Friday, 22nd November 2024

ಶಾಲೆಗಳಲ್ಲಿ ಹೊಸ ಸಂಪ್ರದಾಯ ಹುಟ್ಟುಹಾಕಲು ಅವಕಾಶ ಇಲ್ಲ: ಬಿ.ಸಿ ನಾಗೇಶ್‌

ಬೆಂಗಳೂರು: ಗಣೇಶ ಕೂರಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿಲ್ಲ, ನಮಾಜ್‌ಗೆ ಅವಕಾಶ ಕೊಡಲ್ಲ.

ಶಾಲೆಯಲ್ಲಿ ಗಣೇಶಮೂರ್ತಿ ಕೂರಿಸುವ ವಿಚಾರವಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಪ್ರತಿಕ್ರಿಯಿಸಿದ್ದು ಹೀಗೆ.

ಶಾಲೆಯಲ್ಲಿ ಗಣೇಶೋತ್ಸವ ಆಚರಿಸುವ ಬಗ್ಗೆ ಮಾತನಾಡಿ, ಶಿಕ್ಷಣ ಇಲಾಖೆ ಯಾವುದೇ ಶಾಲೆಯಲ್ಲಿ ಗಣೇಶ ಕೂರಿಸಲು ಅನುಮತಿಯೂ ಕೊಟ್ಟಿಲ್ಲ, ಕೂರಿಸಬೇಡಿ ಅಂತಾನೂ ಹೇಳಿಲ್ಲ. ಯಾವುದೇ ಮಾರ್ಗಸೂಚಿ, ಅನುಮತಿಯನ್ನು ಕೊಟ್ಟಿಲ್ಲ ಎಂದು ಉತ್ತರಿಸಿದ್ದಾರೆ.

ಬ್ರಿಟಿಷರ ಕಾಲದಿಂದಲೂ ಗಣೇಶೋತ್ಸವ ಮಾಡಿಕೊಂಡು ಬರಲಾಗ್ತಿದೆ. ಹಿಂದೆ ಯಾವ ರೀತಿ ನಡೆಯುತ್ತಿತ್ತೋ ಅದೇ ರೀತಿ ನಡೆದುಕೊಂಡು ಬರಲಿದೆ. ಶಿಕ್ಷಣ ಇಲಾಖೆಯಿಂದ ಅನುಮತಿ ಕೊಟ್ಟಿದ್ದಾರೆ ಅನ್ನೋದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

ನಮಾಜ್‌ಗೆ ಅವಕಾಶ ಕೊಡೋಕೆ ಸಾಧ್ಯವೇ ಇಲ್ಲ. ಶಾಲೆಗಳಲ್ಲಿ ಹೊಸ ಹೊಸ ಸಂಪ್ರದಾಯ ಹುಟ್ಟುಹಾಕೋಕೆ ಅವಕಾಶ ಇಲ್ಲ ಎಂದು ಸಚಿವರು ಹೇಳಿದ್ದಾರೆ.