ಆಂಚಲ್ ಗುಪ್ತಾ ಪಾನಿಪುರಿ ವ್ಯಾಪಾರಿಯಾಗಿದ್ದು, ತಮ್ಮ ಮಗಳು ಅನೋಖಿ ಯ 1ನೇ ವರ್ಷದ ಹುಟ್ಟುಹಬ್ಬ ಸಂಭ್ರಮಾ ಚರಣೆಯ ಅಂಗವಾಗಿ ಬಂಜಾರಿ ಮೈದಾನದಲ್ಲಿ ದೊಡ್ಡ ಟೆಂಟ್ನ ಅಡಿಯಲ್ಲಿ 21 ಸ್ಟಾಲ್ಗಳನ್ನು ಸ್ಥಾಪಿಸಿ ಅಲ್ಲಿ ಪಾನಿಪುರಿ ವಿತರಿಸಿದ್ದಾರೆ.
ಹೆಣ್ಣುಮಕ್ಕಳಿಗೆ ಶಿಕ್ಷಣದ ಅಗತ್ಯತೆಯ ಬಗ್ಗೆ ಸಂದೇಶ ಕಳುಹಿಸುವ ಉದ್ದೇಶದಿಂದ ಆಚರಣೆಯ ವೆಚ್ಚದ ಬಗ್ಗೆ ತಲೆಕೆಡಿಸಿ ಕೊಂಡಿಲ್ಲ ಎಂದು ಗುಪ್ತಾ ಹೇಳಿದ್ದಾರೆ. ಅಂಚಲ್ ಗುಪ್ತಾ ಅವರ ಈ ಕಾರ್ಯಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿ ಪ್ರಶಂಸಿಸಿದ್ದಾರೆ.
ಸಮಾರಂಭದಲ್ಲಿ ಭಾಗವಹಿಸಿದ್ದ ಸ್ಥಳೀಯ ಶಾಸಕ ರಾಮೇಶ್ವರ್ ಶರ್ಮಾರಿಂದ ಶ್ಲಾಘಿಸಿದ್ದಾರೆ.