ಅಲ್-ಶಬಾಬ್ ಭಯೋತ್ಪಾದಕ ಗುಂಪಿನ ಉಗ್ರರು ಶುಕ್ರವಾರ ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿ, ಮನಬಂದಂತೆ ಗುಂಡು ಹಾರಿಸಿದ್ದಾರೆ. ಹೋಟೆಲ್ ಒಳಗೆ ಸ್ಫೋಟದ ಸದ್ದು ಕೂಡ ಕೇಳಿಬಂದಿದೆ. ದಾಳಿಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬಂದೂಕುಧಾರಿಗಳು ಹೋಟೆಲ್‌ಗೆ ಬಲವಂತವಾಗಿ ನುಗ್ಗುವ ಕೆಲವೇ ನಿಮಿಷಗಳ ಮೊದಲು ಭಾರೀ ಸ್ಫೋಟ ಕೂಡ ಸಂಭವಿಸಿತ್ತು ಎನ್ನಲಾಗಿದೆ.