Monday, 25th November 2024

ಕಡಲಿನಲ್ಲಿ ಅಲೆಗಳ ಅಬ್ಬರ: ಸೆ.10ರ ವರೆಗೆ ಜಲಸಾಹಸ ಕ್ರೀಡೆಗಳಿಗೆ ನಿಷೇಧ

ಮಂಗಳೂರು : ರಾಜ್ಯದಲ್ಲಿ ಭಾರೀ ಮಳೆಯ ಅರ್ಭಟಕ್ಕೆ ಕಡಲಿನಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ನೀರಿಗೆ ಇಳಿಯದಂತೆ ಹಾಗೂ ದೂರದಿಂದಲೆ ಸಮುದ್ರ ವೀಕ್ಷಣೆ ಮಾಡಲು ಪ್ರವಾಸಿಗರಿಗೆ ಮಂಗಳೂರು ಬೀಚ್‌ ಅಭಿವೃದ್ಧಿ ಸಮಿತಿಯಿಂದ ಅವಕಾಶ ನೀಡಲಾಗಿದೆ

ಜಿಲ್ಲಾಡಳಿತ ಪ್ರತೀ ವರ್ಷದಂತೆ ಮೇ 15ರಿಂದ ಸೆ.15ರ ವರೆಗೆ ಯಾವುದೇ ಜಲಸಾಹಸ ಕ್ರೀಡೆಗಳಿಗೆ ನಿಷೇಧ ಹೇರುತ್ತದೆ. ಈ ಸಮಯದಲ್ಲಿ ಯಾವುದೇ ವಾಟರ್‌ನ್ಪೋರ್ಟ್ಸ್ ನಡೆಸಲು ಅನುಮತಿ ಇರುವುದಿಲ್ಲ.

ಮಳೆಗಾಲದಲ್ಲಿ ಕಡಲ ಅಬ್ಬರ ಹೆಚ್ಚಾಗಿರುವುದರಿಂದ ಬೀಚ್‌ ಅಭಿವೃದ್ಧಿ ಸಮಿತಿ ಪ್ರವಾಸಿಗರು ನೀರಿಗೆ ಇಳಿಯದಂತೆ ಪ್ರತಿವರ್ಷ ಮಳೆಗಾಲದಲ್ಲಿ ಬೀಚ್‌ನ ಉದ್ದಕ್ಕೂ ರಿಫ್ಲೆಕ್ಟೆಡ್‌ ಪಟ್ಟಿ ಮತ್ತು ಫಿಶ್‌ನೆಟ್‌ ತಡೆಬೇಲಿಯನ್ನು ಕಟ್ಟಿ ಮುನ್ನೆಚ್ಚರಿಕೆ ವಹಿಸುತ್ತಿದೆ.

ಹೀಗಾಗಿ ಪ್ರವಾಸಿಗರಿಗೆ ದೂರದಿಂದಲೇ ಬೀಚ್‌ ನೋಡಿಕೊಂಡು ಹೋಗಬೇಕಾದ ಅನಿ ವಾರ್ಯತೆ ಇದೆ. ಮುಂದೆ ಸಮುದ್ರದ ನೀರಿನ ಒತ್ತಡವನ್ನು ನೋಡಿಕೊಂಡು ನೀರಿಗಿಳಿ ಯಲು ಬಿಡಲಾಗುವುದು ಎಂದು ಬೀಚ್‌ ನಿರ್ವಾಹಕ ಸುದೇಶ್‌ ಶೆಟ್ಟಿ ಅವರು ತಿಳಿಸಿ ದ್ದಾರೆ.