ಹಂಪಿ ಎಕ್ಸ್’ಪ್ರೆಸ್
1336hampiexpress1509@gmail.com
ಸ್ವಾತಂತ್ರದ ನಂತರ 1950ರಲ್ಲಿ ರಾಷ್ಟ್ರಗೀತೆಯನ್ನು ನಿರ್ಧರಿಸುವ ಸಭೆಯಲ್ಲಿ ದೇಶದ ಆತ್ಮಗೀತೆಯೇ ಆಗಿದ್ದ ವಂದೇ ಮಾತರಂ ಗೀತೆಯನ್ನು ಕಡೆಗಣಿಸಿ, ಕೇವಲ ಬ್ರಿಟಿಷ್ ಬ್ಯಾಂಡ್ ಸೆಟ್ ತಾಳಕ್ಕೆ ಅತಿ ಶೀಘ್ರವಾಗಿ ಸರಿಹೊಂದುತ್ತದೆ ಎಂಬ ಕಾರಣಕ್ಕೂ ಅಂದು ‘ಜನಗಣ ಮನ ಅಧಿ ನಾಯಕ ಜಯಹೇ, ಭಾರತ ಭಾಗ್ಯವಿಧಾತ…’. ಗೀತೆಯನ್ನು ರಾಷ್ಟ್ರ ಗೀತೆಯನ್ನಾ ಗಿಸಲಾಯಿತು.
ಕೆಲದಿನಗಳ ಹಿಂದೆ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರಭಟ್ ಅವರು ಯೋಗಿ ದುರ್ಲಭಜೀ ಹೇಳಿದ ಒಂದು ಸಣ್ಣಕಥೆ ಉಲ್ಲೇಖಿಸಿದ್ದರು. ತೊಡಲು ಅಂಗಿಯೂ ಇಲ್ಲದೆ ಅರೆನಗ್ನಾವಸ್ಥೆಯಲ್ಲಿ ಭಿಕ್ಷೆ ಬೇಡುತ್ತಿದ್ದವನ ಸ್ಥಿತಿ ಕಂಡ ಸ್ವಾಮೀಜಿ ಯೊಬ್ಬರು ಆತನನ್ನು ಕರೆದು ‘ನೋಡೂ, ನನ್ನ ಆಶ್ರಮಕ್ಕೆ ಬಾ, ನಾನು ನಿನಗೆ ಒಳ್ಳೆಯ ಬಟ್ಟೆಗಳನ್ನು ಕೊಡುತ್ತೇನೆ ಅದನ್ನು ಧರಿಸಿಕೋ’ ಎಂದು ಅನುಕಂಪ ತೋರುತ್ತಾರೆ.
ಈ ಮಾತಿಗೆ ಭಿಕ್ಷುಕನ ಉತ್ತರವೇನಿತ್ತು ಗೊತ್ತೇ? ‘ಸ್ವಾಮೀ ನೀವೇನೋ ಒಳ್ಳೆಯ ಬಟ್ಟೆ ಕೊಡ್ತೀರಾ, ನಾನು ಅದನ್ನು ಧರಿಸಿ ಭಿಕ್ಷೆ ಬೇಡಿದರೆ ನನಗೆ ಯಾರು ಭಿಕ್ಷೆ ಹಾಕುತ್ತಾರೆ ಹೇಳಿ? ಒಳ್ಳೆಯ ಬಟ್ಟೆ ಧರಿಸಿ ಭಿಕ್ಷೆಬೇಡಿದರೆ ಯಾರೂ ಭಿಕ್ಷೆ ಹಾಕುವುದಿಲ್ಲ. ನಾನು ಹೀಗೇ ಇರುತ್ತೇನೆ ಇದೇ ನನ್ನ ಸುಖ’ ಎನ್ನುತ್ತಾನೆ.
ಇಂಥ ಬಲಹೀನರು ಬಲಿಷ್ಠನ ಮತ್ತು ಅವನೊಳಗಿನ ದುರಹಂಕಾರದ ಮುಂದೆ ಅಂಗಲಾಚಿದಾಗ ಅದರಿಂದ ಇಬ್ಬರೂ ಮಜಾ ಅನುಭವಿಸುತ್ತಾರೆ. ಈತ ‘ಕೊಡಿ ಕೊಡಿ’ ಎಂದು ಬೇಡುತ್ತಿದ್ದರೆ ‘ತಾಳು ತಾಳು’ ಎಂದು ಹೇಳುವ ಮೂಲಕ ಇಬ್ಬರಿಗೂ ಎನೋ ವಿಕೃತ ಸುಖ. ಆತ ಬೇಡುವುದು ಮತ್ತು ಅದಕ್ಕೆ ನಿರಾಕರಿಸುವುದು ಸಮಸ್ಯೆ ಅನಿಸದೇ ಅದೊಂದು ದಿನಚರಿಯಂತೆ ಆಗಿ ಹೋಗುತ್ತದೆ. ಜತೆಗೆ ಆ ಬಲಿಷ್ಠರು ನೀಡುವ ಕೆಲ ಕ್ಷಣಿಕ ಸುಖಗಳನ್ನು ಅನುಭವಿಸಿ ಅವರನ್ನು ಮೆಚ್ಚಿಸಿ ಆ ಗುಲಾಮ ಗಿರಿಯೇ ಗೌರವದ ಐಡೆಂಟಿಟಿಯಾಗಿ ಪುಳಕಗೊಳಿಸಿರುತ್ತದೆ.
ಇದನ್ನು ಇನ್ನೂ ಸರಳವಾಗಿ ಹೇಳಬೇಕೆಂದರೆ ಪ್ರತಿಭಾವಂತ ಸಂಗೀತಗಾರನಾಗಿ ಚಿತ್ರರಂಗ ಪ್ರವೇಶಿಸಿದ ಸಾಧುಕೋಕಿಲ ‘ಶ್’
ಚಿತ್ರದಲ್ಲಿ ಒಂದು ಹಾಸ್ಯಪಾತ್ರ ಮಾಡಿದ್ದೇ ಮಾಡಿದ್ದು ತನ್ನೊಳಗಿದ್ದ ಅದ್ಭುತ ಸಂಗೀತಗಾರನನ್ನು ಮರೆತು ಕಾಮಿಡಿಯನ್ ಆಗಿ ಖ್ಯಾತಿ ಗಳಿಸಿದಂತೆ. ಆತನೊಳಗಿನ ಸಂಗೀತಕ್ಕಿಂತ ಆತ ಕಾಮಿಡಿಯನ್ ಆಗಿದ್ದರೇನೇ ಆತನಿಗೂ ಪ್ರೇಕ್ಷನಿಗೂ ಮಜಾ! ಆದರೆ ಪರಮ ಸ್ವಾಭಿಮಾನಿಯೊಬ್ಬರು ಸರಿಯಾಗಿ ತಿರುಗಿಬಿದ್ದು ಆ ಬಲಿಷ್ಠನ ಗುಲಾಮಗಿರಿಯನ್ನು ಮೆಟ್ಟಿ ನಿಂತಾಗ ಕಂಗೊಳಿಸುವುದೇ ಭಾರತದ ಪ್ರಪ್ರಥಮ ಪ್ರಧಾನಿ (ಸ್ವಾತಂತ್ರಪೂರ್ವ). ನೇತಾಜಿ ಸುಭಾಷ್ ಚಂದ್ರ ಬೋಸ್.
ಈಗ ‘ಗಂಭೀರ’ ವಿಚಾರಕ್ಕೆ ಬರೋಣ. ಅದು 1955. ಸಂವಿಧಾನ ಕರ್ತೃ ಡಾ.ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಮೃತಪ ಡುವ ಎರಡು ತಿಂಗಳ ಹಿಂದೆ ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಜತೆ ಖಾಸಗಿ ಮಾತುಕತೆ ನಡೆಸುತ್ತಾರೆ. 20 ವರ್ಷ ಗಳ ಕಾಲ ತಮ್ಮ ಮನದಲ್ಲಿದ್ದ ನಿರಾಸೆಯನ್ನು ಹೊರಹಾಕುತ್ತಾರೆ. ‘ಮಹಾತ್ಮ ಗಾಂಧಿಯವರಿಂದಷ್ಟೇ ಭಾರತಕ್ಕೆ ಸ್ವಾತಂತ್ರ ಸಿಕ್ಕಿಲ್ಲ, ಇದಕ್ಕೆ ಕ್ರಾಂತಿಕಾರಿಗಳ ಪಾತ್ರವೂ ಹಿರಿದು.
1947ರಲ್ಲಿ ಆಂಗ್ಲರು ತೊಲಗಲು ನೇತಾಜಿ ಮತ್ತು ಅವರ ಐಎನ್‌ಎಯೇ ಕಾರಣ’ ಎಂಬ ತಮ್ಮ ಸ್ಪಷ್ಟ ಅಭಿಪ್ರಾಯ ಹೊರ ಹಾಕುತ್ತಾರೆ. (ನೆನಪಿರಲಿ, ಬಾಬಾಸಾಹೇಬರು ಅಪ್ರತಿಮ ಜ್ಞಾನಿಗಳಾಗಿದ್ದರು. ಅತ್ಯಂತ ಪ್ರಾಮಾ ಣಿಕ ಸಾಮಾಜಿಕ ದೃಷ್ಟಿಕೋನ ಅವರಿಗಿತ್ತು. ಅವರು ಯಾರ ಮುಲಾಜಿಗೂ ಒಳಗಾದವರಲ್ಲ) ಅಂಬೇಡ್ಕರ್ ಅವರ ಈ ಮಾತಿಗೆ ತಲೆದೂಗಿದ ಬ್ರಿಟನ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಕೂಡಾ ‘ಒಮ್ಮೆ ನಮಗೆ ನೇತಾಜಿ ದೊಡ್ಡ ಸವಾಲಾಗಿದ್ದರು, ಅವರೇ ನಮ್ಮ ಬಲಹೀನತೆಯನ್ನು ಗ್ರಹಿಸಿದ್ದರು’ ಎಂದು ಒಪ್ಪಿಕೊಳ್ಳುತ್ತಾರೆ.
ದೇಶ ಸ್ವಾತಂತ್ರ್ಯ ಕಂಡ ದಿನಗಳ ಅನೇಕ ಗುಪ್ತಚರ ಸಂಸ್ಥೆಗಳು, ರಕ್ಷಣಾ ತಜ್ಞರು, ಅಂತಾರಾಷ್ಟ್ರೀಯ ವಿಶ್ಲೇಷಕರು ಕೂಡ ‘ನೇತಾಜಿ
ಯವರಿಂದಲೇ ಭಾರತಕ್ಕೆ ಸ್ವಾತಂತ್ರ ದೊರಕಿದ್ದು, ಅವರ ಕಠಿಣ ಸೈದ್ಧಾಂತಿಕ ಬೆದರಿಕೆಯಿಂದ ಮತ್ತು ಅದರಿಂದ ಪ್ರಭಾವಿತರಾದ ಆಂಗ್ಲರ ಭಾರತೀಯ ಸೈನ್ಯ ತಿರುಗಿ ಬೀಳುವ ಸಾಧ್ಯತೆಯಿಂದಲೇ ಆಂಗ್ಲರಿಗೆ ನಮಗಿನ್ನು ಉಳಿಗಾಲವಿಲ್ಲ ಎಂದು ಅನಿಸಿದ್ದು’
ಎಂದು ಒಪ್ಪಿಕೊಂಡಿದೆ. ಇದು ಮುಚ್ಚಿಹೋದ ಸತ್ಯ. 1939ರಲ್ಲಿ ಎರಡನೇ ಜಾಗತಿಕ ಯುದ್ಧ ಆರಂಭವಾದ ಸಂದರ್ಭದಲ್ಲಿ ನೇತಾಜಿ ಹೋರಾಟವನ್ನು ಕಂಡು ಕಂಗಾಲಾದ ಆಂಗ್ಲರು ಆರು ತಿಂಗಳಲ್ಲಿ ದೇಶ ಬಿಟ್ಟುಬಿಡುವುದಾಗಿ ಘೋಷಿಸಿದ್ದರು.
ಆದರೆ ಇದಕ್ಕೆ ಸರಿಯಾದ ಬೆಂಬಲ ಕಾಂಗ್ರೆಸ್‌ನ ಗಾಂಧಿ ಮತ್ತು ನೆಹರೂವಿನಿಂದ ಸಿಗದೆ ಹೋರಾಟ ಷಂಡತನಕ್ಕೊಳಗಾಗಿತ್ತು.
ಮುಂದೆ ಸ್ವತಂತ್ರ ಭಾರತದಲ್ಲಿ ಅಂಬೇಡ್ಕರ್ ಅವರು ಚುನಾವಣೆಗೆ ನಿಂತಾಗ ಅವರ ಅನಿರೀಕ್ಷಿತ ಸೋಲಿಗೆ ಸೂತ್ರ ಸಿದ್ಧಪಡಿಸಿದ್ದು ಮತ್ತು ಅವರು ನಿಧನರಾದಾಗ ಅವರ ಸಮಾಧಿಗೆ ಸೂಕ್ತ ಸ್ಥಳವನ್ನೂ ಕೊಡದೇ ಹೇಗೆ ಅವಮಾನಿಸಲಾಯಿತು ಎಂಬುದನ್ನು ಕಾಂಗ್ರೆಸ್ ವಿವರಿಸಿದರೆ ಇಂದಿನ ಮಕ್ಕಳಿಗೆ ಒಂದು ಪಠ್ಯವನ್ನಾಗಿಸಬಹುದು.
ಅಸಲಿಗೆ ಇಂಡಿಯನ್ ನಾಷನಲ್ ಕಾಂಗ್ರೆಸ್ (1883) ಸ್ಥಾಪನೆಯಾದದ್ದೇ ‘ಅಲನ್ ಆಕ್ಟೇವಿಯನ್ ಹ್ಯೂಮ್’ ಎಂಬ ನಿವೃತ್ತ
ಬ್ರಿಟಿಷ್ ಅಧಿಕಾರಿಯಿಂದ. ಕೋಲ್ಕತಾ ವಿಶ್ವವಿದ್ಯಾಲಯದ ಪದವೀಧರರಿಗೆ ವಿದ್ಯಾವಂತ ಭಾರತೀಯರಿಗೆ ಬ್ರಿಟಿಷ್ ಸರಕಾರ
ದಲ್ಲಿ ಪಾಲನ್ನು ಪಡೆಯಲು ಮತ್ತು ಬ್ರಿಟಿಷರೊಂದಿಗೆ ನಾಗರಿಕ ಮತ್ತು ರಾಜಕೀಯ ಸಂಬಂಧದ ವೇದಿಕೆಯ ಅವಕಾಶದ ಬೇಡಿಕೆ ಗಾಗಿ ಅಂದರೆ ಗುಲಾಮಗಿರಿಯ ಆಂಗ್ಲರ ಸರಕಾರದಲ್ಲಿ ಭಾರತೀಯ ವಿದ್ಯಾವಂತರು ಅವಕಾಶ ಗಿಟ್ಟಿಸಿಕೊಳ್ಳಲು ಒಂದು ವೇದಿಕೆಯಾಗಿತ್ತು.
1855ರ ನಂತರ ಗಾಂಧೀಜಿ ಅದನ್ನೇ ಸ್ವಾತಂತ್ರ್ಯದ ಬೇಡಿಕೆಯ ಹೋರಾಟಕ್ಕೆ ಬಳಸಿಕೊಂಡರು. ಅಷ್ಟೇ ಅಲ್ಲ, ಸ್ವಾತಂತ್ರ್ಯ ಬರುವವರೆಗೆ ಮಾತ್ರ ಈ ವಿದೇಶಿಗ ಸ್ಥಾಪಿಸಿದ ಪಕ್ಷದ ಅವಶ್ಯಕತೆ, ನಂತರ ಅದರ ಅವಶ್ಯಕತೆಯಿಲ್ಲ. ಅದನ್ನು ವಿಸರ್ಜಿಸಿ, ಸ್ವತಂತ್ರ ಭಾರತಕ್ಕೆ ಮತ್ತು ಅದರ ಪರಂಪರೆಗೆ ಅನುಗುಣವಾಗಿ ರಾಜಕೀಯ ನಡೆಸಿ ಎಂಬ ಆದೇಶ ಆಶೋತ್ತರವನ್ನು ಹೊಂದಿದ್ದರು. ಅದರಂತೆ ೧೯೪೭ರ ಸ್ವಾತಂತ್ರದ ನಂತರ ಕಾಂಗ್ರೆಸ್‌ಗೂ ಗಾಂಧಿಗೂ ಇರುವ ಋಣಾನುಬಂಧ ಕಳಚಿಬಿದ್ದಿತ್ತು.
ಆದರೆ ಅಲ್ಲಿಂದಲೇ ಆರಂಭಗೊಂಡಿದ್ದು ಡೋಂಗಿ ಮತ್ತು ನಕಲಿ ಗಾಂಧಿ ಹೆಸರಿನ ರಾಜಕೀಯ. ಇನ್ನು ರಾಷ್ಟ್ರಗೀತೆ ಬಗ್ಗೆ ಹೇಳ ಬೇಕೇ! ತಾಯಗರ್ಭದಿಂದ ಹಿಡಿದು ಸಮಾಧಿಯಾಗುವ ಮಣ್ಣಿನವರೆಗೂ ಪ್ರತಿಯೊಂದನ್ನೂ ಹೆಣ್ಣಿಗೆ ಅರ್ಪಿಸಿ ಪೂಜ್ಯ ಭಾವನೆ ಯಿಂದ ಪುನೀತರಾಗುವ ಭಾರತೀಯ ಸಂಸ್ಕೃತಿಗೆ ಪೂರಕವಾಗಿದ್ದ ಸ್ವಾತಂತ್ರ್ಯ ಸಂಗ್ರಾಮದ ಆತ್ಮಗೀತೆಯಾಗಿದ್ದ (ದುರ್ಗೆಯನ್ನು ಆರಾಧಿಸುವ) ‘ವಂದೇ ಮಾತರಂ’ ಗೀತೆಯನ್ನು ವ್ಯವಸ್ಥಿತವಾಗಿ (ಕೆಲ ಮುಸಲ್ಮಾನರ ವಿರೋಧವಿತ್ತು) ನಿರ್ಲಕ್ಷಿಸಿ ‘ಜನಗಣ ಮನ ಅಧಿನಾಯಕ ಜಯಹೇ’ ಗೀತೆಯನ್ನು ಇಡೀ ದೇಶಕ್ಕೆ ಏಕ ಪಕ್ಷೀಯವಾಗಿ ಒಪ್ಪಿಸಲಾಯಿತು.
ಅದು 1911. ಭಾರತದ ಗುಲಾಮಗಿರಿಯ ಪರ್ವಕಾಲ. ಬ್ರಿಟನ್ ರಾಜ ೫ನೇ ಜಾರ್ಜ್ ಭಾರತಕ್ಕೆ ಭೇಟಿ ನೀಡಿದ್ದ. ಆತ ಕೋಲ್ಕತಾ ದಲ್ಲಿ ನಡೆದು ಬರುತ್ತಿದ್ದರೆ ಅವನ ಕಾಲಿಗೆ ಹೂಚೆಲ್ಲಿತ್ತಿದ್ದರು. ಆತನ ಆಗಮನವನ್ನು ವಿರೋಧಿಸಿ ಲೋಕಮಾನ್ಯ ತಿಲಕರು ಸಾವಿರಾರು ಬೆಂಬಲಿಗರೊಂದಿಗೆ ಪ್ರತಿಭಟಿಸಿ ಲಾಠಿ ಏಟು ತಿನ್ನುತ್ತಿದ್ದರೆ, ಇತ್ತ ಜಾರ್ಜ್‌ನನ್ನು ಸ್ವಾಗತಿಸಿ ಆತನ ಮೆಚ್ಚುಗೆ ಗಳಿಸಲು ಇಲ್ಲಿನ ಭಟ್ಟಂಗಿಗಳಿಗೆ ತುರ್ತಾಗಿ ಒಂದು ಬಹುಪರಾಕ್ ಗೀತೆ ಬೇಕಿತ್ತು. ಆಗ ಅವರಿಗೆ ದೊರಕಿದ್ದೇ ‘ಹೇ ಭಾರತದ ಅಧಿನಾಯಕನೇ!
ನೀನು ಇಲ್ಲಿನ ಜನಮನದ ಅಧಿಪತಿ, ಯಾಕೆಂದರೆ ನೀನು ಭಾರತದ ಹಣೆಬರಹ ಬರೆಯುವವನು, ಇಲ್ಲಿನ ನಾಲ್ಕೂ ದಿಕ್ಕುಗಳು, ಇಲ್ಲಿರುವ ನದಿಗಳು, ಇಲ್ಲಿನ ಅಷ್ಟೂ ಜನರ ಮನಸ್ಸುಗಳು ನಿನಗೆ ಒಳ್ಳೆಯದಾಗಲೆಂದು ಪ್ರಾರ್ಥಿಸುತ್ತಾರೆ. ಹೇ, ನಮ್ಮೆಲ್ಲರ ಭಾಗ್ಯ ವಿಧಾತನೇ, ನಿನಗೆ ಮಂಗಳವಾಗಲಿ, ನಿನಗೆ ಜಯವಾಗಲಿ, ಏನೇ ಆದರೂ ಅಂತಿಮವಾಗಿ ಜಯ ನಿನ್ನದೇ..!’ ಎಂಬ ಅರ್ಥವಿರುವ ಬಂಗಾಲಿ ಭಾಷೆಯ ಹಾಡು.
ಕುತೂಹಲಕಾರಿ ಸಂಗತಿಯೇನೆಂದರೆ ನೇತಾಜಿ ಯವರು ತಮ್ಮ ಐಎನ್‌ಎ ಸಂಘಟನೆಗೆ ಮತ್ತು ತಾವೇ ಘೋಷಿಸಿಕೊಂಡಿದ್ದ ಭಾರತ ಸರಕಾರದ ಅಧಿಕೃತ ರಾಷ್ಟ್ರಗೀತೆಯನ್ನಾಗಿ ‘ಅಧಿನಾಯಕ, ಭಾಗ್ಯವಿಧಾತ’ ಪದಗಳನ್ನು ಬದಲಿಸಿ ತಮ್ಮದೇ ಆದ ರಾಷ್ಟ್ರಗೀತೆಯನ್ನು ಹೊಂದಿಸಿದ್ದರು. ಅದರಲ್ಲಿ ‘ಜನಗಣ ಮನ ಅಧಿನಾಯಕ’ ಬದಲಾಗಿ ‘ಶುಭ್ ಸುಖ್ ಚೈನ್ ಕಿ ಬರ್ಕಾ ಬರ್ಸೆ’ (ಶುಭ ಸಂತೋಷದ ಮಳೆ ಬೀಳುತ್ತದೆ, ಭಾರತವು ಜಾಗೃತಗೊಂಡಿದೆ..) ಎಂದು ಹಾಡಲಾಗಿ, ‘ಭಾರತ ಭಾಗ್ಯವಿಧಾತ’ ಪದದ ಬದಲಾಗಿ ‘ಭಾರತ ಭಾಗ ಹೈ ಜಾಗಾ’ ಎನ್ನುತ್ತಾ ‘ಪಂಜಾಬ ಸಿಂಧು ಗುಜರಾತ ಮರಾಠ ದ್ರಾವಿಡ ಉತ್ಕಲ ಬಂಗಾ…’ ಎಂದು
ಸ್ಥಳಗಳನ್ನು ಉಲ್ಲೇಖಿಸಲಾಗಿದೆ.
ಇದನ್ನೇ ಈಗಲೂ ರಾಜ್ಯಸಭಾ ಸದಸ್ಯ ಡಾ.ಸುಬ್ರಮಣಿಯಂ ಸ್ವಾಮಿ ಎತ್ತಿಹಿಡಿದು ರಾಷ್ಟ್ರಗೀತೆಯಲ್ಲಿ ಸ್ತುತಿಸಿರುವ ಗಂಡು
ಆಕೃತಿ ‘ಅಧಿನಾಯಕ’ ಪದವನ್ನು ಪ್ರಶ್ನಿಸಿ ನೇತಾಜಿ ಯವರ ಐಎನ್‌ಎ ಗೀತೆಯ ಸಾಲುಗಳನ್ನು ಪ್ರಸ್ತುತ ರಾಷ್ಟ್ರಗೀತೆಯ ಸಾಲು ಗಳನ್ನಾಗಿ ಬದಲಿಸಿ, ಇಲ್ಲಿಯವರೆಗೂ ಆಗಿರುವ ದೋಷವನ್ನು ಸರಿ ಪಡಿಸಲು ಆಗ್ರಹಿಸುತ್ತಿದ್ದಾರೆ. ಸ್ವಾತಂತ್ರದ ನಂತರ
1950 ರಲ್ಲಿ ರಾಷ್ಟ್ರಗೀತೆಯನ್ನು ನಿರ್ಧರಿಸುವ ಸಭೆಯಲ್ಲಿ ದೇಶದ ಆತ್ಮಗೀತೆಯೇ ಆಗಿದ್ದ ವಂದೇಮಾತರಂ ಗೀತೆಯನ್ನು ಕಡೆಗಣಿಸಿ, ಕೇವಲ ಬ್ರಿಟಿಷ್ ಬ್ಯಾಂಡ್ ಸೆಟ್ ತಾಳಕ್ಕೆ ಅತಿ ಶೀಘ್ರವಾಗಿ ಸರಿಹೊಂದುತ್ತದೆ ಎಂಬ ಕಾರಣಕ್ಕೂ ಅಂದು ‘ಜನಗಣ ಮನ ಅಧಿನಾಯಕ ಜಯಹೇ, ಭಾರತ ಭಾಗ್ಯವಿಧಾತ…’. ಗೀತೆಯನ್ನು ರಾಷ್ಟ್ರಗೀತೆ ಯನ್ನಾಗಿಸಲಾಯಿತು.
ತಿಕ್ಕಲು ಏನೆಂದರೆ ಅನೇಕ ಅವಿವೇಕಿಗಳು ಗುಲಾಮರು ಗೀತೆಯಲ್ಲಿನ ‘ಅಧಿನಾಯಕ’ ಎಂಬುದು ‘ಈಶ್ವರ, ಅ,ಏಸು’ ಎಂದು ಪ್ರಚಾರ ಮಾಡುತ್ತಿದ್ದಾರೆ. ‘ರಘುಪತಿ ರಾಘವ ರಾಜಾರಾಂ’ ಗೀತೆಯ ಸಾಹಿತ್ಯವನ್ನೂ ತಿರುಚಿ ಅದನ್ನೂ ಇವರ ಆಷಾಢ ಭೂತಿತನದ ಜಾತ್ಯತೀತ ಗೀತೆಯನ್ನಾಗಿದ್ದಾರೆ. ಮೊನ್ನೆಯಷ್ಟೇ ಕಾಂಗ್ರೆಸ್‌ನಿಂದ ಸ್ವಾತಂತ್ರ್ಯ, ಕಾಂಗ್ರೆಸ್‌ನಿಂದ ಸಂವಿಧಾನ, ಕಾಂಗ್ರೆಸ್‌ನಿಂದ ರಾಷ್ಟ್ರಧ್ವಜ, ಕಾಂಗ್ರೆಸ್‌ನಿಂದ ದೇಶ ಎಂದು ಕಿವಿಗೆ ಹೂ ಹಿಡಲು ಯತ್ನಿಸಿದರೆ ಭಾರತೀಯರೇನು ರಾಹುಲ್ ಗಾಂಧಿಯೇ?. ಕಾಂಗ್ರೆಸ್‌ನಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರಬಹುದಷ್ಟೆ. ವಿಧಿ ಬರಹ ಬದಲಾಗಿ ತಿಲಕರು-ನೇತಾಜಿ ಹೆಚ್ಚುಕಾಲ ಬದುಕಿದ್ದು, ಸರದಾರ ಪಟೇಲರು ಪ್ರಥಮ ಪ್ರಧಾನಿಯಾಗಿದಿದ್ದರೆ ಭಾರತದ ಭೂಪಟ ಮತ್ತು ಹಣೆಬರಹವೇ ಬದಲಾಗುತಿತ್ತು.
ದುರದೃಷ್ಟವಶಾತ್ ಬದುಕಬೇಕಿದ್ದವರು ಬೇಗ ಸತ್ತರು, ಬೇಗ ಸಾಯಬೇಕಿದ್ದವರು ಬದುಕಿ ಬೇಕಾದ ಹಾಗೆ ತೀಟೆ ತೀರಿಸಿಕೊಂಡರು. ಜತೆಗೆ ಮಗ್ಗುಲಲ್ಲಿ ಪಾಕಿಸ್ತಾನ ಬಾಂಗ್ಲದೇಶದಂಥ ಅಂಡಿನ ಮೇಲಿನ ಕುರದಂತೆ ಶಾಪವಾಗಿ ಸೃಷ್ಟಿಸಿ ಪ್ರೇತಾತ್ಮರಾದರು. ಇದರ ದುಷ್ಪರಿಣಾಮಗಳನ್ನು ದೇಶ ಇನ್ನೂ ಅನುಭವಿಸುವಂತಾಗಿದೆ. ಈಗ ಆರ್‌ಎಸ್‌ಎಸ್ ನವರು ರಾಷ್ಟ್ರಧ್ವಜ ಏರಿಸುವುದಿಲ್ಲವೆಂದು ಆರೋಪಿಸುವವರು ಮತ್ತು ಬಿಜೆಪಿಯೇತರ ರಾಜಕಾರಣಿಗಳಲ್ಲಿ ನಾಳೆಯ ಅಮೃತ ಮಹೋತ್ಸವದಲ್ಲಿ ‘ಭಾರತಮಾತೆಗೆ ಜೈ, ವಂದೇ ಮಾತರಂ’ ಎಂದು ಘೋಷಣೆ ಕೂಗುವ ಎದೆಗಾರಿಕೆ ಯಾರಿಗಿದೆಯೆಂದು ನೋಡೋಣ.
ರಾಷ್ಟ್ರ ರಾಷ್ಟ್ರಧ್ವಜ ಸಂವಿಧಾನವನ್ನು ಗೌರವಿಸುವುದನ್ನು ಯಾವುದೇ ಪಕ್ಷಗಳಿಂದಾಗಲಿ ಬಣ್ಣಗಳನ್ನು ಗುರುತಿಸಲಾಗದ
ಅಯೋಗ್ಯ ರಾಜಕಾರಣಿಗಳಿಂದಾಗಲಿ ಕಲೆಯ ಬೇಕಾದ ದರಿದ್ರ ದೇಶಾಭಿಮಾನಿಗಳಿಗಿಲ್ಲ. ಆದರೆ ಸುಪ್ರೀಂ ಕೋರ್ಟ್ ನ್ಯಾಯಾ ಧೀಶರ ಒಂದು ಸಮಿತಿ ರಚಿಸಿ ದೇಶಕ್ಕೆ ಯಾರಿಂದ ಸ್ವಾತಂತ್ರ್ಯ ಬಂದಿದ್ದು, ರಾಷ್ಟ್ರಗೀತೆ ಹೇಗಾಯಿತು, ರಾಷ್ಟ್ರ
ಭಾಷೆಯೇನು, ಅಂಬೇಡ್ಕರ್ ಅವರಿಗೇನಾಯಿತು, ಗಾಂಧೀಜೀಯ ಆಜ್ಞೆ ಏನಾಗಿತ್ತು, ನಾಥುರಾಮ ಗೋಡ್ಸೆ ಗಾಂಧಿಯನ್ನು ಕೊಲ್ಲಲು ಕಾರಣಗಳೇನು, ನೆಹರು-ಗಾಂಽ-ವೀರಸಾವರ್ಕರ್ ಪಾತ್ರಗಳೇನು ಎಂಬುದೆಲ್ಲ ಸತ್ಯಶೋಧನೆ ಮಾಡಿ ವರದಿಯನ್ನು ದೇಶಕ್ಕೆ ತಿಳಿಸಲೇಬೇಕಾದ ಅವಶ್ಯಕತೆ ಇದೆ.