Sunday, 15th December 2024

ಅಮೆಜಾ಼ನ್ ಇಂಡಿಯಾದಿಂದ ಉದ್ಯಮಿಗಳಿಗೆ ಲಾಜಿಸ್ಟಿಕ್ಸ್ ಉದ್ಯಮ ಪ್ರಾರಂಭಿಸಲು ವಿಶೇಷ ವೈವಿಧ್ಯತೆಯ ಅನುದಾನ ಪ್ರಕಟಣೆ

• ಈ ಹೊಸ ಉಪಕ್ರಮವು ಮಹಿಳೆಯರು, ಅಂಗವಿಕಲತೆಯ ವ್ಯಕ್ತಿಗಳು ಮತ್ತು ಎಲ್‌ಜಿಬಿಟಿಕ್ಯೂಐಎ+ ಸಮುದಾಯದ ಜನರು ಅಮೆಜಾ಼ನ್‌ನ ಡೆಲಿವರಿ ಸರ್ವೀಸ್ ಪಾರ್ಟ್ನರ್ ಪ್ರೋಗ್ರಾಮ್‌ನಲ್ಲಿ ಭಾಗವಹಿಸುವಿಕೆ ಉತ್ತೇಜಿಸುವ ಗುರಿ ಹೊಂದಿದೆ.

ನವದೆಹಲಿ: ಇಂದು ಅಮೆಜಾ಼ನ್ ಭಾರತದಲ್ಲಿ ತನ್ನ ಡೆಲಿವರಿ ಸರ್ವೀಸ್ ಪಾರ್ಟ್ನರ್(ಡಿಎಸ್‌ಪಿ) ಕಾರ್ಯಕ್ರಮದಲ್ಲಿ ಸೇರುವ ದುರ್ಬಲ ಸಮುದಾಯಗಳ ಉದಯೋನ್ಮುಖ ಉದ್ಯಮಿಗಳಿಗೆ ಶಕ್ತಿ ನೀಡಲು ವಿಶೇಷ ಅನುದಾನ ಪ್ರಕಟಿಸಿದೆ.

ಡಿಎಸ್‌ಪಿ ಕಾರ್ಯಕ್ರಮದಲ್ಲಿ ಅಮೆಜಾ಼ನ್ ಆಸಕ್ತ ಉದ್ಯಮಿಗಳಿಗೆ ಅವರದೇ ಡೆಲಿವರಿ ಉದ್ಯಮವನ್ನು ಪ್ರಾರಂಭಿಸಲು ಅವರಿಗೆ ಅಮೆಜಾ಼ನ್‌ನ ಅತ್ಯಾಧುನಿಕ ಡೆಲಿವರಿ ತಂತ್ರಜ್ಞಾನದ ಬಳಕೆ, ಅತ್ಯಾಧುನಿಕ ತರಬೇತಿ ಮತ್ತು ಪೇರೋಲ್ ಮ್ಯಾನೇಜ್‌ಮೆಂಟ್, ವಿಮೆ ಮತ್ತು ನೇಮಕ ತಂತ್ರಜ್ಞಾನ ಇತ್ಯಾದಿ ಸೇವೆಗಳಲ್ಲಿ ವಿಶೇಷವಾದ ಡೀಲ್‌ಗಳನ್ನು ಅವರಿಗೆ ಒದಗಿಸುತ್ತದೆ. ಅವರ ಸಮು ದಾಯಗಳನ್ನು ಅರ್ಥ ಮಾಡಿಕೊಳ್ಳುವ ಬಲವಾದ ತಂಡಗಳನ್ನು ನಿರ್ಮಿಸುವುದು ಬೆಳೆಯುತ್ತಿರುವ ಡೆಲಿವರಿ ನೆಟ್‌ವರ್ಕ್ಗೆ ಅತ್ಯಂತ ಕಠಿಣ ಸವಾಲಾಗಿದೆ ಮತ್ತು ಸಣ್ಣ ವ್ಯಾಪಾರ ಮಾಲೀಕರು ಅದರಲ್ಲಿ ಅತ್ಯುತ್ತಮವಾಗಿದ್ದಾರೆ.

ಒಟ್ಟು ಅಮೆಜಾ಼ನ್ ವಿವಿಧ ಅನುದಾನ ಕಾರ್ಯಕ್ರಮಗಳ ಮೂಲಕ ವಿಶ್ವದಾದ್ಯಂತ ಉದ್ಯಮಿಗಳಿಗೆ ಬೆಂಬಲಿಸಲು ೭ ಮಿಲಿಯನ್ ಡಾಲರ್ ಪೂರೈಸಲು ಬದ್ಧವಾಗಿದ್ದು ಕಂಪನಿಯು ಉದ್ಯಮಿಗಳಾಗಲು ಬಯಸುವ ಮಹಿಳೆಯರು, ಅಂಗವಿಕಲತೆ ಉಳ್ಳ ವ್ಯಕ್ತಿಗಳು ಮತ್ತು ಎಲ್‌ಜಿಬಿಟಿಕ್ಯೂಐಎ+ ಸಮುದಾಯದ ಜನರಿಗೆ ಉದ್ಯಮ ಪ್ರಾರಂಭಿಸಲು ಸ್ಟಾರ್ಟಪ್ ವೆಚ್ಚದಲ್ಲಿ ಒಂದು ಪ್ರಮಾಣವನ್ನು ಒದಗಿಸುವ ಮೂಲಕ ಆರ್ಥಿಕ ಉತ್ತೇಜನ ನೀಡುತ್ತದೆ. ಲಾಜಿಸ್ಟಿಕ್ಸ್ ಅನುಭವವಿಲ್ಲದರು ಕೂಡಾ ಈ ಅನುದಾನಕ್ಕೆ ಅರ್ಜಿ ಸಲ್ಲಿಸಲು ಮತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ವಾಗತವಿದೆ. ಇದು ತಮ್ಮದೇ ಉದ್ಯಮಗಳನ್ನು ಪ್ರಾರಂಭಿಸಲು ಬಯಸುವ ಉದ್ಯಮಿಗಳಿಗೆ ಅಡೆತಡೆಗಳನ್ನು ನಿವಾರಿಸಲು ಮತ್ತು ಕಡಿಮೆ ಪ್ರಾತಿನಿಧ್ಯದ ಸಮುದಾಯಗಳಿಗೆ ಅಡೆತಡೆಗಳನ್ನು ಕಡಿಮೆ ಮಾಡಲು ಮತ್ತು ನಿವಾರಿಸಲು ನೆರವಾಗುವುದು ಅಮೆಜಾ಼ನ್ ಗುರಿಯಾಗಿದೆ.

“ಭಾರತದಲ್ಲಿ ಪ್ರಾರಂಭದಿ೦ದಲೂ ಡಿಎಸ್‌ಪಿ ಕಾರ್ಯಕ್ರಮವು ಅಮೆಜಾ಼ನ್‌ಗೆ ಎಸ್‌ಎಂಬಿಗಳಿಗೆ ಪ್ರಗತಿಯ ಅವಕಾಶಗಳನ್ನು ಪೂರೈಸಿರುವುದೇ ಅಲ್ಲದೆ ನಮಗೆ ದೇಶದ ಕುಗ್ರಾಮಗಳಿಗೂ ನಮ್ಮ ಡೆಲಿವರಿ ಜಾಲವನ್ನು ವಿಸ್ತರಿಸಲು ಸನ್ನದ್ಧವಾಗಿಸಿದೆ.

ಲಾಜಿಸ್ಟಿಕ್ಸ್ನಲ್ಲಿ ಉದ್ಯಮಶೀಲತೆಯನ್ನು ವಿಸ್ತರಿಸಲು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹಿಳೆಯರಲು ಮತ್ತು ಇತರೆ ಕಡಿಮೆ ಪ್ರಾತಿನಿಧ್ಯದ ಸಮುದಾಯಗಳಿಗೆ ವಿಶೇಷ ಅನುದಾನ ನೀಡಲು ಬಹಳ ಸಂತೋಷವಾಗಿದೆ. ಭೂಮಿಯ ಅತ್ಯಂತ ಗ್ರಾಹಕ-ಕೇಂದ್ರಿತ ಕಂಪನಿಯಾಗುವುದು ಅಮೆಜಾ಼ನ್‌ನ ಉದ್ದೇಶವಾಗಿದೆ ಮತ್ತು ಈ ಉದ್ದೇಶವು ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆಯಲ್ಲಿ ಕೆಲಸ ಮಾಡುವುದು ಕೇಂದ್ರವಾಗಿದೆ. ಅಮೆಜಾ಼ನ್ ಗ್ರಾಹಕರು ಆಲೋಚನೆಯ ವೈವಿಧ್ಯತೆಯಿಂದ ಅನುಕೂಲ ಪಡೆಯುತ್ತಾರೆ. ಇದು ನಮ್ಮ ಉದ್ಯಮಕ್ಕೆ ಉತ್ತಮ ಎಂದು ಭಾವಿಸಿದ್ದೇವೆ, ಆದರೆ ನಮ್ಮ ಬದ್ಧತೆಯು ಸರಿಯಾ ದುದಕ್ಕಿಂತಲೂ ಹೆಚ್ಚು ಮೂಲಭೂತವಾದುದನ್ನು ಆಧರಿಸಿದೆ” ಎಂದು ಅಮೆಜಾ಼ನ್ ಲಾಜಿಸ್ಟಿಕ್ಸ್, ಇಂಡಿಯಾ ನಿರ್ದೇಶಕ ಡಾ.ಕರುಣಾ ಶಂಕರ್ ಪಾಂಡೆ ಹೇಳುತ್ತಾರೆ.

ಪುಣೆಯ ಅಮೆಜಾ಼ನ್‌ನ ಡೆಲಿವರಿ ಸೇವಾ ಪಾಲುದಾರ ರಚನಾ ಖೇರ್, “ಕಾರ್ಪೊರೇಟ್ ವಲಯದಿಂದ ಅಮೆಜಾ಼ನ್ ಡೆಲಿವರಿ ಸರ್ವೀಸ್ ಪಾರ್ಟ್ನರ್ ಆಗಿ ಯಶಸ್ವಿ ಉದ್ಯಮಿಯಾಗಿ ಪ್ರಯಾಣವು ನನಗೆ ಅತ್ಯಂತ ಉತ್ಕೃಷ್ಟ ಅನುಭವವಾಗಿದೆ. ನನ್ನ ಉದ್ಯಮ ಪಾಲುದಾರರಾಗಿ ೨೦೧೮ರಲ್ಲಿ ಪ್ರಿಯಾ ಜುನಾಗಡೆ ಅವರೊಂದಿಗೆ ಈ ಪ್ರಯಾಣ ಸುಲಭವಾಗಿರಲಿಲ್ಲ ಆದರೆ ನಾವು ದೊಡ್ಡ ಕನಸನ್ನು ಕಾಣಲು ಮತ್ತು ನಮ್ಮ ಕನಸುಗಳನ್ನು ಬೆನ್ನು ಹತ್ತಲು ನಿರ್ಧರಿಸಿದೆವು. ಈ ಕಾರ್ಯಕ್ರಮದ ಭಾಗವಾಗಿ ಅಮೆಜಾ಼ನ್ ಸದೃಢ ಉದ್ಯಮದ ತಳಹದಿಗೆ ಅಗತ್ಯವಾದ ಎಲ್ಲ ಅಗತ್ಯ ಜ್ಞಾನ, ತರಬೇತಿ ಮತ್ತು ಕೌಶಲ್ಯಗಳನ್ನು ನಮಗೆ ಒದಗಿಸಿದೆ” ಎಂದರು.

೨೦೨೧ರಲ್ಲಿ ಅಮೆಜಾ಼ನ್ ಭಾರತದಲ್ಲಿ ಡೆಲಿವರಿ ಸರ್ವೀಸ್ ಪಾರ್ಟ್ನರ್ ಕಾರ್ಯಕ್ರಮವನ್ನು ವಿಸ್ತರಿಸುವ ಮೂಲಕ ಉದ್ಯಮಿ ಗಳಾಗುವ ಆಕಾಂಕ್ಷಿಗಳಿಗೆ ಅವರಿಗೆ ಹಿಂದಿನ ಡೆಲಿವರಿ ಪರಿಣಿತಿ ಇಲ್ಲದಿದ್ದರೂ ಅವರ ಡೆಲಿವರಿ ಸೇವೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಾರಂಭಿಸಲು ಬೆಂಬಲಿಸಲು ಪ್ರಾರಂಭಿಸಿತು. ಅಮೆಜಾ಼ನ್ ಇಂಡಿಯಾ ಈಗ ಈ ಕಾರ್ಯಕ್ರಮದ ಭಾಗವಾಗಿ ೩೫೦ಕ್ಕೂ ಹೆಚ್ಚು ಉದ್ಯಮಿಗಳಿದ್ದು ವಿಸ್ತಾರ ಪಾಲುದಾರರಿಗೆ ಅರ ಉದ್ಯಮಗಳನ್ನು ನಿರ್ಮಿಸಿಕೊಳ್ಳಲು ಹೆಚ್ಚು ಅವಕಾಶಗಳನ್ನು ಸೃಷ್ಟಿಸುತ್ತಿದೆ.

ಹಲವು ವರ್ಷಗಳಿಂದ ಡೆಲಿವರಿ ಸರ್ವೀಸ್ ಪ್ರೋಗ್ರಾಮ್ ವಿಶ್ವದಾದ್ಯಂತ ೧,೦೦೦ ಡೆಲಿವರಿ ಸ್ಟೇಷನ್‌ಗಳ ಜಾಲ ಹೊಂದಿದೆ ಮತ್ತು ೧೪ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸಿದ್ದು ಅದರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, ಕೆನಡಾ, ಯುನೈಟೆಡ್ ಕಿಂಗ್‌ಡA, ಜರ್ಮನಿ, ಜಪಾನ್, ಫ್ರಾನ್ಸ್, ಇಟಲಿ, ಸ್ಪೇನ್, ರ‍್ಲೆಂಡ್, ಬ್ರೆಜಿ಼ಲ್, ನೆದರ್‌ಲೆಂಡ್ಸ್, ಭಾರತ, ಬೆಲ್ಜಿಯಂ ಮತ್ತು ಆಸ್ಟಿçಯಾಗಳಿವೆ. ನಾವು ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ಈ ಕಾರ್ಯಕ್ರಮ ಪ್ರಾರಂಭಿಸಿದೆವು, ಅದು ಡಿಎಸ್‌ಪಿ ಕಾರ್ಯಕ್ರಮ ನಿರ್ವಹಿಸುವ ಮೊದಲ ಮಧ್ಯಪ್ರಾಚ್ಯ ದೇಶವಾಗಿದೆ.