Sunday, 15th December 2024

ಆರ್.ಎಸ್.ಎಸ್ ಮತ್ತು ಬಿಜೆಪಿಗರ ಹೇಡಿಗಳ ಕೃತ್ಯಕ್ಕೆ ಕಾಂಗ್ರೆಸ್ ಜಗ್ಗುವುದಿಲ್ಲ: ಎಂ.ವಿ.ಅ0ಜಿನಪ್ಪ

ಹರಪನಹಳ್ಳಿ: ಕೊಡಗಿನ ಮಳೆಹಾನಿ ವೀಕ್ಷಣೆಗೆ ತೆರಳಿದ್ದ ಸಿದ್ದರಾಮಯ್ಯ ಕಾರಿನ ಮೇಲೆ ಆರ್.ಎಸ್.ಎಸ್. ಮತ್ತು ಬಿಜೆಪಿಯ ಕಾರ್ಯಕರ್ತರು ಮೊಟ್ಟೆ ಎಸೆಯುವುದು ಬಿಜೆಪಿಗರ ಹೇಡಿಗಳ ಕೃತ್ಯ ಇದ್ದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಪುರಸಭೆ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಎಂ.ವಿ. ಅಂಜಿನಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂಧಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ ಎರಡು ದಿನಗಳ ಹಿಂದೆ ರಾಜ್ಯದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ರವರು ಕೊಡಗು ಮತ್ತು ಮಡಿಕೇರಿಯಲ್ಲಿ ಮಳೆಹಾನಿ ವೀಕ್ಷಣೆಗೆ ತೆರಳಿದಾಗ ಆರ್.ಎಸ್.ಎಸ್. ಮತ್ತು ಬಿಜೆಪಿ ಹೇಡಿಗಳು, ಪುಂಡರು ಕಾಂಗ್ರೆಸ್ ವಿಪಕ್ಷನಾಯಕರ ಮೇಲೆ ಮೊಟೆ ಎಸೆಯುವುದು ಎಷ್ಟರಮಟ್ಟಿಗೆ ಸರಿ? ಬಿಜೆಪಿಯವರು ಸಾಧನೆಯ ಬಲದಿಂದ ಚುನಾವಣೆ ಯನ್ನು ಎದುರಿಸಲಿಕ್ಕಾಗದ ಬಿಜೆಪಿ ನಾಯಕರಿಗೆ ಸುಳ್ಳು ಸುದ್ದಿ ಮತ್ತು ಆಧಾರ ರಹಿತ ಆರೋಪಗಳೇ ಬಂಡವಾಳ ಹಳೆಯ ಆಟವನ್ನು ಬಿಜೆಪಿ ಮತ್ತು ಆರ್ ಎಸ್ ಎಸ್ ನವರು ರಾಜ್ಯದಲ್ಲಿ ಮತ್ತೆ ಶುರುಮಾಡಿದೆ ಈ ಸುಳ್ಳಿನ ಸರದಾರರಿಗೆ ಸತ್ಯವನ್ನು ಎದುರಿಸುವ ನೈತಿಕತೆ ಇಲ್ಲ. ಕೋಮುಗಲಭೆ ಹುಟ್ಟುಹಾಕಲು ಇಂತಹ ಕೃತ್ಯವನ್ನು ಮಾಡುತ್ತೀದ್ದಾರೆ ರಾಜ್ಯಕ್ಕೆ ಸಿದ್ದರಾಮಯ್ಯನವರು ಆನೆ ಇದ್ದಂತೆ ಅವರ ತಂಟೆಗೆ ಬಂದರೆ ರಾಜ್ಯದ್ಯಾಂತ ಬಿಜೆಪಿ ವಿರುದ್ಧ ಉಗ್ರವಾದ ಹೊರಾಟ ಮಾಡುತ್ತೇವೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ಸಂದೇಶವನ್ನು ನೀಡಿದರು.

ಇಂತಹ ಕೃತ್ಯಗಳು ಬಿಜೆಪಿಯವರ ಹತಾಶೆ ತೋರಿಸುತ್ತಿದೆ. ಸಿದ್ದರಾಮಯ್ಯರವನ್ನು ಸೈದಾಂತಿಕವಾಗಿ ಎದುರಿಸಲಾಗದ ಬಿಜೆಪಿ ಇಂತಹ ಹೀನ ನಡೆ ಪ್ರದರ್ಶಿಸುತ್ತಿದೆ ಇದೊಂದು ಸರ್ಕಾರಿ ಪ್ರಯೋಜಿತ ಗಲಭೆ ಸಿದ್ದರಾಮಯ್ಯ ನವರ ೭೫ನೇ ವರ್ಷದ ಹುಟ್ಟು ಹಬ್ಬದಲ್ಲಿ ಭರ್ಜರಿ ಯಶಸ್ಸಿನ ಬಳಿಕ ಬಿಜೆಪಿಯವರಿಗೆ ನಡುಕ ಶುರುವಾಗಿದೆ. ಹಾಗಾಗಿ ಸಿದ್ದರಾಮಯ್ಯರ ಮೇಲೆ ಅಸಹನೆಯಿಂದ ಕಾರ್ಯಕರ್ತರನ್ನು ಛೂ ಬಿಟ್ಟು ಘೇರಾವ್ ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ಈ ಷಡ್ಯಂತ್ರಕ್ಕೆ ಕಾಂಗ್ರೆಸ್ ಆಗಲಿ ಸಿದ್ದರಾಮಯ್ಯರಾಗಲಿ ಸೊಪ್ಪು ಹಾಕುವುದಿಲ್ಲ ಬಿಜೆಪಿಯವರು ಮತ್ತು ಆರ್ ಎಸ್ ಎಸ್ ನವರು ಹೇಡಿಗಳಂತೆ ವರ್ತಿಸುವುದನ್ನು ಬಿಡಲಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ವಸಂತಪ್ಪ, ಚಿಕ್ಕೇರಿ ಬಸಣ್ಣ, ತೆಲಗಿ ಮಂಜುನಾಥ್, ಬಸವರಾಜ್ ವಕೀಲರುಗಳಾದ ಟಿ.ಹೆಚ್. ಮಂಜುನಾಥ್, ಪುಣಭಗಟ್ಟಿ ನಿಂಗಪ್ಪ ಮೈದೂರು ರಾಮಣ್ಣ ಹುಲಿಕಟ್ಟಿೆಂ.ಬಿ. ಅಂಜಿನಪ್ಪ, ಚಂದ್ರಪ್ಪ, ಪುರಸಭೆ ಸದಸ್ಯರುಗಳಾದ ಲಾಟಿ ದಾದಾಪೀರ್, ಗಣೇಶ್,ಜಿಲ್ಲಾ ಯುವ ಕಾಂಗ್ರೆಸ್ ಪ್ರಾಧನ ಕಾರ್ಯದರ್ಶಿ ಜೀಷಾನ್, ರಿಯಾಜ್, ಅಬ್ಬು, ದ್ವರಕೇಶ್ ಉಪಸ್ಥಿತರಿದ್ದರು.