ಆಯೋಗ ಕರೆದಿರುವ ಮಹತ್ವದ ಸಭೆಯಲ್ಲಿ ಅಕ್ಟೋಬರ್ ವೇಳೆಗೆ ಚುನಾವಣೆ ನಡೆಸಲು ಮಾಡಬೇಕಾದ ಸಿದ್ದತೆ ಬಗ್ಗೆ ಚರ್ಚೆ ಕುರಿತು ಚರ್ಚೆಯಾಗುವ ಸಾಧ್ಯತೆಗಳಿವೆ. ಇದರ ಜೊತೆ ಚುನಾವಣೆ ತಯಾರಿಗೆ ಬೇಕಾಗಿರುವ ಅಧಿಕಾರಿಗಳ ಪಟ್ಟಿಯನ್ನು ಶೀಘ್ರವೇ ಸಿದ್ದಪಡಿಸುವ ಸೂಚನೆ ನೀಡುವ ಸಾಧ್ಯತೆಗಳಿವೆ. ಇನ್ನು ಮತದಾರ ಪಟ್ಟಿ ಪರಿಷ್ಕರಣೆಗೆ ಆ.22 ಕೊನೆಯ ದಿನಾಗಿರುವುದರಿಂದ ಈ ದಿನಾಂಕವನ್ನು ಮತ್ತೊಂದು ವಾರ ವಿಸ್ತರಿ ಸುವ ಸಾಧ್ಯತೆಗಳಿವೆ.
ಸುಪ್ರೀಂ ಕೋರ್ಟ್ ಖಡಕ್ ಆದೇಶಕ್ಕೆ ಬೆದರಿದ ಬಿಬಿಎಂಪಿ ಮತ್ತು ಸರ್ಕಾರ 198 ವಾರ್ಡ್ ಗಳನ್ನು 243 ವಾರ್ಡ್‌ಗಳಾಗಿ ಮರು ವಿಂಗಡಣೆ ಮಾಡಿದ್ದರು. ಬಳಿಕ ವಾರ್ಡ್ ಮೀಸಲಾ ತಿಯ ಗೊಂದಲ ಸೃಷ್ಟಿಯಾಗಿತ್ತು. ಯಾವುದೇ ಆಕ್ಷೇಪಣೆಗಳಿಗೆ ಸೊಪ್ಪು ಹಾಕದ ನಗರಾಭಿವೃದ್ದಿ ಇಲಾಖೆ ಮೊದಲು ಬಿಡುಗಡೆ ಮಾಡಿದ್ದ ಮೀಸಲಾತಿ ಪಟ್ಟಿಯನ್ನೇ ಅಂತಿಮಗೊಳಿಸಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಶೀಘ್ರದಲ್ಲೇ ಚುನಾವಣೆ ನಡೆಸಲು ಚುನಾವಣಾ ಆಯೋಗವು ಸನ್ನದ್ದವಾಗಿದೆ.
ಬಿಬಿಎಂಪಿ ಚುನಾವಣೆಯ ಸಂಬಂಧ ಚುನಾವಣಾ ಆಯೋಗದ ಪೂರ್ವಭಾವಿ ಸಭೆಗೆ ಬಿಬಿಎಂಪಿ ಮುಖ್ಯ ಆಯುಕ್ತರು, ವಾರ್ತಾ ಇಲಾಖೆಯ ಆಯುಕ್ತರು, ಬೆಂಗಳೂರು ಜಿಲ್ಲಾಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು( ಆಡಳಿತ, ದಕ್ಷಿಣ ಮತ್ತು ಮಹದೇವಪುರ) ಬಿಬಿಎಂಪಿ , ಬಿಬಿಎಂಪಿಯ ಎಲ್ಲಾ ವಲಯದ ಆಯುಕ್ತರನ್ನು ಸಭೆಗೆ ಆಹ್ವಾನಿಸಲಾಗಿದೆ.