್ಯ ಚಿಕ್ಕಮಠ, ರೇವಣಸಿದ್ದ ಸೇರಿದಂತೆ ನೂರಾರು ಬೇಡ ಜಂಗಮರು ಮನವಿಯಲ್ಲಿದ್ದರು.