Saturday, 23rd November 2024

ನೈತಿಕತೆ ಇಲ್ಲದ ರಾಜಕೀಯ ವ್ಯಕ್ತಿಗಳು ಬಿಜೆಪಿಯಲ್ಲಿದ್ದಾರೆ: ಭಾಸ್ಕರ್ ರಾವ್

ಪಾವಗಡ: ಮಂತ್ರಿಗಳೆಲ್ಲ ಹೋಗಿ ಹೈಕೋರ್ಟ್ಗೆ ಸಿಡಿಗಳನ್ನು ಆಚೆಗೆ ಬರಬಾರದು ಎಂಬುದಾಗಿ ಹೇಳುತ್ತಾರೆ. ಅವರ ಹೆಂಡತಿ ಮಕ್ಕಳು ಮತ್ತು ಜನರಿಗೂ ಮುಖ ತೋರಿಸಲು ಸಾಧ್ಯವಿಲ್ಲ. ಹಾಗಾಗಿ ಈಗಿನ ನೈತಿಕತೆ ಇಲ್ಲದ ರಾಜಕೀಯ ವ್ಯಕ್ತಿಗಳು ಇದ್ದಾರೆ ಎಂದು ಬಿಜೆಪಿ ಮೇಲೆ ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಹರಿಹಾಯ್ದಿದ್ದಾರೆ.

ಪಾವಗಡ ಪಟ್ಟಣದಲ್ಲಿ ಶುಕ್ರವಾರ ಎಸ್.ಎಸ್.ಸಮುದಾಯದ ಭವನದಲ್ಲಿ ಹಮ್ಮಿ ಕೊಳ್ಳಲಾಗಿದ್ದ ತಾಲ್ಲೂಕು ಗ್ರಾಮ ಸಂಪರ್ಕ ಅಭಿಯಾನ ಮತ್ತು ಪಕ್ಷ ಸಂಘಟನೆ ಮತ್ತು ಪಕ್ಷದ ಸೇರ್ಪಡೆ ಕಾರ್ಯಕ್ರಮ ಉದ್ಘಾಟನಾ ನೆರೆವರಿಸಿ ಮಾತನಾಡಿದ ಅವರು ದೇಶಗಳಲ್ಲಿ ಎಎಪಿ ಪ್ರಾರಂಭಗೊಂಡಿದೆ ಜನರಲ್ಲಿ ಬದಲಾವಣೆಗೆ ಮುಂದಾಗಿದ್ದಾರೆ.

ಸಾವಿರಾರು ವರ್ಷಗಳಿಂದ ಇರುವಂತಹ ಹಿಂದೂ ಸಮುದಾಯದವರಿಗೆ ಹಿಂದುತ್ವ ಬಗ್ಗೆ ಬಿಜೆಪಿ ಯವರಿಂದ ಪಾಠ ಕಲಿಸಲು ಮುಂದಾಗಿದೆ. ಭ್ರಷ್ಟ ರಾಜಕಾರಣ ರಾಜಕೀಯ ಪಕ್ಷಗಳಿಂದ ಜನರು ರೋಸಿ ಹೋಗಿದ್ದಾರೆ. ಜಾತಿಯವರಲ್ಲಿ ರಾಜಕೀಯ ಮಾಡಿಕೊಂಡು ಸಮುದಾಯ ಒಡೆಯುವಂತಹ ಕೀಳು ರಾಜಕೀಯಕ್ಕೆ ಇಳಿದಂತಹ ಬಿಜೆಪಿ ಸರ್ಕಾರ ತೊಲಗಿಸಲು ಜನರು ಮುಂದಾಗಬೇಕು.

ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿರುವ ಈ ಬಿಜೆಪಿ ಸರ್ಕಾರದಿಂದ ಯಾರೊಬ್ಬರಿಗೂ ಉಪಯೋಗವಿಲ್ಲ. ನಮ್ಮಲ್ಲಿ ಯಾವುದೇ ವಸ್ತ್ರಗಳೆಲ್ಲ ಹಣ ಇಲ್ಲ ನಂಬಿಕೆ ಅಡಿಯಲ್ಲಿ ಆಮ್ ಆದ್ಮಿ ಪಕ್ಷ ನಡೆಯುತ್ತಿದೆ ಕ್ರೇಜಿವಾಲ್ ಅವರ ಉನ್ನತ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹಿಂದೆ ಎರಡು ಮೂರು ಸಲ ಅಧಿಕಾರ ವಹಿಸಿ ಜಾತಿ ಹಣದ ಬಲದಿಂದ ರಾಜಕೀಯ ಮಾಡಿಕೊಂಡು ಅವರ ಅಭಿವೃದ್ಧಿ ಆಗಿದ್ದಾರೆ ಹೊರತು ಬಡವರು ಬಡವರಾಗಿಯೇ ಉಳಿದಿದ್ದಾರೆ ಎಂದರು.

ಡಬಲ್ ಇಂಜಿನ್ ಸರ್ಕಲ್ ಎಂಬುದಾಗಿ ಹೇಳಿಕೊಳ್ಳುತ್ತಿದ್ದಾರೆ ಅವರ ಬಳಿ ಪೆಟ್ರೋಲ್ ಡೀಸೆಲ್ . ಮಾನ್ಯ ಉಚ್ಚನ್ಯಾಯಾಲಯ ಎಸಿಬಿ ವಜಾ ಗೊಳಿಸಿ ಬಿಜೆಪಿ ಪಕ್ಷದ ಚೀಮಾರಿ ಹಾಕಿದೆ. ಮತ್ತೊಮ್ಮೆ ಲೋಕಾಯುಕ್ತ ಅಧಿಕಾರ ನೀಡಬೇಕೆಂಬ ಆದೇಶ ಹೊರಡಿಸಿದೆ.

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ನಡೆದಿಲ್ಲ ಆಗಲೇ ನಾನು ಮುಖ್ಯಮಂತ್ರಿ ನಾನು ಮುಖ್ಯಮಂತ್ರಿ ಎಂಬುದಾಗಿ ಹೊಡೆದ ಆಡುತ್ತಿರುವುದು ಎಷ್ಟರಮಟ್ಟಿಗೆ ಸರಿ.

25 ವರ್ಷದ ಇತಿಹಾಸದಲ್ಲಿ ಬೆಂಗಳೂರು ನಗರ ಕೇವಲ 150 ಕಿಲೋಮೀಟರ್ ದೂರದಲ್ಲಿರುವ ಭಾವಕ್ಕೆ ಯಾವುದೇ ತರದ ಮೂಲಭೂತ ಸೌಕರ್ಯ ಕಲ್ಪಿಸದೆ ಇರುವುದೇ ರಾಜಕೀಯ ವ್ಯಕ್ತಿಗಳು ಮಾಡಿರುವಂತಹ ಅಭಿವೃದ್ಧಿ ಎಂಬುದಾಗಿ ಹೇಳಬ ಹುದು.

ಈ ರಾಜಕೀಯ ಪಕ್ಷಗಳು ನಾಲ್ಕು ಚೌಕಟ್ಟಿನಂತೆ ಮಾಡಿಕೊಂಡಿದ್ದಾರೆ ಅಷ್ಟು ಒಳಗಿರುವವರು ಮಾತ್ರ ಶ್ರೀಮಂತವಾಗಿರಬೇಕು ಇನ್ನೂ ಹೊರ ಭಾಗದಲ್ಲಿರುವ ಎಲ್ಲರೂ ಬಡತನದಲ್ಲಿ ಇರಬೇಕು ಎಂಬುದಾಗಿ ರೂಪಿಸಿಕೊಂಡಿದೆ.

ಈ ವೇಳೆ ಡಾ.ವಿಶ್ವನಾಥ ತುಮಕೂರು ಜಿಲ್ಲಾ ಅದ್ಯಕ್ಷ ಎಎಪಿ ಪಕ್ಷ.ತಾಲ್ಲೂಕು ಅದ್ಯಕ್ಷ ಗೋಪಾಲ್ .ಡಿ.ಅಂಜಯ್ಯ.ಪವನ್ ಕುಮಾರ್, ವೆಂಕಟರಮಣಪ್ಪ, ಪಿ.ನಾಗರಾಜ್, ರಾಮು.ಜಿ.ಮುಬಾರಕ್ ಬಾಷ, ತಾಲ್ಲೂಕು ಮಹಿಳ ಘಟಕದ ದೀಪಿಕ ಉಪಸ್ಥಿತರಿದ್ದರು.

ಇದೇ ವೇಳೆ ಹಲವು ಮಂದಿ ಆಮ್ ಆದ್ಮಿ ಪಾರ್ಟಿ ಪಕ್ಷಕ್ಕೆ ಸೇರ್ಪಡೆಗೊಂಡರು.