ಟ್ಯಾಂಕ್ಗೆ ಸಿಡಿಲು ಬಡಿದ ಪರಿಣಾಮ ಆಸಿಡ್ ಸೋರಿಕೆಯಿಂದಾಗಿ ಘಟನಾ ಸ್ಥಳದಲ್ಲಿದ್ದ ಹತ್ತು ನೌಕರರು ಸುಟ್ಟು ಕರಕ ಲಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೈಲಾಶ್ ಸಿಂಗ್ ತಿಳಿಸಿದ್ದಾರೆ.
ಗಾಯಗೊಂಡ ಉದ್ಯೋಗಿಗಳನ್ನು ತಕ್ಷಣವೇ ಚಿತ್ತೋರ್ಗಢದ ಜಿಲ್ಲಾ ಆಸ್ಪತ್ರೆಗೆ ಸಾಗಿಸ ಲಾಗಿದ್ದು, ಅಲ್ಲಿ ಒಬ್ಬರು ಚಿಕಿತ್ಸೆ ನೀಡುವ ಸಮಯದಲ್ಲಿ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇತರ ಒಂಬತ್ತು ಮಂದಿಯನ್ನು ಚಿಕಿತ್ಸೆಗಾಗಿ ಉದಯಪುರಕ್ಕೆ ಕಳುಹಿಸಲಾಗಿದೆ. ಮೃತರ ಗುರುತು ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.