Sunday, 15th December 2024

ಸಮಾಜ ಆರ್ಥಿಕವಾಗಿ ವೈಜ್ಞಾನಿಕವಾಗಿ ಮುಂದುವರೆಯುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ

ಬಸವನಬಾಗೇವಾಡಿ: ಸಮಾಜ ಆರ್ಥಿಕವಾಗಿ ವೈಜ್ಞಾನಿಕವಾಗಿ ಮುಂದುವರೆಯುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿರುತ್ತದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಬಸವ ಭವನದಲ್ಲಿ ನಿವೃತ್ತ ಶಿಕ್ಷಕ ಎಸ್,ಜೆ, ಪಾಟೀಲ ಅವರ ಅಭಿನಂದನಾ ಸಮಾ ರಂಭದ ಉದ್ಘಾಟನೆ ನೇರವೆರಿಸಿ ಮಾತನಾಡಿದ ಅವರು ನ್ಯಾಯಾಲಯದಲ್ಲಿ ತಾತ್ಕಾಲಿಕವಾಗಿ ಮಾತ್ರ ತಲೆಬಾಗುತ್ತೆವೆ ನಮಗೆ ಶಿಕ್ಷಣ ಕಲಿಸಿದ ಶಿಕ್ಷಕರಿಗೆ ಮಾತ್ರ ಜೀವನ ಪೂರ್ತಿ ತಲೆ ಬಾಗುತ್ತೆವೆ. ಎಸ್,ಜಿ ಪಾಟೀಲ ಗುರುಗಳು ತಮ್ಮ ವೃತ್ತಿಯೊಂದಿಗೆ ಶಿಕ್ಷಕರ ಹಲವಾರು ಸಮಸ್ಯಗೆ ಧ್ವನಿಯಾಗಿ ನಿಂತು ಶಿಕ್ಷಕರಿಗೆ ನ್ಯಾಯ ಕೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ ಶಿಕ್ಷಕ ವೃತ್ತಿ ಎನ್ನುವುದು ಎಲ್ಲ ವೃತ್ತಿಗಳಲ್ಲಿ ಶ್ರೇಷ್ಟ ವೃತ್ತಿಯಾಗಿದೆ, ಪ್ರತಿಯೊಬ್ಬರು ಜೀವನಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಿರುತ್ತಾರೆ ಅಂತಹ ಶ್ರೇಷ್ಠ ವೃತ್ತಿಯಿಂದ ನಿವೃತ್ತ ಗೊಂಡ ಪಾಟೀಲ ಗುರುಗಳು ಮುಂಭರುವ ದಿನಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೂಡಗಿಸಿಕೊಂಡು ಇತರರಿಗೆ ಮಾದರಿಯಾಗಬೇಕಿದೆ ಎಂದರು ಹೇಳಿದರು.

ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಎಸ್,ಎಂ ದೇಸಾಯಿ, ಜೆಡಿಎಸ್ ಮುಖಂಡ ರಾಜುಗೌಡ ಪಾಟೀಲ ಮಾತನಾಡಿದರು, ಮಾಜಿ ಸಚಿವ ಎಸ್,ಕೆ, ಬೆಳ್ಳುಬ್ಬಿ, ಸಹಕಾರಿ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಭಾಜಪಾ ಮುಖಂಡ ಅಪ್ಪುಗೌಡ ಪಾಟೀಲ, ಸಹಕಾರಿ ಧುರೀಣ ಶಿವನಗೌಡ ಬಿರಾದಾರ, ನ್ಯಾಯವಾದಿ ಬಿ,ಕೆ ಕಲ್ಲೂರ, ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಸುರೇಶ ಹರಿವಾಳ, ಸಂಗಪ್ಪಮುತ್ಯಾ ಅಡಗಿಮನಿ, ಸೇರಿದಂತೆ ಮುಂತಾದ ವರು ವೇದಿಕೆಯಲ್ಲಿದ್ದರು.

ದೇವೇಂದ್ರ ಗೋನಾಳ ಸ್ವಾಗತಿಸಿದರು, ಸಾಹೇಬಗೌಡ ಬಿರಾದಾರ ನಿರೂಪಿಸಿದರು, ಗಿರಿಜಾ ಪಾಟೀಲ ವಂದಿಸಿದರು.