Sunday, 15th December 2024

ಕ್ರಾಂತಿ ಸಂಗೋಳ್ಳಿ ರಾಯಣ್ಣನ ಪ್ರತಿಮೆಗೆ ೧೫ಲಕ್ಷ ನೀಡಿದರು: ಯಶವಂತರಾಯಗೌಡ ಪಾಟೀಲ

ಇಂಡಿ: ಮಳಿಗಿರಾಯ ಮತ್ತು ನಿಂಗರಾಯ ಜಾತ್ರಾ ಮಹೋತ್ಸ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಶಾಸಕ ಯಶವಂತ ರಾಯಗೌಡ ಪಾಟೀಲ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.

ಈ ಸಂಧರ್ಬದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ ಬಂಡಾರ ಬಂಗಾರದ0ತ ಪರಿಶುದ್ದವಾದ ಪ್ರಸಾದವಾಗಿದ್ದು ಇದರಷ್ಟೇ ಹಾಲುಮತ ಸಮಾಜದ ಕುಲ ಬಾಂಧವರ ಮನಸ್ಸು ಸಹಿತ ಪರಿಶುದ್ದವಾಗಿದೆ ಈ ಭಾಗದಲ್ಲಿ ಅನೇಕ ಶರಣರು, ದಾರ್ಶನಿಕ ಯುಗ ಪುರುಷರು ಜನಿಸಿ ಈ ಭಾಗದ ಜನರಿಗೆ ಸಂಸ್ಕಾಯುತ ಬದುಕಿಗೆ ದಾರಿದೀಪವಾಗಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ -೧೯ ಬಾಧೆಯಿಂದ ದೇಶದಲ್ಲಿ ಯಾವುದೇ ಜಾತ್ರೆ ,ಹಬ್ಬ ಹರಿದಿನಗಳು ಧಾರ್ಮಿಕ ಕಾರ್ಯಕ್ರಮಗಳು ಇಲ್ಲದೆ ಸಂಕಷ್ಟದ ಪರಸ್ಥಿತಿ ಎದುರಿಸುವಂತಾಗಿತ್ತು ಭಗವಂತ ಮಳಿಗಿರಾಯನ ಹಾಗೂ ನಿಂಗರಾಯರ ಕೃಪೆಯಿಂದ ಎಲ್ಲಸಂಕಷ್ಟಗಳು ದೂರಾಗಿ ಸಹಜ ಸ್ಥಿತಿಗೆ ಬಂದಿದ್ದೇವೆ.

ಪಟ್ಟಣದ ಅನೇಕ ಅಭಿವೃದ್ದಿಪರ ಕೆಲಸಗಳು ಆಗಿವೆ. ನಾನು ಯಾವ ದೂರದೃಷ್ಠಿ ಇಟ್ಟು ರಾಜಕೀಯ ಮಾಡಬೇಕು ಎಂಬ ಸಂಕಲ್ಪ ಇತ್ತು ಅದನ್ನು ಮಾಡಿರುವ ಸಮಾಧಾನ ನನಗಿದೆ. ೨೦೧೩ರಲ್ಲಿ ಈ ನಾಡು ಕಂಡ ರಾಜಕೀಯ ಮುತ್ಸದಿ ಸಿದ್ದರಾಮಯ್ಯ ನವರು ನನ್ನ ಮತಕ್ಷೇತ್ರಕ್ಕೆ ಸರ್ವ ರೀತಿಯ ಅನುಧಾನ ನೀಡಿ ಅಭಿವೃದ್ದಿಗೆ ಮುನ್ನುಡಿ ಬರೆದಿರುತ್ತಾರೆ. ಇಂತಹ ನಾಯಕನನ್ನು ಜೀವಮಾನದಲ್ಲಿ ಮರೆಯುವುದಿಲ್ಲ, ಯಾರೂ ಉಪಕಾರ ಮಾಡಿದ್ದಾರೆ ಸ್ಮರಿಸಬೇಕಾಗಿರುವುದು ಮನುಷ್ಯ ಧರ್ಮ.

ಈ ತಾಲೂಕು ಮುಂಬರುವ ದಿನಗಳಲ್ಲಿ ಜಿಲ್ಲೆ ಮಾಡುವ ಕನಸ್ಸು ಹೊಂದಿದ್ದೇನೆ ಈ ಹಿಂದೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅನೇಕ ಸ್ವಾತಂತ್ರö್ಯ ಹೋರಾಟಗಾರರ ಪ್ರತಿಮೆಗಳು ಸ್ಥಾಪಿಸುವ ಯೋಜನೆ ಇಟ್ಟುಕೊಂಡಿದ್ದೇವೆ ಮಿನಿವಿಧಾನಸೌಧಾ ಮುಂಭಾಗ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣನ ಪ್ರತಿಮೆಗೆ ೧೫ ಲಕ್ಷ ರೂ ಕೂಡಲೆ ನೀಡುವದಾಗಿ ಘೋಷಣೆ ಮಾಡಿದರು. ದೇವರು ಸರ್ವ ಜನತೆಗೆ ಆರೋಗ್ಯ, ಭಾಗ್ಯ ಕೊಟ್ಟು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಹಾಲುಮತ ಸಮಾಜದ ಹಿರಿಯ ಮುಖಂಡ ಜಟ್ಟೆಪ್ಪ ರವಳಿ, ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ, ಹಣಮಂತ ಕಂಟಿಕರ, ಶೇಖರ ನಾಯಕ, ಮಹಿಬೂಬ ಅರಬ, ಪರಶುರಾಮ ಪೂಜಾರಿ, ಅಂತೋ ಜೈನ್ , ದಶರಥ ಕೊರೆ, ಬಸವರಾಜ ಶಿನಾಳ, ನೀಲಕಂಠ ರೂಗಿ, ಸುಭಾಷ ಅಚ್ಚೇಗೇರ, ರಮೇಶ ಕಲ್ಯಾಣಿ, ಮುತ್ತು ಪೂಜಾರಿ, ಪ್ರಶಾಂತ ಕಾಳೆ, ಭೀಮಣ್ಣಾ ಕೌಲಗಿ, ಜಾವೀದ ಮೋಮಿನ
ಅರ್ಜುನ ಹಿರೇಕುರಬರ ಸೇರಿದಂತೆ ಜಾತ್ರಾಕಮೀಟಿ ಸದಸ್ಯರು ಮುಖಂಡರು ಇದ್ದರು.