ಭಾರತ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕದೊಂದಿಗೆ ಒಟ್ಟಾರೇ 61 ಪದಕ ಗೆಲ್ಲುವುದರೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಕುಸ್ತಿಯಲ್ಲಿಯೇ ಭಾರತ ಹೆಚ್ಚಿನ ಪದಕ ಗಳಿಸಿದೆ. ಆರು ಚಿನ್ನ ಸೇರಿದಂತೆ 12 ಪದಕಗಳನ್ನು ಕುಸ್ತಿ ಯಲ್ಲಿಯೇ ಬಂದಿವೆ. ಭಾರ ಎತ್ತುವ ಸ್ಪರ್ಧೆಯಲ್ಲಿ 10 ಪದಕಗಳು ಭಾರತಕ್ಕೆ ಲಭಿಸಿದೆ.
50 ಕೆಜಿ ತೂಕದ ಮಹಿಳೆಯರ ವಿಭಾಗದ ಕುಸ್ತಿ ಪಂದ್ಯದ ಫೈನಲ್ ಪಂದ್ಯದಲ್ಲಿ ಚಿನ್ನ ಪದಕ ಗೆದ್ದ ನಂತರ ಮಾತನಾಡಿದ್ದ ಜರೀನ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ ಮತ್ತು ತನ್ನ ಬಾಕ್ಸಿಂಗ್ ಗ್ಲೌಸ್ನಲ್ಲಿ ಅವರ ಆಟೋಗ್ರಾಫ್ ತೆಗೆದುಕೊಳ್ಳುತ್ತೇನೆ ಎಂದಿದ್ದರು.
ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಕಳೆದ ಬಾರಿ ನಾನು ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದೆ ಮತ್ತು ಈಗ ಹೊಸದನ್ನು ಬಯಸುತ್ತೇನೆ. ಕಳೆದ ಬಾರಿ, ನಾನು ನನ್ನ ಟಿ-ಶರ್ಟ್ನಲ್ಲಿ ಅವರ ಆಟೋಗ್ರಾಫ್ ತೆಗೆದುಕೊಂಡಿದ್ದೆ. ಈಗ ನಾನು ಅದನ್ನು ನನ್ನ ಬಾಕ್ಸಿಂಗ್ ಗ್ಲೌಸ್ನಲ್ಲಿ ತೆಗೆದುಕೊಳ್ಳುತ್ತೇನೆ ಎಂದು ಚಿನ್ನ ಗೆದ್ದ ನಂತರ ನಿಕಾತ್ ಜರೀನ್ ತಿಳಿಸಿದ್ದರು.