Thursday, 12th December 2024

ಭಾರತದಲ್ಲಿ ವಿಎಲ್ಸಿ ಮೀಡಿಯಾ ಪ್ಲೇಯರ್’ಗೆ ನಿರ್ಬಂಧ

ನವದೆಹಲಿ: ವೀಡಿಯೊಲನ್ ಪ್ರಾಜೆಕ್ಟ್ ಅಭಿವೃದ್ಧಿಪಡಿಸಿದ ಮೀಡಿಯಾ ಪ್ಲೇಯರ್ ಸಾಫ್ಟ್ವೇರ್ ಮತ್ತು ಸ್ಟ್ರೀಮಿಂಗ್ ಮೀಡಿಯಾ ಸರ್ವರ್ ವಿಎಲ್ಸಿ ಮೀಡಿಯಾ ಪ್ಲೇಯರ್ ಭಾರತದಲ್ಲಿ ಕಾರ್ಯನಿರ್ವಹಿಸುವುದಿಲ್ಲ.

ಸುಮಾರು 2 ತಿಂಗಳ ಹಿಂದೆ ಭಾರತದಲ್ಲಿ ವಿಎಲ್ಸಿ ಮೀಡಿಯಾ ಪ್ಲೇಯರ್ ನಿರ್ಬಂಧಿಸಲಾಗಿದೆ ಎಂದು ವರದಿ ಹೇಳುತ್ತದೆ. ಆದರೆ ಈ ಕುರಿತು ಕಂಪನಿ ಅಥವಾ ಭಾರತ ಸರ್ಕಾರ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.

ವರದಿಗಳು ವಿಎಲ್ಸಿ ಮೀಡಿಯಾ ಪ್ಲೇಯರ್ ದೇಶದಲ್ಲಿ ನಿರ್ಬಂಧಿಸಲಾಗಿದೆ ಎಂದು ಸೂಚಿಸುತ್ತವೆ. ಕೆಲವು ತಿಂಗಳುಗಳ ಹಿಂದೆ, ದೀರ್ಘಕಾಲದ ಸೈಬರ್ ದಾಳಿ ಅಭಿಯಾನದ ಭಾಗವಾಗಿ ದುರುದ್ದೇಶಪೂರಿತ ಮಾಲ್ವೇರ್ ಲೋಡರ್ʼನ್ನ ನಿಯೋಜಿಸಲು ಸಿಕಾಡಾ ವಿಎಲ್ಸಿ ಮೀಡಿಯಾ ಪ್ಲೇಯರ್ ಬಳಸುತ್ತಿದೆ ಎಂದು ಭದ್ರತಾ ತಜ್ಞರು ಕಂಡುಹಿಡಿದರು.

ಗಗನ್ ದೀಪ್ ಸಪ್ರಾ ಎಂಬ ಹೆಸರಿನ ಟ್ವಿಟರ್ ಬಳಕೆದಾರರೊಬ್ಬರು ವಿಎಲ್ ಸಿ ವೆಬ್ ಸೈಟ್ʼನ ಸ್ಕ್ರೀನ್ ಶಾಟ್ʼನ್ನ ಟ್ವೀಟ್ ಮಾಡಿದ್ದು, ಐಟಿ ಕಾಯ್ದೆ, 2000ರ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಆದೇಶದ ಪ್ರಕಾರ ವೆಬ್ಸೈಟ್ ನಿರ್ಬಂಧಿಸಲಾಗಿದೆ ಎಂದು ತೋರಿಸುತ್ತದೆ.