Saturday, 23rd November 2024

ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಉದ್ಘಾಟನೆ

ಶ್ರೀನಗರ: ಜಮ್ಮುಕಾಶ್ಮೀರದ ರಾಜಧಾನಿ ಶ್ರೀನಗರವನ್ನು ದೇಶದ ಇತರೆ ಭಾಗಗಳಿಗೆ ಸಂಪರ್ಕಿಸುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ಶನಿವಾರ ಉದ್ಘಾಟಿಸಲಾಗಿದೆ.

ಒಂದೇ ಒಂದು ಕಮಾನಿನ ಮೇಲೆ 359 ಮೀ. ಎತ್ತರದಲ್ಲಿ ಈ ಸೇತುವೆ ನಿರ್ಮಾಣಗೊಂಡಿದೆ. ಚೀನಾದ ಗಿಝೌ ಪ್ರಾಂತ್ಯದ ಬೆಪಾಂಜಿಯಾಂಗ್‌ ನದಿಯ ಮೇಲೆ 275 ಮೀಟರ್‌ ಎತ್ತರದಲ್ಲಿ ನಿರ್ಮಿಸಿದ ಸೇತುವೆಗೆ ಅತ್ಯಂತ ಎತ್ತರದ ಸೇತುವೆಯೆಂಬ ಹೆಗ್ಗಳಿಕೆಯಿತ್ತು.

ಚೆನಾಬ್‌ ನದಿಯ ಮೇಲ್ಭಾಗದಲ್ಲಿ ನಿರ್ಮಿಸಲಾಗಿರುವ ಒಂದೇ ಒಂದು ಕಮಾನಿನ ಮೇಲೆ 1.35 ಕಿ.ಮೀ. ಉದ್ದದ ಸೇತುವೆ ಸಿದ್ಧವಾಗಿದೆ. 28,000 ಕೋಟಿ ರೂ. ವೆಚ್ಚದಲ್ಲಿ ಮುಂಬೈ ಮೂಲದ ಮೂಲಸೌಕರ್ಯ ನಿರ್ಮಾಣ ಸಂಸ್ಥೆ ಆಫ್ಕಾನ್ಸ್‌ ಇದನ್ನು ನಿರ್ಮಿಸಿದೆ. ಉಧಾಂಪುರ-ಶ್ರೀನಗರ-ಬಾರಾಮುಲ್ಲ ರೈಲುಮಾರ್ಗವನ್ನು ಬೆಸೆಯಬಹುದು.

  1. ಭೂಕುಸಿತ ಸಂಭವಿಸುವ ಪ್ರದೇಶದಲ್ಲಿ, ಅತ್ಯಂತ ಎತ್ತರದಲ್ಲಿ ಸೇತುವೆ ನಿರ್ಮಿಸಲಾಗಿದೆ.
  2. ಐಫೆಲ್‌ ಟವರ್‌ಗಿಂತ 35 ಮೀಟರ್‌ ಹೆಚ್ಚುವರಿ ಎತ್ತರ ಹೊಂದಿದೆ.
  3. ಈ ಸೇತುವೆ ಜಮ್ಮುಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿದೆ. ಇದು ಸಲಾಲ್‌ ಎ ಮತ್ತು ದುಗ್ಗಾ ರೈಲು ನಿಲ್ದಾಣಗಳನ್ನು ಬೆಸೆಯಲಿದೆ.
  4. ಸೇತುವೆಗೆ ಬಳಸಲಾಗಿರುವ ಕಂಬಗಳು 17. ಹಾಗೆಯೇ 28,660 ಮೆಟ್ರಿಕ್‌ ಟನ್‌ ಉಕ್ಕನ್ನು ನಿರ್ಮಾಣಕ್ಕೆ ಬಳಸಲಾಗಿದೆ. ಕೇವಲ ಕಮಾನಿನ ತೂಕವೇ 10,619 ಮೆಟ್ರಿಕ್‌ ಟನ್‌ಗಳಷ್ಟಿದೆ.
  5. ಬಾಳಿಕೆ ಅವಧಿ 120 ವರ್ಷಗಳು. 100 ಕಿ.ಮೀ. ವೇಗದಲ್ಲಿ ಇದರ ಮೇಲೆ ರೈಲುಗಳು ಸಂಚರಿಸಬಹುದು.