ಇಂಡಿ: ತಾಲೂಕಿನ ಬಸನಾಳ ಗ್ರಾಮದ ಸುಮಾರು ೧೦ ಜನರಿಗೆ ಅಂಬೇಡ್ಕರ ನಿಗಮದಿಂದ ಭೂಮಿ ಮಂಜೂರ ಆಗಿದೆ.
ಜಮೀನು ಹಂಚಿಯಾದರೂ ಕೂಡಾ ೩೦ ವರ್ಷಗಳಿಂದ ಸರಹದ್ದು ಹಾಕಿಲ್ಲ ಹೀಗಾಗಿ ಉಳುಮೆ ಮಾಡುವ ರೈತರಿಗೆ ಸಾಕಷ್ಟು ತೊಂದರೆಯಾಗಿದೆ . ಕೂಡಲೆ ಸಂಬ0ದಿಸಿದ ಇಲಾಖೆಯವರು ಸರಹದ್ದು ಹಾಕಿ ಬಡ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದಿ0ದ ತಹಶೀಲ್ದಾರ ನಾಗಯ್ಯ ಹಿರೇಮಠ ಇವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಅಧ್ಯಕ್ಷ ಭೀಮರಾಯ ಪೂಜಾರಿ, ಜೆ.ಡಿ.ಎಸ್ ಮುಖಂಡ ಬಿ.ಡಿ ಪಾಟೀಲ, ಸಿದ್ದು ಡಂಗಾ, ಭೀಮಕ್ಕ ಮಸನಾಳ, ಬೌರಮ್ಮ ಬಜೇಂತ್ರಿ, ಪಾರ್ವತಿ ಐರೋಡಗಿ ತಾರಾಬಾಯಿ ರಾಠೋಡ ಮನವಿಯಲ್ಲಿದ್ದರು.