ಯಶೋ ಬೆಳಗು
yashomathy@gmail.com
ಸಂಜೆ ೬.೩೦ರ ಸಮಯ. ತರಗತಿಯಲ್ಲಿ ಮಕ್ಕಳು ಭರತನಾಟ್ಯ ಕಲಿಯುತ್ತಿದ್ದರು. ರಿಂಗಾಗುತ್ತಿದ್ದ ಫೋನಿನಲ್ಲಿ ಸ್ವಾಮಿಗೌಡರ
ಹೆಸರು ಕಂಡು ‘ಹಲೋ’ ಎಂದಾಗ, ‘ಮೇಡಮ, ನನ್ನ ಕ್ಲಾಸ್ಮೇಟ್ ಗೆಳೆಯ ಈಗ ರಾಜರಾಜೇಶ್ವರಿ ನಗರದ ಪೊಲೀಸ್ ಸ್ಟೇಷನ್ನಿನ ಇನ್ಸ್ಪೆಕ್ಟರ್ ಆಗಿದ್ದಾರೆ.
ನಿಮಗೇನಾದರೂ ಅಗತ್ಯವಿದ್ದರೆ ಅವರ ನಂಬರ್ ಕೊಟ್ಟಿರುತ್ತೇನೆ, contact ಮಾಡಿ ಎಂದಾಗ, ‘ನಮ್ಮ ಏರಿಯಾಗೆ ಬಂದಿದ್ದೀರಿ. ಮನೆಗೆ ಬಂದು ಹೋಗಿ’ ಎಂದು ಆಹ್ವಾನಿ ಸಿದೆ. ಹೇಳಿದ ಹತ್ತು ನಿಮಿಷಗಳ ಮನೆಯ ಮುಂದೆ ತಮ್ಮ ಹೊಚ್ಚ ಹೊಸ ಕಾರಿನಲ್ಲಿ ಬಂದಿಳಿದರು. ಬಾಸ್ ಬಗ್ಗೆ ಮಾತನಾಡುತ್ತ, ನಮಗ್ಯಾರಿಗೂ ತಿಳಿಯದಂತೆ ಅವರು ಬಾಸ್ಗೆ ಎಷ್ಟು ಆಪ್ತರಾಗಿದ್ದರು ಎಂಬ ರಹಸ್ಯವನ್ನು ತಿಳಿಸಿದರು.
‘ಓ ಇದೆಲ್ಲ ವಿಷಯ ನಮಗೆ ಗೊತ್ತೇ ಇರಲಿಲ್ಲವ ಗೌಡ್ರೇ’ ಎನ್ನುತ್ತ ನಾವು ಅವರ ಮಾತಿಗೆ ಕಿವಿಯಾದೆವು. ಶ್ರಾವಣ ಮಾಸದ ಮೊದಲ ಶುಕ್ರವಾರದಂದು ಅವರ ಊರಾದ ಲಕ್ಷ್ಮೀ ಸಾಗರದಲ್ಲಿ ಮಹಾಲಕ್ಷ್ಮಿಯ ಗುಡಿಯಲ್ಲಿ ತಮ್ಮ ಕುಟುಂಬದೊಡನೆ ಸಲ್ಲಿಸುವ ಪೂಜಾ ಕೈಂಕರ್ಯಕ್ಕೆ ನಮ್ಮನ್ನೂ ಆಹ್ವಾನಿಸಿ ಹೊರಟರು. ಪ್ರತಿ ಶ್ರಾವಣದಲ್ಲೂ ಚಾಮರಾಜ ನಗರ ಜಿಲ್ಲೆಯ ಹಿಮವದ್ ಗೋಪಾಲ ಸ್ವಾಮಿಯ ಬೆಟ್ಟಕ್ಕೆ ಹೋಗಿ ರುಕ್ಮಿಣೀ ಸತ್ಯಭಾ ಮೆಯರ ಸಮೇತ ಗೋಪಿಕೆಯರೊಂದಿಗೆ ನಿಂತಿರುವ ವೇಣು ಗೋಪಾಲನ ದರುಶನ ಮಾಡಿ ಬರುವುದು ಮಗ ಹುಟ್ಟಿದ ನಂತರ ಜಾರಿಗೆ ಬಂದ ರೂಢಿಗಳಲ್ಲಿ ಒಂದು.
ಸರಿ, ಹೇಗಿದ್ದರೂ ಅದೇ ದಾರಿಯಲ್ಲಿರುವ ಲಕ್ಷ್ಮೀಸಾಗರದ ಲಕ್ಷ್ಮೀದೇವಿಯ ದರುಶನ ಮಾಡಿಕೊಂಡು ಹೋಗೋಣ ಅಂದು ಕೊಂಡೆನಾದರೂ ಹಿಮವಂತನಿಗೆ ಶಾಲೆಯಿದ್ದಿದ್ದು ನೆನಪಾಗಿ ಅವನು ಶಾಲೆಯಿಂದ ಬಂದ ನಂತರ ಹೋಗೋಣವೆಂದುಕೊಂಡೆ. ಆದರೆ ದುರದೃಷ್ಟವಶಾತ್ ಗುರುವಾರ ಸಂಜೆಯೇ ಶಾಲೆಯಿಂದ ಬರುವಾಗ ಅವನ ಮೈ ಸುಡುತ್ತಾ ಜ್ವರದಿಂದ ಬಳಲುತ್ತಿತ್ತು. ಹೀಗಾಗಿ ಆ ದಿನ ಹೋಗಲಾಗಲಿಲ್ಲ. ಆಹ್ವಾನಿಸಿದ ಮೇಲೆ ಹೋಗದಿದ್ದರೆ ಬೇಸರವಾಗುತ್ತದೆಂದು ಅರಿತು ಒಂದು ವಾರದ ನಂತರ ಹೊರಟೆ. ರಾತ್ರಿ ಒಂಭತ್ತೂವರೆಯಾದರೂ ಸಂಜೆಯ ಪೂಜೆಯನ್ನು ನಮಗಾಗಿ ನಿಲ್ಲಿಸಿಕೊಂಡು ಕಾಯುತ್ತಿದ್ದ ಮಂದಿಯನ್ನು ಕಂಡು ಮನಸು ಮೂಕವಾಯ್ತು. ಪೂಜೆ-ಆರತಿಯ ನಂತರ ಬಲಗಡೆ ವರ ಪ್ರಸಾದವೂ ಆಗಿದ್ದು ಕಂಡು ಮನಸಿಗೆ ಹಿಗ್ಗು.
ಸನಿಹದ ಇದ್ದ ಅವರ ಮನೆಗೆ ಭೇಟಿ ನೀಡಿ, ಅವರ ಅಕ್ಕ ಕೊಟ್ಟ ಶುದ್ಧ ಹಸುವಿನ ಹಾಲನ್ನು ಕುಡಿದು ಹೊರಡುವಷ್ಟರಲ್ಲಿ ರಾತ್ರಿ
ಹತ್ತು ಗಂಟೆ. ಇಷ್ಟು ಹತ್ತಿರದಲ್ಲಿದ್ದರೂ ನೋಡಿ ಹತ್ತತ್ತಿರ 35 ವರ್ಷಗಳಾಗಿದ್ದ ಮೇಲುಕೋಟೆಗೆ ಅಲ್ಲಿಂದ ಹೊರಟೆವು. ಮಾರನೆಯ ಬೆಳಗ್ಗೆ ವಿಶೇಷವಾದ ಶ್ರಾವಣ ಶನಿವಾರ ದಂದು ಜನಪ್ರವಾಹ ಹರಿದುಬರುವ ಮೊದಲೇ ಚೆಲುವ ನಾರಾಯಣ ಹಾಗೂ ಯೋಗ ನರಸಿಂಹನ ದರುಶನ ಮುಗಿಸಿ, ಅದ್ಭುತವಾದ ಪುಳಿಯೋಗರೆ ತಿಂದು ಅಲ್ಲಿಂದ ಕಲ್ಲಹಳ್ಳಿಯ ಭೂ ವರಾಹ ಸ್ವಾಮಿಯ ದರುಶನ ಮಾಡಿ ಅನಂತರ ನಮ್ಮ ಹಿಮದ ಗೋಪಾಲನನ್ನು ನೋಡಲು ಹೊರಟೆವು. ಗೋಪಾಲನನ್ನು ಹೊರತು ಪಡಿಸಿ ಉಳಿದವರೆಲ್ಲ ಅಪರಿಚಿತರೇ, ಮೊದಲ ಬಾರಿಗೆ ಭೇಟಿಯಾದವರೇ.
ಕಲ್ಲಹಳ್ಳಿಯಿಂದ ಹೊರಡುವಷ್ಟರಗಲೇ ಹತ್ತತ್ತಿರ 3 ಗಂಟೆ. 4 ಗಂಟೆ ಹೊತ್ತಿಗೆ ಗೋಪಾಲಸ್ವಾಮಿ ಬೆಟ್ಟದ ಕೆಳಗೆ ಗೇಟ್ ಮುಚ್ಚಿ ಬಿಡುತ್ತಾರೆ. ಸುತ್ತಲೂ ದಟ್ಟ ಅರಣ್ಯ ಸುತ್ತುವರಿದಿರುವುದರಿಂದ ಆನೆ, ಹುಲಿ ಹಾಗೂ ಇನ್ನಿತರ ಕಾಡು ಪ್ರಾಣಿಗಳ ಹಾವಳಿಯಿಂದ ಯಾತ್ರಿಕರಿಗೆ ತೊಂದರೆಯಾಗದಿರಲೆಂದು (ನಮ್ಮಿಂದ ಅವಕ್ಕೆ ತೊಂದರೆಯಾಗುವುದೇ ಹೆಚ್ಚು!) ಮೊದಲಿನಂತೆ ಈಗ ಸಾರ್ವ ಜನಿಕ ವಾಹನಗಳನ್ನೆಲ್ಲ ಬೆಟ್ಟದ ಮೇಲಕ್ಕೆ ಬಿಡುವುದಿಲ್ಲ.
ಅಲ್ಲಿಂದ ಜೀಪಿನ ಅಥವಾ ಬಸ್ಸಿನ ಪ್ರಯಾಣ ಮುಂದುವರಿಸಬೇಕು. ಆದರೆ ಕಲ್ಲಹಳ್ಳಿಯಿಂದ ಕನಿಷ್ಠ 2 ಗಂಟೆಯಾದರೂ ಬೇಕು ಅಲ್ಲಿಗೆ ಹೋಗಲಿಕ್ಕೆ. ಹಿಮನಿಗೆ ಸಣ್ಣ ತೂಕಡಿಕೆ. ಜತೆಯಲ್ಲಿದ್ದವರಿಗೆ ಮಾತಿನ ಲಹರಿ. ಹೊರಟಿದ್ದೇ ಗೋಪಾಲನ ದರುಶನಕ್ಕೆ, ಅಷ್ಟು ದೂರ ಹೋಗಿ ದರುಶನವಾಗದೇ ಹೋದರೆ ಹೇಗೆ? ಅನ್ನುವ ದುಗುಡ. ‘ಮೇಡಮ್, ಅಲ್ಲಿ ನಮ್ಮ ಹುಡುಗ ಮನು ಶ್ಯಾನುಭೋಗ್ ಇರುತ್ತಾರೆ, ನೀವೇನೂ ಚಿಂತೆ ಮಾಡಬೇಡಿ’ ಅನ್ನುತ್ತಾ ಅವರ ನಂಬರನ್ನು ಕೊಟ್ಟರು ಸ್ವಾಮಿಗೌಡರು.
ಪತ್ರಿಕಾ ಕಚೇರಿಯೆಂದರೆ ಅಲ್ಲಿ ಸಾಕಷ್ಟು ಜನ ನಿರಂತರವಾಗಿ ಬಂದು ಹೋಗುತ್ತಿರುತ್ತಾರೆ. ಅದರಲ್ಲಿ ಕೆಲವರ ಪರಿಚಯವಾದರೆ, ಇನ್ನು ಕೆಲವರು ಅಜ್ಞಾತವಾಗೇ ಉಳಿದು ಹೋಗಿರುತ್ತಾರೆ. ಇವತ್ತಿಗೂ ಸಾಕಷ್ಟು ಜನ “ನಾನು ‘ಹಾಯ್’ ಕಚೇರಿಯಲ್ಲಿ ರವಿ ಸರ್ ಜತೆ ಕೆಲಸ ಮಾಡುತ್ತಿದ್ದೆ, ‘ಓ ಮನಸೆ’ಯಲ್ಲಿ ಕೆಲಸ ಮಾಡುತ್ತಿದ್ದೆ, ಅವರಿಗೆ ಮಾಹಿತಿದಾರನಾಗಿದ್ದೆ, ವರದಿಗಾರನಾಗಿದ್ದೆ, ‘ಕ್ರೈಂ ಡೈರಿ’
ಯಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೆ, ಪುಸ್ತಕ ವಿಭಾಗದಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದೆ. ಪ್ರಾರ್ಥನಾ ಶಾಲೆಯಲ್ಲಿ
ಅವರೊಂದಿಗೆ ಕೆಲಸ ಮಾಡುವಾಗ ಅವರ ಸ್ಫೂರ್ತಿದಾಯಕ ಮಾತುಗಳಿಂದ ಸಾಕಷ್ಟು ಪ್ರಭಾವಿತರಾಗಿದ್ದೆವು,
‘ಎಂದೂ ಮರೆಯದ ಹಾಡು’ ಕಾರ್ಯಕ್ರಮದ ತಂಡದಲ್ಲಿ ನಾವೂ ಒಬ್ಬರಾಗಿದ್ದೆವು. . FM RAINBOW ದಲ್ಲಿ ಬೆಳಗ್ಗೆ ಎಂಟು ಗಂಟೆಗೆ ಪ್ರಸಾರವಾಗುತ್ತಿದ್ದ ಅವರ ‘ಬೆಳ್ ಬೆಳಗ್ಗೆ ರವಿ ಬೆಳಗೆರೆ’ ಕಾರ್ಯಕ್ರಮದಲ್ಲಿ ಅವರ ಮಾತುಗಳನ್ನು ಕೇಳುವುದಕ್ಕಾಗಿಯೇ ರೇಡಿಯೋ ಮುಂದೆ ಕಾದು ಕುಳಿತಿರುತ್ತಿದ್ದೆವು, ನಮ್ಮ ಧಾರಾವಾಹಿಯಲ್ಲಿ ಅವರು ನಟಿಸಿದ್ದರು, ಅವರು ನಟಿಸಿದ ಸಿನಿಮಾ ತಂಡದಲ್ಲಿ ನಾನೂ ಇದ್ದೆ, ಜನಶ್ರೀ ವಾಹಿನಿಯಲ್ಲಿ ಅವರೊಂದಿಗೆ ಕೆಲಸ ಡಿz” ಎಂದೆಲ್ಲ ಪರಿಚಯಿಸಿಕೊಳ್ಳುವಾಗ ನನಗೆ
ಅವರನ್ನು ನೋಡಿದ ನೆನಪೇ ಇರುವುದಿಲ್ಲ. ಆದರೆ ಅವರಿಗೆ ನಾನು ನೆನಪಿರುತ್ತೇನೆ. ಇನ್ನೂ ಕೆಲವು ವಿಚಾರಗಳಂತೂ ಮರೆತೇ ಹೋಗಿವೆ. ಯಾರಾದರೂ ನೆನಪು ಮಾಡಿದರೆ ‘ಹೌದಾ?’ ಎಂದು ನಾನೇ ಬೆರಗಾಗಿ ಕೇಳಿಸಿಕೊಳ್ಳುತ್ತೇನೆ.
ಈ ಜನ್ಮದಲ್ಲಿ ನಡೆದ ಘಟನೆಗಳೇ ನಮಗೆ ಹೀಗೆ ಅರೆಬರೆ ನೆನಪಿರುವಾಗ ಇನ್ನು ಜನ್ಮಜನ್ಮಾಂತರದವರೆಗೂ ಅದು ಹೇಗೆ ನಮ್ಮೊಂದಿಗೆ ನೆನಪಾಗಿ ನಡೆದುಬರುತ್ತದೆ? ಎನ್ನುವ ಪ್ರಶ್ನೆ ಕಾಡಲು ಶುರುವಾದಾಗ, ಬಹುಶಃ ನಮ್ಮ ಮೇಲೆ ಗಾಢ ಪ್ರಭಾವ ಬೀರಿದ ಅಂಶಗಳು ಮಾತ್ರ ನಮ್ಮ ಸ್ಮೃತಿ ಪಟಲದಲ್ಲಿ ಅಳಿಸಲಾಗದಂತೆ ಶಾಶ್ವತವಾಗಿ ಅಚ್ಚೊತ್ತಿ ಜನ್ಮಜನ್ಮಾಂತರಕ್ಕೂ ಬಿಡದಂತೆ ನಮ್ಮೊಂದಿಗೆ ನಡೆದು ಬರುತ್ತವೇನೋ? ಅನ್ನುವ ಸಮಾಧಾನದ ಉತ್ತರವನ್ನೂ ನನ್ನೊಳಗೇ ಕಂಡುಕೊಂಡು ನೆಮ್ಮದಿಯಾಗು ತ್ತೇನೆ.
ಇಂಥಾ ಜನಪ್ರವಾಹದಲ್ಲಿ, ಇಂದು ‘ಹಿಮಾಗ್ನಿ’ ಪತ್ರಿಕೆಯ ಸಂಪಾದಕರಾದ ಸ್ವಾಮಿಗೌಡರು ಕಲಾವಿದನಾಗಿದ್ದ ನನ್ನ ತಮ್ಮನ ಗೆಳೆಯನ ದೂರದ ಸಂಬಂಧಿ ಎಂಬುದು ಅನಂತರ ತಿಳಿಯಿತಾದರೂ ಅವರು ‘ಹಾಯ್’ ಕಚೇರಿಗೆ ಯಾವಾಗ ಬಂದರು? ಯಾವ ಸಂದರ್ಭದಲ್ಲಿ ರವಿಯನ್ನು ಭೇಟಿಯಾದರು? ಅವರ ಹಿನ್ನೆಲೆ ಏನು? ಎನ್ನುವುದು ವಿವರವಾಗಿ ನನಗೆ ತಿಳಿದಿರಲಿಲ್ಲ. ೨೦೦೫ರ ನಂತರ ನಾನು ‘ಹಾಯ್’ ಕಚೇರಿಗೆ ಮೊದಲಿನಂತೆ ನಿರಂತರವಾಗಿ ಹೋಗುತ್ತಿರಲಿಲ್ಲ. ‘ಹಾಯ್’ನಲ್ಲಿ ನಿಧಾನಕ್ಕೆ ಸಾಕಷ್ಟು ಬದಲಾವಣೆಗಳಾಗತೊಡಗಿದವು. ರವಿಯ ಗೆಳೆಯರಾಗಿದ್ದ ಉಮೇಶ್ ಹೆಗಡೆ ಪ್ರಾರ್ಥನಾ ಶಾಲೆಯ CEO ಆಗಿ ಬಂದರು.
ರವಿಯೊಂದಿಗೆ ‘ಸಂಯುಕ್ತ ಕರ್ನಾಟಕ’ದಲ್ಲಿ ಕೆಲಸ ಮಾಡಿದ ಅನುಭವವಿದ್ದ ಅವರ ಪತ್ನಿಯಾದ ಕವಯಿತ್ರಿ ವಿದ್ಯಾ ಭರತನ ಹಳ್ಳಿ ‘ಹಾಯ್’ ಕಚೇರಿ ಯಲ್ಲಿ ಸಂಪಾದಕೀಯ ವಿಭಾಗದಲ್ಲಿ ಕಾರ್ಯ ನಿರ್ವಹಿಸಲಾರಂಭಿಸಿದರು. 2006ರಲ್ಲಿ ರವಿಯ ಆರೋಗ್ಯದಲ್ಲಿ ಏರುಪೇರುಗಳಾಗತೊಡಗಿದವು. ೨೦೦೭ರಲ್ಲಿ ಕಚೇರಿಯ ಎದುರಿಗಿದ್ದ ಅಪಾರ್ಟ್ಮೆಂಟಿನಲ್ಲಿ ಫ್ಲ್ಯಾಟ್ ಖರೀದಿಸಿದೆವು.
2006-2008ರ ನಡುವೆ ಅವರ ಇಬ್ಬರು ಹೆಣ್ಣು ಮಕ್ಕಳಾದ ಚೇತನಾ-ಭಾವನಾರ ಮದುವೆಗಳಾದವು. 2008ರಲ್ಲಿ
ಹಿಮ ವಂತನ ಆಗಮನದಿಂದ ನಾನು ಹೆಚ್ಚಾಗಿ ಮಗುವಿನ ಆರೈಕೆಯೆಡೆಗೆ ಗಮನ ಹರಿಸಲಾರಂಭಿಸಿದೆ. ರವಿಯ ಆಪ್ತಗೆಳತಿಯಾಗಿ ‘ಹಾಯ್’ ಕಚೇರಿಯನ್ನು ನಿರ್ವಹಿಸುತ್ತಿದ್ದ ನಿವೇದಿತಾ ಮದುವೆಯಾಗಿ ಗಂಡನ ಮನೆಗೆ ಹೋದರು. ಪ್ರಾರ್ಥನಾ ಶಾಲೆಯಲ್ಲಿ ನಿರ್ವಾಹಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಉಷಾ ಶಿವಕುಮಾರ್ ಶಾಲೆಯಿಂದ ಹೊರನಡೆದರು. ಒಬ್ಬರ ಹಿಂದೆ ಒಬ್ಬರಂತೆ ಸಾಲುಗಟ್ಟಿ ಅವರ ಆತ್ಮದಂತಿದ್ದವರೆಲ್ಲ ದೂರವಾಗುತ್ತಾ ಹೋಗಿ ರವಿಗೆ ಹೆಚ್ಚಾಗಿ ಒಂಟಿತನ ಕಾಡಲು ಆರಂಭವಾಯ್ತಾ?
ಆದರೂ ಅವರು ಛಲಬಿಡದ ತ್ರಿವಿಕ್ರಮನಂತೆ ಮತ್ತೆ ಹೊಸತಂಡ ಕಟ್ಟಲು ನಿಂತರು.
ನೊಂದ ಬದುಕಿನ ಆಶಾಕಿರಣವಾಗಿ ಹೊಳೆಯುತ್ತ, ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದ್ದ ಅವರನ್ನು ಯಶಸ್ಸಿನ ಮೇರು ಶಿಖರದಲ್ಲಿಟ್ಟು ಜನರೂ ತುಂಬು ಅಭಿಮಾನದಿಂದ ಮೆರೆಸುತ್ತಿದ್ದರು. 2014ರಲ್ಲಿ ಬಸವನಗುಡಿಯ ಗಾಂಧಿಬಜಾರಿನಲ್ಲಿ ‘ಬೆಳಗೆರೆ ಬುಕ್ಸ್ ಅಂಡ್ ಕಾಫಿ’ ಪುಸ್ತಕ ಮಳಿಗೆಯನ್ನು ಆರಂಭಿಸಿದರು. ಮಳಿಗೆಯನ್ನು ಬಾಡಿಗೆಗೆ ಹಿಡಿದ ಅಗ್ರಿಮೆಂಟ್ ಪ್ರತಿಯೊಂದಿಗೆ ಒಂದು ರಾತ್ರಿ ಉಮೇಶಣ್ಣ (ಉಮೇಶ್ ಹೆಗಡೆ)ನೊಂದಿಗೆ ಬಂದವರು, “ನೀನೇ ಅದರ ಮಾಲೀಕಳು. ಸರಿಯಾಗಿ ನಿರ್ವಹಿಸು. ಶುಭ-ಲಾಭ ಪ್ರಾಪ್ತಿರಸ್ತು” ಎಂದು ಹಾರೈಸಿದರು.
“ಅಯ್ಯೋ ನಾನೀಗ ನೆಮ್ಮದಿ ಯಾಗಿದ್ದೇನೆ. ನನ್ನಿಂದ ಈ ಜವಾಬ್ದಾರಿಯನ್ನು ಹೊರಲಾಗುತ್ತದಾ?” ಎಂದು ಅಳುಕಿದಾಗ, “ನಾನಿರ್ತೀನಲ್ಲ, ಜತೆಯ ದುಡಿಯುವುದನ್ನು ಕಲಿ” ಎಂದು ನಕ್ಕರು. ಎಸ್. ಕುಮಾರ್ ತಮ್ಮನಂತೆ ಜತೆಗೆ ನಿಂತ. 2015ರಲ್ಲಿ
ಅದಕ್ಕೆ ವರುಷ ತುಂಬುವಷ್ಟರಲ್ಲಿ ‘ಬಿಬಿಸಿ ಪಬ್ಲಿಕೇಷನ್’ ಹುಟ್ಟುಹಾಕಿ ಅದರಲ್ಲಿ ಮೊದಲ ಪುಸ್ತಕವಾಗಿ ‘ಮಧುಮಿತಾ ಶುಕ್ಲಾ ಹತ್ಯೆ’ ಅನ್ನುವ ಪುಸ್ತಕವನ್ನು ಅದರ ಜತೆಗೆ ‘ಹಾಯ್’ನಲ್ಲಿ ಅಂಕಣ ಬರಹವಾಗಿ ಬರುತ್ತಿದ್ದ ಸ್ವಾಮಿಗೌಡರ ‘ಕೋಟೆ ಕಟ್ಟಿ ಮೆರೆದೋರೆಲ್ಲ’ ಎನ್ನುವ ಪುಸ್ತಕ, ಶಶಿಕಲಾ ವಸದ್ ಅವರ ‘ಇದ್ದೇನಯ್ಯಾ ಇಲ್ಲದಂತೆ’ ಪುಸ್ತಕ, ವೀಣಾ ಬನ್ನಂಜೆಯವರ ‘ಸತ್ಯಕಾಮರೊಂದಿಗೆ ಸಾವಿರದ ದಿನಗಳು’ ಪುಸ್ತಕ ಹಾಗೂ ರವಿಯ ‘ಉಡುಗೊರೆ’ ಪುಸ್ತಕವನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಗೊಳಿಸಿದ್ದ ಜಿ.ಎಸ್. ಯುಧಿಷ್ಠಿರ ಅವರ RAVISM ಪುಸ್ತಕವನ್ನೂ ಸಮಾರಂಭದಲ್ಲಿ ಬಿಡುಗಡೆಗೊಳಿಸಿದೆವು.
ಕಷ್ಟಗಳು ಆಗಲೂ ಇದ್ದವು, ಈಗಲೂ ಇವೆ. ಒಂದೇ ಬದಲಾವಣೆ ಎಂದರೆ ಆಗ ಬೆಟ್ಟದಂತೆ ಜತೆಯಲ್ಲಿ ರವಿ ಇದ್ದಸಂ ಜೆ 6.30ರ ಸಮಯ. ತರಗತಿಯಲ್ಲಿ ಮಕ್ಕಳು ಭರತನಾಟ್ಯ ಕಲಿಯುತ್ತಿದ್ದರು. ರಿಂಗಾಗುತ್ತಿದ್ದ ಫೋನಿನಲ್ಲಿ ಸ್ವಾಮಿಗೌಡರ ಹೆಸರು ಕಂಡು ‘ಹಲೋ’ ಎಂದಾಗ, ‘ಮೇಡಮ, ನನ್ನ ಕ್ಲಾಸ್ಮೇಟ್ ಗೆಳೆಯ ಈಗ ರಾಜರಾಜೇಶ್ವರಿ ನಗರದ ಪೊಲೀಸ್ ಸ್ಟೇಷನ್ನಿನ ಇನ್ಸ್ಪೆಕ್ಟರ್ ಆಗಿದ್ದಾರೆ.
ನಿಮಗೇನಾದರೂ ಅಗತ್ಯವಿದ್ದರೆ ಅವರ ನಂಬರ್ ಕೊಟ್ಟಿರುತ್ತೇನೆ, ಟ್ಞಠಿZಠಿ ಮಾಡಿ ಎಂದಾಗ, ‘ನಮ್ಮ ಏರಿಯಾಗೆ ಬಂದಿದ್ದೀರಿ. ಮನೆಗೆ ಬಂದು ಹೋಗಿ’ ಎಂದು ಆಹ್ವಾನಿ ಸಿದೆ. ಹೇಳಿದ ಹತ್ತು ನಿಮಿಷಗಳ ಮನೆಯ ಮುಂದೆ ತಮ್ಮ ಹೊಚ್ಚ ಹೊಸ ಕಾರಿನಲ್ಲಿ ಬಂದಿಳಿದರು. ಬಾಸ್ ಬಗ್ಗೆ ಮಾತನಾಡುತ್ತ, ನಮಗ್ಯಾರಿಗೂ ತಿಳಿಯದಂತೆ ಅವರು ಬಾಸ್ಗೆ ಎಷ್ಟು ಆಪ್ತರಾಗಿದ್ದರು ಎಂಬ ರಹಸ್ಯವನ್ನು ತಿಳಿಸಿದರು. ‘ಓ ಇದೆಲ್ಲ ವಿಷಯ ನಮಗೆ ಗೊತ್ತೇ ಇರಲಿಲ್ಲವ ಗೌಡ್ರೇ’ ಎನ್ನುತ್ತ ನಾವು ಅವರ ಮಾತಿಗೆ ಕಿವಿಯಾ ದೆವು.
ಶ್ರಾವಣ ಮಾಸದ ಮೊದಲ ಶುಕ್ರವಾರದಂದು ಅವರ ಊರಾದ ಲಕ್ಷ್ಮೀಸಾಗರದಲ್ಲಿ ಮಹಾಲಕ್ಷ್ಮಿಯ ಗುಡಿಯಲ್ಲಿ ತಮ್ಮ ಕುಟುಂಬದೊಡನೆ ಸಲ್ಲಿಸುವ ಪೂಜಾ ಕೈಂಕರ್ಯಕ್ಕೆ ನಮ್ಮನ್ನೂ ಆಹ್ವಾನಿಸಿ ಹೊರಟರು. ಪ್ರತಿ ಶ್ರಾವಣದಲ್ಲೂ ಚಾಮರಾಜ ನಗರ ಜಿಯ ಹಿಮವದ್ ಗೋಪಾಲ ಸ್ವಾಮಿಯ ಬೆಟ್ಟಕ್ಕೆ ಹೋಗಿ ರುಕ್ಮಿಣೀ ಸತ್ಯಭಾಮೆಯರ ಸಮೇತ ಗೋಪಿಕೆಯರೊಂದಿಗೆ ನಿಂತಿರುವ ವೇಣುಗೋಪಾಲನ ದರುಶನ ಮಾಡಿ ಬರುವುದು ಮಗ ಹುಟ್ಟಿದ ನಂತರ ಜಾರಿಗೆ ಬಂದ ರೂಢಿಗಳಲ್ಲಿ ಒಂದು.
ಸರಿ, ಹೇಗಿದ್ದರೂ ಅದೇ ದಾರಿಯಲ್ಲಿರುವ ಲಕ್ಷ್ಮೀಸಾಗರದ ಲಕ್ಷ್ಮೀದೇವಿಯ ದರುಶನ ಮಾಡಿಕೊಂಡು ಹೋಗೋಣ ಅಂದು ಕೊಂಡೆ ನಾದರೂ ಹಿಮವಂತನಿಗೆ ಶಾಲೆಯಿದ್ದಿದ್ದು ನೆನಪಾಗಿ ಅವನು ಶಾಲೆಯಿಂದ ಬಂದ ನಂತರ ಹೋಗೋಣವೆಂದು ಕೊಂಡೆ. ಆದರೆ ದುರದೃಷ್ಟವಶಾತ್ ಗುರುವಾರ ಸಂಜೆಯೇ ಶಾಲೆಯಿಂದ ಬರುವಾಗ ಅವನ ಮೈ ಸುಡುತ್ತಾ ಜ್ವರದಿಂದ ಬಳಲುತ್ತಿತ್ತು.
ಹೀಗಾಗಿ ಆ ದಿನ ಹೋಗಲಾಗಲಿಲ್ಲ. ಆಹ್ವಾನಿಸಿದ ಮೇಲೆ ಹೋಗದಿದ್ದರೆ ಬೇಸರವಾಗುತ್ತದೆಂದು ಅರಿತು ಒಂದು ವಾರದ ನಂತರ ಹೊರಟೆ. ರಾತ್ರಿ ಒಂಭತ್ತೂವರೆಯಾದರೂ ಸಂಜೆಯ ಪೂಜೆಯನ್ನು ನಮಗಾಗಿ ನಿಲ್ಲಿಸಿಕೊಂಡು ಕಾಯುತ್ತಿದ್ದ ಮಂದಿಯನ್ನು ಕಂಡು ಮನಸು ಮೂಕವಾಯ್ತು. ಪೂಜೆ-ಆರತಿಯ ನಂತರ ಬಲಗಡೆ ವರ ಪ್ರಸಾದವೂ ಆಗಿದ್ದು ಕಂಡು ಮನಸಿಗೆ ಹಿಗ್ಗು.
ಸನಿಹದ ಇದ್ದ ಅವರ ಮನೆಗೆ ಭೇಟಿ ನೀಡಿ, ಅವರ ಅಕ್ಕ ಕೊಟ್ಟ ಶುದ್ಧ ಹಸುವಿನ ಹಾಲನ್ನು ಕುಡಿದು ಹೊರಡುವಷ್ಟರಲ್ಲಿ ರಾತ್ರಿ
ಹತ್ತು ಗಂಟೆ. ಇಷ್ಟು ಹತ್ತಿರದಲ್ಲಿದ್ದರೂ ನೋಡಿ ಹತ್ತತ್ತಿರ 35 ವರ್ಷಗಳಾಗಿದ್ದ ಮೇಲುಕೋಟೆಗೆ ಅಲ್ಲಿಂದ ಹೊರಟೆವು. ಮಾರನೆಯ ಬೆಳಗ್ಗೆ ವಿಶೇಷವಾದ ಶ್ರಾವಣ ಶನಿವಾರ ದಂದು ಜನಪ್ರವಾಹ ಹರಿದುಬರುವ ಮೊದಲೇ ಚೆಲುವ ನಾರಾಯಣ ಹಾಗೂ ಯೋಗ ನರಸಿಂಹನ ದರುಶನ ಮುಗಿಸಿ, ಅದ್ಭುತವಾದ ಪುಳಿಯೋಗರೆ ತಿಂದು ಅಲ್ಲಿಂದ ಕಲ್ಲಹಳ್ಳಿಯ ಭೂ ವರಾಹ ಸ್ವಾಮಿಯ ದರುಶನ ಮಾಡಿ ಅನಂತರ ನಮ್ಮ ಹಿಮದ ಗೋಪಾಲನನ್ನು ನೋಡಲು ಹೊರಟೆವು.
ಗೋಪಾಲನನ್ನು ಹೊರತುಪಡಿಸಿ ಉಳಿದವರೆಲ್ಲ ಅಪರಿಚಿತರೇ, ಮೊದಲ ಬಾರಿಗೆ ಭೇಟಿಯಾದವರೇ. ಕಲ್ಲಹಳ್ಳಿಯಿಂದ ಹೊರಡು ವಷ್ಟರಗಲೇ ಹತ್ತತ್ತಿರ 3 ಗಂಟೆ. 4 ಗಂಟೆ ಹೊತ್ತಿಗೆ ಗೋಪಾಲಸ್ವಾಮಿ ಬೆಟ್ಟದ ಕೆಳಗೆ ಗೇಟ್ ಮುಚ್ಚಿಬಿಡುತ್ತಾರೆ. ಸುತ್ತಲೂ ದಟ್ಟ ಅರಣ್ಯ ಸುತ್ತುವರಿದಿರುವುದರಿಂದ ಆನೆ, ಹುಲಿ ಹಾಗೂ ಇನ್ನಿತರ ಕಾಡು ಪ್ರಾಣಿಗಳ ಹಾವಳಿಯಿಂದ ಯಾತ್ರಿಕರಿಗೆ ತೊಂದರೆ ಯಾಗದಿರಲೆಂದು (ನಮ್ಮಿಂದ ಅವಕ್ಕೆ ತೊಂದರೆಯಾಗುವುದೇ ಹೆಚ್ಚು!) ಮೊದಲಿನಂತೆ ಈಗ ಸಾರ್ವಜನಿಕ ವಾಹನಗಳನ್ನೆಲ್ಲ ಬೆಟ್ಟದ ಮೇಲಕ್ಕೆ ಬಿಡುವುದಿಲ್ಲ. ಅಲ್ಲಿಂದ ಜೀಪಿನ ಅಥವಾ ಬಸ್ಸಿನ ಪ್ರಯಾಣ ಮುಂದು ವರಿಸಬೇಕು.
ಆದರೆ ಕಲ್ಲಹಳ್ಳಿಯಿಂದ ಕನಿಷ್ಠ 2 ಗಂಟೆಯಾದರೂ ಬೇಕು ಅಲ್ಲಿಗೆ ಹೋಗಲಿಕ್ಕೆ. ಹಿಮನಿಗೆ ಸಣ್ಣ ತೂಕಡಿಕೆ. ಜತೆಯಲ್ಲಿದ್ದವರಿಗೆ ಮಾತಿನ ಲಹರಿ. ಹೊರಟಿದ್ದೇ ಗೋಪಾಲನ ದರುಶನಕ್ಕೆ, ಅಷ್ಟು ದೂರ ಹೋಗಿ ದರುಶನವಾಗದೇ ಹೋದರೆ ಹೇಗೆ? ಅನ್ನುವ ದುಗುಡ. ‘ಮೇಡಮ್, ಅಲ್ಲಿ ನಮ್ಮ ಹುಡುಗ ಮನು ಶ್ಯಾನುಭೋಗ್ ಇರುತ್ತಾರೆ, ನೀವೇನೂ ಚಿಂತೆ ಮಾಡಬೇಡಿ’ ಅನ್ನುತ್ತಾ ಅವರ ನಂಬರನ್ನು ಕೊಟ್ಟರು ಸ್ವಾಮಿಗೌಡರು.
ಪತ್ರಿಕಾ ಕಚೇರಿಯೆಂದರೆ ಅಲ್ಲಿ ಸಾಕಷ್ಟು ಜನ ನಿರಂತರವಾಗಿ ಬಂದು ಹೋಗುತ್ತಿರುತ್ತಾರೆ. ಅದರಲ್ಲಿ ಕೆಲವರ ಪರಿಚಯವಾದರೆ, ಇನ್ನು ಕೆಲವರು ಅeತವಾಗೇ ಉಳಿದು ಹೋಗಿರುತ್ತಾರೆ. ಇವತ್ತಿಗೂ ಸಾಕಷ್ಟು ಜನ “ನಾನು ‘ಹಾಯ್’ ಕಚೇರಿಯಲ್ಲಿ ರವಿ ಸರ್ ಜತೆ ಕೆಲಸ ಮಾಡುತ್ತಿದ್ದೆ, ‘ಓ ಮನಸೆ’ಯಲ್ಲಿ ಕೆಲಸ ಮಾಡುತ್ತಿದ್ದೆ, ಅವರಿಗೆ ಮಾಹಿತಿದಾರನಾಗಿದ್ದೆ, ವರದಿಗಾರನಾಗಿದ್ದೆ, ‘ಕ್ರೈಂ ಡೈರಿ’
ಯಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೆ, ಪುಸ್ತಕ ವಿಭಾಗದಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದೆ. ಪ್ರಾರ್ಥನಾ ಶಾಲೆಯಲ್ಲಿ
ಅವರೊಂದಿಗೆ ಕೆಲಸ ಮಾಡುವಾಗ ಅವರ ಸೂರ್ತಿ ದಾಯಕ ಮಾತುಗಳಿಂದ ಸಾಕಷ್ಟು ಪ್ರಭಾವಿತರಾಗಿದ್ದೆವು,
‘ಎಂದೂ ಮರೆಯದ ಹಾಡು’ ಕಾರ್ಯಕ್ರಮದ ತಂಡದಲ್ಲಿ ನಾವೂ ಒಬ್ಬರಾಗಿzವು. ಊI ಅಐಘೆಆuUದಲ್ಲಿ ಬೆಳಗ್ಗೆ ಎಂಟು ಗಂಟೆಗೆ ಪ್ರಸಾರವಾಗುತ್ತಿದ್ದ ಅವರ ‘ಬೆಳ್ ಬೆಳಗ್ಗೆ ರವಿ ಬೆಳಗೆರೆ’ ಕಾರ್ಯಕ್ರಮದಲ್ಲಿ ಅವರ ಮಾತುಗಳನ್ನು ಕೇಳುವುದಕ್ಕಾಗಿಯೇ ರೇಡಿಯೋ ಮುಂದೆ ಕಾದು ಕುಳಿತಿರುತ್ತಿದ್ದೆವು, ನಮ್ಮ ಧಾರಾವಾಹಿಯಲ್ಲಿ ಅವರು ನಟಿಸಿದ್ದರು, ಅವರು ನಟಿಸಿದ ಸಿನಿಮಾ ತಂಡದಲ್ಲಿ ನಾನೂ ಇದ್ದೆ, ಜನಶ್ರೀ ವಾಹಿನಿಯಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೆ” ಎಂದೆಲ್ಲ ಪರಿಚಯಿಸಿಕೊಳ್ಳುವಾಗ ನನಗೆ
ಅವರನ್ನು ನೋಡಿದ ನೆನಪೇ ಇರುವುದಿಲ್ಲ. ಆದರೆ ಅವರಿಗೆ ನಾನು ನೆನಪಿರುತ್ತೇನೆ.
ಇನ್ನೂ ಕೆಲವು ವಿಚಾರಗಳಂತೂ ಮರೆತೇಹೋಗಿವೆ. ಯಾರಾದರೂ ನೆನಪು ಮಾಡಿದರೆ ‘ಹೌದಾ?’ ಎಂದು ನಾನೇ ಬೆರಗಾಗಿ ಕೇಳಿಸಿಕೊಳ್ಳುತ್ತೇನೆ. ಈ ಜನ್ಮದಲ್ಲಿ ನಡೆದ ಘಟನೆಗಳೇ ನಮಗೆ ಹೀಗೆ ಅರೆಬರೆ ನೆನಪಿರುವಾಗ ಇನ್ನು ಜನ್ಮಜನ್ಮಾಂತರದವರೆಗೂ ಅದು ಹೇಗೆ ನಮ್ಮೊಂದಿಗೆ ನೆನಪಾಗಿ ನಡೆದುಬರುತ್ತದೆ? ಎನ್ನುವ ಪ್ರಶ್ನೆ ಕಾಡಲು ಶುರುವಾದಾಗ, ಬಹುಶಃ ನಮ್ಮ ಮೇಲೆ
ಗಾಢ ಪ್ರಭಾವ ಬೀರಿದ ಅಂಶಗಳು ಮಾತ್ರ ನಮ್ಮ ಸ್ಮೃತಿ ಪಟಲದಲ್ಲಿ ಅಳಿಸಲಾಗದಂತೆ ಶಾಶ್ವತವಾಗಿ ಅಚ್ಚೊತ್ತಿ ಜನ್ಮಜನ್ಮಾಂತರಕ್ಕೂ ಬಿಡದಂತೆ ನಮ್ಮೊಂದಿಗೆ ನಡೆದು ಬರುತ್ತವೇನೋ? ಅನ್ನುವ ಸಮಾಧಾನದ ಉತ್ತರವನ್ನೂ ನನ್ನೊಳಗೇ ಕಂಡುಕೊಂಡು ನೆಮ್ಮದಿಯಾಗುತ್ತೇನೆ.
ಇಂಥಾ ಜನಪ್ರವಾಹದಲ್ಲಿ, ಇಂದು ‘ಹಿಮಾಗ್ನಿ’ ಪತ್ರಿಕೆಯ ಸಂಪಾದಕರಾದ ಸ್ವಾಮಿಗೌಡರು ಕಲಾವಿದನಾಗಿದ್ದ ನನ್ನ ತಮ್ಮನ ಗೆಳೆಯನ ದೂರದ ಸಂಬಂಧ ಎಂಬುದು ಅನಂತರ ತಿಳಿಯಿತಾದರೂ ಅವರು ‘ಹಾಯ್’ ಕಚೇರಿಗೆ ಯಾವಾಗ ಬಂದರು? ಯಾವ ಸಂದರ್ಭದಲ್ಲಿ ರವಿಯನ್ನು ಭೇಟಿಯಾದರು? ಅವರ ಹಿನ್ನೆಲೆ ಏನು? ಎನ್ನುವುದು ವಿವರವಾಗಿ ನನಗೆ ತಿಳಿದಿರಲಿಲ್ಲ. ೨೦೦೫ರ ನಂತರ ನಾನು ‘ಹಾಯ್’ ಕಚೇರಿಗೆ ಮೊದಲಿನಂತೆ ನಿರಂತರವಾಗಿ ಹೋಗುತ್ತಿರಲಿಲ್ಲ. ‘ಹಾಯ್’ನಲ್ಲಿ ನಿಧಾನಕ್ಕೆ ಸಾಕಷ್ಟು ಬದಲಾವಣೆಗಳಾಗತೊಡಗಿದವು. ರವಿಯ ಗೆಳೆಯರಾಗಿದ್ದ ಉಮೇಶ್ ಹೆಗಡೆ ಪ್ರಾರ್ಥನಾ ಶಾಲೆಯ ಇಉu ಆಗಿ ಬಂದರು.
ರವಿಯೊಂದಿಗೆ ‘ಸಂಯುಕ್ತ ಕರ್ನಾಟಕ’ದಲ್ಲಿ ಕೆಲಸ ಮಾಡಿದ ಅನುಭವವಿದ್ದ ಅವರ ಪತ್ನಿಯಾದ ಕವಯಿತ್ರಿ ವಿದ್ಯಾ ಭರತನಹಳ್ಳಿ ‘ಹಾಯ್’ ಕಚೇರಿಯಲ್ಲಿ ಸಂಪಾದಕೀಯ ವಿಭಾಗದಲ್ಲಿ ಕಾರ್ಯ ನಿರ್ವಹಿಸಲಾರಂಭಿಸಿದರು. 2006ರಲ್ಲಿ ರವಿಯ ಆರೋಗ್ಯದಲ್ಲಿ ಏರುಪೇರುಗಳಾಗತೊಡಗಿದವು. ೨೦೦೭ರಲ್ಲಿ ಕಚೇರಿಯ ಎದುರಿಗಿದ್ದ ಅಪಾರ್ಟ್ಮೆಂಟಿನಲ್ಲಿ ಫ್ಲ್ಯಾಟ್ ಖರೀದಿಸಿದೆವು.
2006-2008ರ ನಡುವೆ ಅವರ ಇಬ್ಬರು ಹೆಣ್ಣು ಮಕ್ಕಳಾದ ಚೇತನಾ-ಭಾವನಾರ ಮದುವೆಗಳಾದವು. 2008ರಲ್ಲಿ ಹಿಮವಂತನ ಆಗಮನದಿಂದ ನಾನು ಹೆಚ್ಚಾಗಿ ಮಗುವಿನ ಆರೈಕೆಯೆಡೆಗೆ ಗಮನ ಹರಿಸಲಾರಂಭಿಸಿದೆ. ರವಿಯ ಆಪ್ತಗೆಳತಿಯಾಗಿ ‘ಹಾಯ್’ ಕಚೇರಿಯನ್ನು ನಿರ್ವಹಿಸುತ್ತಿದ್ದ ನಿವೇದಿತಾ ಮದುವೆಯಾಗಿ ಗಂಡನ ಮನೆಗೆ ಹೋದರು. ಪ್ರಾರ್ಥನಾ ಶಾಲೆಯಲ್ಲಿ ನಿರ್ವಾಹಕಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಉಷಾ ಶಿವಕುಮಾರ್ ಶಾಲೆಯಿಂದ ಹೊರನಡೆದರು. ಒಬ್ಬರ ಹಿಂದೆ ಒಬ್ಬರಂತೆ ಸಾಲುಗಟ್ಟಿ ಅವರ ಆತ್ಮದಂತಿದ್ದವರೆಲ್ಲ ದೂರವಾಗುತ್ತಾ ಹೋಗಿ ರವಿಗೆ ಹೆಚ್ಚಾಗಿ ಒಂಟಿತನ ಕಾಡಲು ಆರಂಭವಾಯ್ತಾ?
ಆದರೂ ಅವರು ಛಲಬಿಡದ ತ್ರಿವಿಕ್ರಮನಂತೆ ಮತ್ತೆ ಹೊಸತಂಡ ಕಟ್ಟಲು ನಿಂತರು.
ನೊಂದ ಬದುಕಿನ ಆಶಾಕಿರಣವಾಗಿ ಹೊಳೆಯುತ್ತ, ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದ್ದ ಅವರನ್ನು ಯಶಸ್ಸಿನ ಮೇರು ಶಿಖರದಲ್ಲಿಟ್ಟು ಜನರೂ ತುಂಬು ಅಭಿಮಾನದಿಂದ ಮೆರೆಸುತ್ತಿದ್ದರು. 2014ರಲ್ಲಿ ಬಸವನಗುಡಿಯ ಗಾಂಧಿಬಜಾರಿನಲ್ಲಿ ‘ಬೆಳಗೆರೆ ಬುಕ್ಸ್ ಅಂಡ್ ಕಾಫಿ’ ಪುಸ್ತಕ ಮಳಿಗೆಯನ್ನು ಆರಂಭಿಸಿದರು. ಮಳಿಗೆಯನ್ನು ಬಾಡಿಗೆಗೆ ಹಿಡಿದ ಅಗ್ರಿಮೆಂಟ್ ಪ್ರತಿಯೊಂದಿಗೆ ಒಂದು ರಾತ್ರಿ ಉಮೇಶಣ್ಣ (ಉಮೇಶ್ ಹೆಗಡೆ)ನೊಂದಿಗೆ ಬಂದವರು, “ನೀನೇ ಅದರ ಮಾಲೀಕಳು. ಸರಿಯಾಗಿ ನಿರ್ವಹಿಸು. ಶುಭ-ಲಾಭ ಪ್ರಾಪ್ತಿರಸ್ತು” ಎಂದು ಹಾರೈಸಿದರು.
“ಅಯ್ಯೋ ನಾನೀಗ ನೆಮ್ಮದಿಯಾಗಿದ್ದೇನೆ. ನನ್ನಿಂದ ಈ ಜವಾಬ್ದಾರಿಯನ್ನು ಹೊರಲಾಗುತ್ತದಾ?” ಎಂದು ಅಳುಕಿದಾಗ, “ನಾನಿರ್ತೀನಲ್ಲ, ಜತೆಯ ದುಡಿಯುವುದನ್ನು ಕಲಿ” ಎಂದು ನಕ್ಕರು. ಎಸ್. ಕುಮಾರ್ ತಮ್ಮನಂತೆ ಜತೆಗೆ ನಿಂತ. 2015ರಲ್ಲಿ
ಅದಕ್ಕೆ ವರುಷ ತುಂಬುವಷ್ಟರಲ್ಲಿ ‘ಬಿಬಿಸಿ ಪಬ್ಲಿಕೇಷನ್’ ಹುಟ್ಟುಹಾಕಿ ಅದರಲ್ಲಿ ಮೊದಲ ಪುಸ್ತಕವಾಗಿ ‘ಮಧುಮಿತಾ ಶುಕ್ಲಾ ಹತ್ಯೆ’ ಅನ್ನುವ ಪುಸ್ತಕವನ್ನು ಅದರ ಜತೆಗೆ ‘ಹಾಯ್’ನಲ್ಲಿ ಅಂಕಣ ಬರಹವಾಗಿ ಬರುತ್ತಿದ್ದ ಸ್ವಾಮಿಗೌಡರ ‘ಕೋಟೆ ಕಟ್ಟಿ ಮೆರೆದೋರೆಲ್ಲ’ ಎನ್ನುವ ಪುಸ್ತಕ, ಶಶಿಕಲಾ ವಸದ್ ಅವರ ‘ಇದ್ದೇನಯ್ಯಾ ಇಲ್ಲದಂತೆ’ ಪುಸ್ತಕ, ವೀಣಾ ಬನ್ನಂಜೆಯವರ ‘ಸತ್ಯಕಾಮರೊಂದಿಗೆ ಸಾವಿರದ ದಿನಗಳು’ ಪುಸ್ತಕ ಹಾಗೂ ರವಿಯ ‘ಉಡುಗೊರೆ’ ಪುಸ್ತಕವನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಗೊಳಿಸಿದ್ದ ಜಿ.ಎಸ್. ಯುಧಿಷ್ಠಿರ ಅವರ RAVISM ಪುಸ್ತಕವನ್ನೂ ಸಮಾರಂಭದಲ್ಲಿ ಬಿಡುಗಡೆಗೊಳಿಸಿದೆವು.
ಕಷ್ಟಗಳು ಆಗಲೂ ಇದ್ದವು, ಈಗಲೂ ಇವೆ. ಒಂದೇ ಬದಲಾವಣೆ ಎಂದರೆ ಆಗ ಬೆಟ್ಟದಂತೆ ಜತೆಯಲ್ಲಿ ರವಿ ಇದ್ದರು. ಈಗ
ತಂಪಾದ ಹಿಮನ ರೂಪದಲ್ಲಿ ನೆನಪಾಗಿದ್ದಾರೆ. “ನಾನು ಕಾರಿನ ಕುಳಿತು ಪುಸ್ತಕ ಓದುತ್ತಿರುತ್ತೇನೆ, ನೀವು ಹೋಗಿಬನ್ನಿ” ಎಂದು ಕಳಿಸಿಕೊಟ್ಟ ಶಶಿಕಲಾ ವಸದ್ ರನ್ನು ಕಾರಿನ ಬಿಟ್ಟು ಡ್ರೈವರ್ ಕೂಡ ನಮ್ಮೊಂದಿಗೇ ಹೊರಟರು. ಗೆಳತಿಯರೊಂದಿಗೆ ನಾನು-ಹಿಮ ಜೀಪು ಹತ್ತಿದೆವು. ಜತೆಯಲ್ಲಿ ಮನು ಶ್ಯಾನುಭೋಗರೊಂದಿಗೆ ಅವರ ಹುಡುಗರಿದ್ದರು. ಸಾವಿರಾರು ಜನರ ನೂಕುನುಗ್ಗಲಿ
ನಲ್ಲಿ ಹೈರಾಣಾದ ಪೊಲೀಸರ ಕೂಗಾಟ ಕಡಿಮೆಯಾಗಲಿ ಎಂದು ಅ ಕಾಯುತ್ತಾ ಕುಳಿತೆವು.
ಗೌಜು-ಗದ್ದಲ ಕಡಿಮೆಯಾದ ನಂತರ ಪಾಂಗಿತವಾಗಿ ದರುಶನ ಮಾಡಿ, ಕತ್ತಲಾವರಿಸುತ್ತಿದ್ದ ದಟ್ಟ ಕಾನನದಲ್ಲಿ ಎತ್ತರದ ಬೆಟ್ಟದ
ಮೇಲೆ ಒಬ್ಬನೇ ಉಳಿದುಹೋದ ಹಿಮಾವೃತನಾದ ಗೋಪಾಲನ ಧ್ಯಾನದಲ್ಲಿ ಕೆಳಗಿಳಿದು ಬಂದರೆ ಗಂವ್ವೆನ್ನುತ್ತಿದ್ದ ಕತ್ತಲ ನಡುವೆ ದಟ್ಟ ಕಾನನದ ಒಂಟಿ ಕಾರಿನಲ್ಲಿ ಒಬ್ಬರೇ ಉಳಿದುಹೋದ ಶಶಿಕಲಾ ವಸದ್ ಅವರನ್ನು ಕಂಡು ಎದೆ ಧಸಕ್ಕೆಂದು ಹೋಯಿತು.