ಅಂತಿಮ ಹಂತದಲ್ಲಿರುವ ಚುನಾವಣೆ ಸಿದ್ಧತೆಗಳು
ಅಗತ್ಯ ಸಿದ್ಧತೆ ಆರಂಭಿಸಿದ ಚುನಾವಣೆ ಆಯೋಗ
ವೆಂಕಟೇಶ ಆರ್.ದಾಸ್, ಬೆಂಗಳೂರು
ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಿಬಿಎಂಪಿ ಚುನಾವಣೆ ನಡೆಸಲೇಬೇಕಾದ ಅನಿವಾರ್ಯತೆಯಲ್ಲಿರುವ ಸರಕಾರ ಶೀಘ್ರವೇ ಬಿಬಿಎಂಪಿ ಚುನಾವಣೆ ಘೋಷಣೆಗೆ ಮುಂದಾ ಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಚುನಾವಣೆ ಘೋಷಣೆಗೆ ಅಗತ್ಯ ಎಲ್ಲ ಸಿದ್ಧತೆಗಳು ಈಗಾಗಲೇ ಅಂತಿಮ ಹಂತದಲ್ಲಿವೆ. ಈ ನಡುವೆ ಚುನಾವಣೆ ವಿಳಂಬ, ವಾರ್ಡ್ ವಿಂಗಡಣೆ ವರದಿ ಮತ್ತು ಮೀಸಲು ಪಟ್ಟಿಗೆ ಸಂಬಂಧಿಸಿ ವಿವಿಧ ಪ್ರಕರಣಗಳು ಸುಪ್ರಿಂ ಕೋರ್ಟ್ ಮತ್ತು ಹೈಕೋರ್ಟ್ನಲ್ಲಿ ವಿಚಾರಣೆ ನಡೆದು, ತೀರ್ಪಿಗೆ ಬಾಕಿಯಿವೆ.
ಈ ಹಿನ್ನೆಲೆಯಲ್ಲಿ ಸರಕಾರ ಸ್ವತಃ ಚುನಾವಣೆ ನಡೆಸಲು ಆಸಕ್ತಿ ತೋರಿದ್ದು, ಶೀಘ್ರವೇ ಚುನಾವಣೆ ನಡೆಸಲು ಸಿದ್ಧವಿರುವುದಾಗಿ ಘೋಷಣೆ ಮಾಡಲಿದೆ. ಆ ಮೂಲಕ ದಿನಾಂಕ ನಿಗದಿಗೆ ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಲಿದೆ. ೨೦೨೦ರ ಸೆ.೧೦ರಂದು ಬಿಬಿಎಂಪಿ ಚುನಾಯಿತ ಜನಪ್ರತಿನಿಧಿಗಳ ಅಧಿಕಾರವಧಿ ಪೂರ್ಣಗೊಂಡಿದ್ದು, ಇನ್ನೆರಡು ವಾರಗಳಲ್ಲಿ ಎರಡು ವರ್ಷ ಪೂರ್ಣಗೊಳ್ಳಲಿದೆ.
ಸುಪ್ರಿಂ ಕೋರ್ಟ್ ಈಗಾಗಲೇ ಚುನಾವಣೆ ಘೋಷಣೆಗೆ ಎರಡು ತಿಂಗಳ ಕಾಲಾವಕಾಶ ನೀಡಿತ್ತು. ಮೀಸಲು ಪಟ್ಟಿ ಮತ್ತು ವಾರ್ಡ್ ವಿಂಗಡಣೆ ಪಟ್ಟಿ ಅಂತಿಮಗೊಳಿಸಲು ಸರಕಾರಕ್ಕೆ ಸೂಚನೆ ನೀಡಿತ್ತು. ಈ ಸೂಚನೆ ಅನ್ವಯ ಮೀಸಲು ಪಟ್ಟಿ ಮತ್ತು ವಾರ್ಡ್ ವಿಂಗಡಣೆ ಪ್ರಕ್ರಿಯೆ ಪೂರ್ಣವಾಗಿದೆ. ಆದರೆ, ಅದರ ವಿರುದ್ಧ ಕೆಲವರು ತಕರಾರು ತೆಗೆದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಸಂಬಂಧ ನ್ಯಾಯಾ ಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ, ಸರಕಾರ ಚುನಾವಣೆ ಘೋಷಣೆಗೆ ಮನಸು ಮಾಡಿದೆ.
ಶೀಘ್ರವೇ ಚುನಾವಣೆ ಘೋಷಣೆಯಾ ಗಲಿದ್ದು, ಅಕ್ಟೋಬರ್ನಲ್ಲಿ ಬಿಬಿಎಂಪಿ ಚುನಾವಣೆ ನಡೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಚುನಾವಣೆ ಸಿದ್ಧತೆಗೆ ಕೈಗೊಂಡಿರುವ ಕ್ರಮಗಳ ಕುರಿತು ಆ.೨೬ರಂದು ಸುಪ್ರಿಂ ಕೋರ್ಟ್ಗೆ ರಾಜ್ಯ ಸರಕಾರ ಮತ್ತು ಚುನಾವಣಾ ಆಯೋಗ ವರದಿ ನೀಡಬೇಕಿದೆ. ಅಂತೆಯೇ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ಮೀಸಲು ಪಟ್ಟಿಯ ಮೇಲಿನ ಪ್ರಕರಣಗಳ ಮುಂದಿನ ವಿಚಾರಣೆ ಆ.೨೯ಕ್ಕೆ ನಿಗದಿಯಾಗಿದೆ.
ಅದೇ ರೀತಿ ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಆ.೨೫ರಂದು ಪ್ರಕಟ ಮಾಡಬೇ ಕಾಗಿದೆ. ಈ ಎಲ್ಲ ಪ್ರಕ್ರಿಯೆಗಳನ್ನು
ಗಮನಿಸಿದರೆ, ಚುನಾವಣೆ ಪ್ರಕ್ರಿಯೆಗೆ ಶೀಘ್ರವೇ ಚಾಲನೆ ದೊರೆತು, ಅಕ್ಟೋಬರ್ ಅಂತ್ಯದಲ್ಲಿ ಅಥವಾ ನವೆಂಬರ್ ಮೊದಲ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಅಧಿಕಾರಿಗಳ ಜತೆ ಸಿಎಂ ಸಭೆ: ಬಿಬಿಎಂಪಿ ಚುನಾವಣೆ ನಡೆಸುವ ಸಂಬಂಧ ಮತ್ತು ನ್ಯಾಯಾಲಯದಲ್ಲಿನ ಕಾನೂನು
ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಸುಪ್ರಿಂ ಕೋರ್ಟ್ನಲ್ಲಿ ಸಲ್ಲಿಕೆ ಮಾಡಬಹುದಾದ ವರದಿಯ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜತೆಗೆ
ಮೀಸಲು ಪಟ್ಟಿ ಮೇಲಿನ ಪ್ರಕರಣದ ಕುರಿತು ಸಿಎಂ ಮಾಹಿತಿ ಪಡೆದುಕೊಂಡಿದ್ದಾರೆ. ಜತೆಗೆ, ಕಾನೂನಿನಡಿಯಲ್ಲಿ ಬಿಬಿಎಂಪಿ
ಚುನಾವಣೆ ಸಂಬಂಧದ ಸಾಧ್ಯಾಸಾಧ್ಯತೆಗಳ ಕುರಿತು ಚರ್ಚೆ ನಡೆಸಿದ್ದಾರೆ. ಜತೆಗೆ, ನಗರದ ಎಲ್ಲ ಶಾಸಕರು ಮತ್ತು ಸಚಿವರ
ಜತೆಗೆ ಇಂದು ಸಭೆ ನಡೆಸಿ, ಚುನಾವಣೆ ಘೋಷಣೆಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಚುನಾವಣೆ ಆಯೋಗ ಪೂರ್ವಭಾವಿ ಸಭೆ ಇಂದು
ಬಿಬಿಎಂಪಿ ಚುನಾವಣೆಯ ಪೂರ್ವಭಾವಿ ಸಿದ್ಧತೆಗಳ ಕುರಿತು ಚರ್ಚೆ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗವು ಇಂದು ಮಧ್ಯಾಹ್ನ ೩.೩೦ಕ್ಕೆ ಸದಾಶಿವನಗರದ ಕಚೇರಿಯಲ್ಲಿ ಸಭೆಯನ್ನು ಕರೆದಿದೆ. ಸಭೆಯಲ್ಲಿ ಸಿದ್ಧತೆಗಳಿಗೆ ಸಂಬಂಧಿಸಿದಂತೆ ತಯಾರಾಗಿರುವ ವರದಿಗಳು, ಮತದಾರರ ಪಟ್ಟಿಯ ಕುರಿತು ಪ್ರಗತಿಯಲ್ಲಿರುವ ವಿವರಗಳು, ಮತಗಟ್ಟೆಗಳ ರಚನೆಗೆ ಸಂಬಂಧಿಸಿದ ಮಾಹಿತಿ ಸೇರಿದಂತೆ ಇನ್ನಿತರ ವಿವರಗೊಂದಿಗೆ ಸಭೆಗೆ ಹಾಜರಾಗುವಂತೆ ಅಽಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರು, ನಗರ ಜಿಲ್ಲಾಧಿಕಾರಿ ಮತ್ತು ಸಹಾಯಕ ಚುನಾವಣಾಽಕಾರಿಗಳು ಹಾಗೂ ಎಲ್ಲ ವಲಯ ಆಯುಕ್ತರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕಾಂಗ್ರೆಸ್ನಿಂದ ಬಿಬಿಎಂಪಿ ಚುನಾವಣೆ ಪ್ರಣಾಳಿಕೆ ಸಮಿತಿ
ಬೆಂಗಳೂರು: ಬಿಬಿಎಂಪಿ ಚುನಾವಣೆಯ ಪ್ರಣಾಳಿಕೆಯನ್ನು ಸಿದ್ಧಪಡಿಸುವ ಸಂಬಂಧ ಮಾಜಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯನ್ನು ರಚನೆ ಮಾಡಲಾಗಿದೆ.
ಮಾಜಿ ಪರಿಷತ್ ಸದಸ್ಯರು, ನಗರ ತಜ್ಞರು, ವಿವಿಧ ಕ್ಷೇತ್ರದ ಪರಿಣಿತರನ್ನು ಒಳಗೊಂಡ ೩೩ ಸದಸ್ಯರ ತಂಡವನ್ನು ಪ್ರಣಾಲಿಕೆ ರಚನೆಗೆ ನೇಮಿಸಲಾಗಿದೆ. ಈ ಸಂಬಂಧ ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣ್ದೀಪ್ ಸುರ್ಜೇವಾಲಾ ಅಧಿಕೃತ ಆದೇಶ ಹೊರಡಿಸಿದ್ದಾರೆ. ಸಮಿತಿಯಲ್ಲಿ ರಾಜೀವ್ ಗೌಡ ಅಧ್ಯಕ್ಷರಾಗಿದ್ದರೆ, ಮನ್ಸೂರ್ ಆಲಿಖಾನ್, ಮಾಜಿ ಐಎಎಸ್ ಅಧಿಕಾರಿ
ಸಿದ್ದಲಿಂಗಯ್ಯ, -.ರಾಧಾಕೃಷ್ಣ, ಬೆಂಗಳೂರು ವಿವಿ ನಿವೃತ್ತ ಉಪಕುಲಪತಿ ಎಸ್. ಜಾ-ಟ್, ಬಿಬಿ ಎಂಪಿ ಮಾಜಿ ಮುಖ್ಯ ಎಂಜಿನಿಯರ್ ಕೆ.ಟಿ.ನಾಗರಾಜ್, ವೈ.ಕೆ.ಮುದ್ದುಕೃಷ್ಣ, ಮಂಜುಳಾ ನಾಯ್ಡು, ಅಂಬರೀಶ್, ಅಕ್ಕಯ್ ಪದ್ಮಶಾಲಿ, ಅಗಾ ಸುಲ್ತಾನ್, ಡಿ.ಕೆ.ಮೋಹನ್ ಬಾಬು, ಡಾ.ಶ್ರೀನಿವಾಸ್, ಎಸ್.ಎ.ಹುಸೇನ್, ಗೌತಮ್, ಅನಿಲ್ ಕುಮಾರ್, ಡಾ.ನಾಗಲಕ್ಷ್ಮಿ, ಡಾ.
ಗುಹಾ, ಸುಷ್ಮಾ ಮಹಾಬಲ, ಎ.ಎನ್. ನಟರಾಜ್ ಗೌಡ, ಸುಧೀಂದ್ರ ಎಂ.ಜಿ., ಎಸ್.ಎ.ಅಹಮದ್, ರಘು ದೊಡ್ಡೇರಿ, ಡಾ.ಚಮನ್ -ರ್ಜಾನಾ, ಭವ್ಯಾ ನರಸಿಂಹ ಮೂರ್ತಿ, ತಿಮ್ಮರಾಜು, ಬೇಗೂರು ಆನಂದ್, ಎಸ್.ಗೋಪಿನಾಥ್, ಆನಂದ ಪ್ರಸಾದ್, ಸುಭಾಷ್ ಬಾಬು, ವೈ.ಬಿ. ಶ್ರೀವಸ್ತಾ, ಮಾಜಿ ಎಂಎಲ್ಸಿ ಆರ್.ಧರ್ಮಸೇನಾ, ಕಾರ್ಮಿಕ ವಿಭಾಗದ ಪುಟ್ಟಸ್ವಾಮಿಗೌಡ ಸದಸ್ಯ ರಾಗಿರಲಿದ್ದಾರೆ.
ಜತೆಗೆ ರಾಜ್ಯಸಭೆ ಮತ್ತು ಲೋಕಸಭೆ ಸದಸ್ಯರು, ಬಿಬಿಎಂಪಿ ವ್ಯಾಪ್ತಿಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಮೇಯರ್ ಮತ್ತು ಉಪಮೇಯರ್ಗಳು, ಆಡಳಿತ ಪಕ್ಷದ ಮಾಜಿ ನಾಯಕರು ಬೆಂಗಳೂರು ನಗರ ಜಿಲ್ಲೆಯ ಮೂರು ಜಿಲ್ಲಾಧ್ಯಕ್ಷರು ಸಮಿತಿಯಲ್ಲಿ ಇರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.